ಔರಂಗಾಬಾದ್ (ಮಹಾರಾಷ್ಟ್ರ): ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲು ಆಕ್ಷೇಪ ವ್ಯಕ್ತ ಪಡಿಸಿ ಬಿಜೆಪಿ ಸದಸ್ಯರಿಂದ ಥಳಿತಕ್ಕೊಳಾಗಿದ್ದ ಎಐಎಂಐಎಂ ಕಾರ್ಪೋರೇಟರ್ ಸಯೀದ್ ಮತೀನ್ ಅವರನನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
ಅಟಲ್‌ಗೆ ಅಗೌರವ ತೋರಿ ಮತೀನ್ ವರ್ತಿಸಿದ್ದರಿಂದ ರೊಚ್ಚಿಗೆದ್ದ ಬಿಜೆಪಿ ಮತ್ತು ಶಿವಸೇನೆ ಸದಸ್ಯರು ಸಭೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದರು.
ಧಾರ್ಮಿಕ ಭಾವನೆಗೆ ಧಕ್ಕೆ ತಂದುದು ಮತ್ತು ದಂಗೆಗೆ ಪ್ರೇರಣೆಯಾದ ಆರೋಪದಲ್ಲಿ ಮತೀನ್‌ರನ್ನು ಪೊಲೀಸರು ಬಂಧಿಸಿದ್ದಾರೆ.
ಮತೀನ್‌ರೊಂದಿಗೆ ಎಐಎಂಐಎಂ ಜಿಲ್ಲಾಧ್ಯಕ್ಷ ಜಾವೇದ್ ಖುರೇಷಿ ಅವರನ್ನೂ ಪೊಲೀಸರು ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಬಂಧಿಸಿದ್ದಾರೆ.
ಥಳಿಸಿದ ಬಿಜೆಪಿಯ ಮೂವರು ಕಾರ್ಪೋರೇಟರ್‌ಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.