Advertisement

ವಾಯುಪಡೆ ಅಧಿಕಾರ ವಹಿಸಿಕೊಂಡ ಭದೌರಿಯಾ

10:11 AM Oct 02, 2019 | Team Udayavani |

ಹೊಸದಿಲ್ಲಿ: ವಾಯುಪಡೆ ಮುಖ್ಯಸ್ಥ ಬಿ.ಎಸ್‌. ಧನೋವಾ ನಿವೃತ್ತ ರಾದ ಹಿನ್ನೆಲೆಯಲ್ಲಿ ಸೋಮವಾರ ಏರ್‌ ಮಾರ್ಷಲ್‌ ರಾಕೇಶ್‌ ಕುಮಾರ್‌ ಸಿಂಗ್‌ ಭದೌರಿಯಾ ವಾಯುಪಡೆಯ 26ನೇ ಮುಖ್ಯಸ್ಥರಾಗಿ ಅಧಿಕಾರ ವಹಿಸಿ ಕೊಂಡರು. ಇವರು ವಾಯುಪಡೆ ಸಿಬಂದಿ ವಿಭಾಗದ ಮುಖ್ಯಸ್ಥರಾಗಿದ್ದರು. ಅಧಿಕಾರ ವಹಿಸಿಕೊಳ್ಳುವುದಕ್ಕೂ ಮೊದಲು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮರಿಗೆ ನಮನ ಸಲ್ಲಿಸಿದರು.

Advertisement

ವಿಶಿಷ್ಟ ಸಾಧನೆಗಳು
ರಫೇಲ್‌ ಯುದ್ಧ ವಿಮಾನವನ್ನು ಚಲಾಯಿಸಿದ ಮೊದಲ ಭಾರತೀಯ ವಾಯುಪಡೆ ಅಧಿಕಾರಿ
ಕಳೆದ ಜುಲೈನಲ್ಲಿ ಫ್ರಾನ್ಸ್‌ ಮತ್ತು ಭಾರತದ ವಾಯುಪಡೆ ಕವಾಯತಿನಲ್ಲಿ ರಫೇಲ್‌ ಹಾರಾಟ
 ಫ್ರಾನ್ಸ್‌ನಿಂದ ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಅಂತಿಮ ರೂಪ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅಧಿಕಾರಿ
 ಮೊದಲ ರಫೇಲ್‌ ಯುದ್ಧ ವಿಮಾನಕ್ಕೆ ಇವರ ಹೆಸರಿನ ಆದ್ಯಕ್ಷರ ನಾಮಕರಣ – ಆರ್‌ಬಿ 01
 1999ರಲ್ಲಿ ಕಾರ್ಗಿಲ್‌ ಯುದ್ಧದಲ್ಲಿ ಜಿಪಿಎಸ್‌ ಬಳಸಿ ಜಾಗ್ವಾರ್‌ ಯುದ್ಧ ವಿಮಾನದ ಮೂಲಕ ಬಾಂಬ್‌ ದಾಳಿ ನಡೆಸುವ ವಿಶಿಷ್ಟ ವಿಧಾನ ಕಂಡುಹಿಡಿದ ಖ್ಯಾತಿ

ಎಲ್ಲದಕ್ಕೂ ನಾವು ಸನ್ನದ್ಧ
ರಫೇಲ್‌ ಅತ್ಯಂತ ಸಮರ್ಥ ಯುದ್ಧ ವಿಮಾನ. ನಮ್ಮ ಕಾರ್ಯ ನಿರ್ವಹಣೆ ಸಾಮರ್ಥ್ಯದಲ್ಲಿ ಇದು ಮಹತ್ವದ ಬದಲಾವಣೆಗೆ ಕಾರಣವಾಗಬಲ್ಲದು. ಸುಖೋಯ್‌ ಹಾಗೂ ಇತರ ಯುದ್ಧ ವಿಮಾನಗಳ ಜತೆಗೆ ಇದನ್ನು ಬಳಸಿದಾಗ ನಮ್ಮ ಶಕ್ತಿ ಸಾಮರ್ಥ್ಯ ಹೆಚ್ಚಲಿದೆ. ಇದು ಪಾಕಿಸ್ಥಾನ ಮತ್ತು ಚೀನಗಿಂತ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ನಾವು ಯಾವುದೇ ಸನ್ನಿವೇಶಕ್ಕೂ ಸಿದ್ಧರಾಗಿದ್ದೇವೆ. ಸರಕಾರ ಸೂಚಿಸಿದ ಕೂಡಲೇ ಯಾವ ಕಾರ್ಯಾಚರಣೆಯನ್ನು ಬೇಕಿದ್ದರೂ ಮಾಡುತ್ತೇವೆ.

ಭದೌರಿಯಾ ಕುರಿತು…
ಕಳೆದ ತಿಂಗಳು ಸರಕಾರದಿಂದ ನೇಮಕ
ಎರಡು ವರ್ಷಗಳವರೆಗೆ ವಾಯುಪಡೆ ನೇತೃತ್ವ
ಪುಣೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಅಧ್ಯಯನ ನಡೆಸಿದ್ದ ಭದೌರಿಯಾ
4250 ಗಂಟೆಗಳ ವಿಮಾನ ಹಾರಾಟ ಅನುಭವ
26 ವಿಧದ ವಿಮಾನ ಹಾರಾಟ ನಡೆಸಿದ ಗರಿಮೆ

ಭದೌರಿಯಾಗೆ ಸಿಕ್ಕ ಪುರಸ್ಕಾರಗಳು
 ಅತಿ ವಿಶಿಷ್ಟ ಸೇವಾ ಪದಕ
 ವಾಯು ಸೇನಾ ಪದಕ
 ಪರಮ ವಿಶಿಷ್ಟ ಸೇವಾ ಪದಕ

Advertisement
Advertisement

Udayavani is now on Telegram. Click here to join our channel and stay updated with the latest news.

Next