Advertisement

ಐಂದ್ರಿತಾಗೆ ನ್ಯೂಸ್‌ ಚಾನಲ್‌ಗ‌ಳ ಮೇಲೆ ನಂಬಿಕೆಯೇ ಹೊರಟು ಹೋಗಿದೆಯಂತೆ!

04:09 PM Oct 04, 2017 | Team Udayavani |

ಟಿಟಿಡಿ ಮಾಜಿ ಅಧ್ಯಕ್ಷ ಆದಿಕೇಶವುಲು ಅವರ ಮೊಮ್ಮಗ ಗೀತಾ ವಿಷ್ಣು ಕಾರು ಅಪಘಾತ ಪ್ರಕರಣದಲ್ಲಿ ದಿಗಂತ್‌, ಪ್ರಜ್ವಲ್‌ ಮತ್ತು ಅಂಬರೀಶ್‌ ಅವರ ಮಗ ಅಭಿಷೇಕ್‌ ಹೆಸರುಗಳನ್ನು ನ್ಯೂಸ್‌ ಚಾನಲ್‌ಗ‌ಳು ಸೇರಿಸಿದ್ದಿಕ್ಕೆ ಚಿತ್ರರಂಗದ ವಲಯದಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.

Advertisement

ಈಗ ಅದಕ್ಕೆ ನಟಿ ಐಂದ್ರಿತಾ ರೇ ಸಹ ಧ್ವನಿಗೂಡಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಐಂದ್ರಿತಾ ರೇ, “ಟಿಆರ್‌ಪಿಗೋಸ್ಕರ ಸುಮ್ಮನೆ ಕಲಾವಿದರನ್ನು ಯಾವುದೋ ಪ್ರಕರಣಕ್ಕೆ ಎಳೆದು ತರುವುದು ಸರಿಯಲ್ಲ. ಈ ಕುರಿತು ಯಾವುದೇ ಸಾಕ್ಷಿಗಳಿಲ್ಲ, ಯಾವುದೇ ಫ‌ುಟೇಜ್‌ ಇಲ್ಲ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪೊಲೀಸ್‌ ಕಂಪ್ಲೇಂಟ್‌ ಸಹ ಆಗಿಲ್ಲ.

ಹೀಗಿರುವಾಗ ಕಲಾವಿದರನ್ನು ಹೀಗೆ ಎಳೆದು ತರುವುದು ಸರಿಯಲ್ಲ. ಇದಕ್ಕಿಂತ ಕೆಳಗೆ ಇಳಿಯುವುದಕ್ಕೆ ಸಾಧ್ಯವೇ ಇಲ್ಲ. ಕನ್ನಡ ನ್ಯೂಸ್‌ ಚಾನಲ್‌ಗ‌ಳ ಮೇಲೆ ನಂಬಿಕೆಯೇ ಹೊರಟು ಹೋಗಿದೆ’ ಎಂದು ಟ್ವೀಟ್‌ ಮಾಡಿದ್ದಾರೆ ಐಂದ್ರಿತಾ. ಐಂದ್ರಿತಾ ಒಬ್ಬರೇ ಇಲ್ಲ.

ಇದಕ್ಕೂ ಮುನ್ನ ಕನ್ನಡ ಚಿತ್ರರಂಗದ ಹಲವು ಕಲಾವಿದರು, ಪ್ರಜ್ವಲ್‌ ಮತ್ತು ದಿಗಂತ್‌ ಅವರ ಹೆಸರನ್ನು ಅಪಘಾತಕ್ಕೆ ತಳಕು ಹಾಕುವುದರ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ನಟರಾದ “ನೆನಪಿರಲಿ’ ಪ್ರೇಮ್‌, ವಿಜಯ್‌ ರಾಘವೇಂದ್ರ, ಅಕುಲ್‌ ಬಾಲಾಜಿ, ಜಗ್ಗೇಶ್‌ ಸೇರಿದಂತೆ ಹಲವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next