Advertisement

ಏರಿಂಡಿಯಾ ನೌಕರರಿಗೆ ಮೇ ತಿಂಗಳ ಸಂಬಳ ಇನ್ನೂ ಸಿಕ್ಕಿಲ್ಲ : ವರದಿ

11:29 AM Jun 07, 2018 | Team Udayavani |

ಹೊಸದಿಲ್ಲಿ : ತನ್ನ ಡಿಸ್‌-ಇನ್‌ವೆಸ್ಟ್‌ಮೆಂಟ್‌ ಪ್ಲಾನ್‌ ಗೆ (ಬಂಡವಾಳ ಮಾರಾಟ ಯೋಜನೆಗೆ) ಒಬ್ಬನೇ ಒಬ್ಬ ಬಿಡ್ಡರ್‌ನನ್ನು ಕಾಣಲು ಕೂಡ ವಿಫ‌ಲವಾಗಿರುವ ಏರಿಂಡಿಯಾ ಇದೀಗ ತನ್ನ ನೌಕರರ ಮೇ ತಿಂಗಳ ಸಂಬಳ ಪಾವತಿಯನ್ನು ವಿಳಂಬಿಸಿದೆ.

Advertisement

‘ನಮಗೆ ನಮ್ಮ ಮೇ ತಿಂಗಳ ಸಂಬಳ ಯಾವಾಗ ಸಿಕ್ಕೀತು ಎನ್ನುವ ಬಗ್ಗೆ ನಮ್ಮ ಸಂಸ್ಥೆಯ ಆಡಳಿತೆಯಿಂದ ಈ ತನಕ ಯಾವುದೇ ಮಾಹಿತಿ ಇಲ್ಲ’ ಎಂದು ಏರಿಂಡಿಯದ ಪ್ರಧಾನ ಕಾರ್ಯಾಲಯದ ಸಿಬಂದಿಯೋರ್ವರು ಹೇಳಿರುವುದನ್ನು ಎಎನ್‌ಐ ವರದಿ ಮಾಡಿದೆ.

ಏರಿಂಡಿಯಾ ಈ ವರ್ಷ ಎಪ್ರಿಲ್‌ನಿಂದ ತೀವ್ರ ನಗದು ಹಣದ ಕೊರತೆಯನ್ನು ಎದುರಿಸುತ್ತಿದೆ; ಇದರ ಪರಿಣಾಮವಾಗಿ ಅದು ತನ್ನ ನೌಕರರ ವೇತನ ಪಾವತಿಯನ್ನು ವಿಳಂಬಿಸುತ್ತಿದೆ. 

ಹಾಗಿದ್ದರೂ ಏರಿಂಡಿಯಾ ತನ್ನ ನೌಕರರ ವೇತನವನ್ನು 30 ಅಥವಾ 31ರಂದೇ ಪಾವತಿಸುತ್ತಾ ಬಂದಿದೆ. ಮೇ 31ರಂದು ಕೇಂದ್ರ ಸರಕಾರ ನಷ್ಟದಲ್ಲಿರುವ ಏರಿಂಡಿಯಾದ ಡಿಸ್‌ ಇನ್‌ವೆಸ್ಟ್‌ಮೆಂಟ್‌ ಪ್ಲಾನ್‌ಗೆ ಒಬ್ಬನೇ ಒಬ್ಬ ಬಿಡ್ಡರ್‌ ಕೂಡ ಮುಂದೆ ಬಂದಿಲ್ಲ ಎಂದು ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next