Advertisement
-ಹೀಗೆಂದು ಹೆಮ್ಮೆಯಿಂದ ಹೇಳಿಕೊಂಡದ್ದು ದಾಳಿಯಲ್ಲಿ ಪಾಲ್ಗೊಂಡಿದ್ದ ವಾಯುಪಡೆಯ ಪೈಲಟ್‌ಗಳು. ತಮ್ಮ ಹೆಸರು ಬಹಿರಂಗಪಡಿಸಲು ಇಚ್ಛಿಸದ ಈ ಪೈಲಟ್‌ಗಳು ಅಂದಿನ ದಾಳಿಯ ವಿವರವನ್ನು ಬಿಚ್ಚಿಟ್ಟಿದ್ದಾರೆ. ಫೆ.14ರಂದು ಪುಲ್ವಾಮಾ ದಾಳಿಯಲ್ಲಿ 40 ಮಂದಿ ಸಿಆರ್‌ಪಿಎಫ್ ಯೋಧರ ಹತ್ಯೆಗೆ ಪ್ರತೀಕಾರವಾಗಿ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿರುವ ಬಾಲಕೋಟ್‌ನಲ್ಲಿದ್ದ ಉಗ್ರ ಸಂಘಟನೆಯ ಶಿಬಿರಗಳನ್ನು ನಿರ್ದಾಕ್ಷಿಣ್ಯವಾಗಿ ಫೆ.27ರಂದು ನಾಶಗೊಳಿಸಲಾಗಿತ್ತು.
8 ವರ್ಷಗಳಲ್ಲಿಯೇ ಮೊದಲ ಬಾರಿಗೆ ಪಾಕಿಸ್ತಾನದ ನೆಲದೊಳಕ್ಕೆ ನುಗ್ಗಿ ನಡೆಸಿದ ದಾಳಿ ಬಗ್ಗೆ ಮತ್ತೂಬ್ಬ ಸ್ಕ್ವ್ಯಾಡ್ರನ್ ಲೀಡರ್ ವಿವರ ನೀಡಿದರು. ‘ಗಡಿ ನಿಯಂತ್ರಣ ರೇಖೆಯ ಮೂಲಕ ಹಲವು ಯುದ್ಧ ವಿಮಾನಗಳನ್ನು ನುಗ್ಗಿಸಿದೆವು. ಕೇವಲ 2 ದಿನಗಳ ಹಿಂದಷ್ಟೇ ದಾಳಿ ಬಗ್ಗೆ ನಮಗೆ ಸೂಚನೆ ಬಂದಿತ್ತು.’ ಎಂದಿದ್ದಾರೆ. ‘ಫೆಬ್ರವರಿ 25ರಂದು ಬೆಳಗ್ಗೆ 4 ಗಂಟೆಗೆ ಮಿರಾಜ್ 2000 ಯುದ್ಧ ವಿಮಾನಕ್ಕೆ ಸ್ಪೈಸ್ 2000 ಮಿಸೈಲ್ಗಳನ್ನು ಲೋಡ್ ಮಾಡಲಾಯಿತು. ಉಗ್ರ ಸಂಘಟನೆಯ ತರಬೇತಿ ಶಿಬಿರಗಳು ಇರುವ ಸ್ಥಳವನ್ನು ಏರ್‌ಕ್ರಾಫ್ಟ್ಗೆ ಅಪ್‌ಲೋಡ್ ಮಾಡಲಾಯಿತು. ಬೆಳಗ್ಗೆ 2 ಗಂಟೆಗೆ ನಾವು ಹಾರಾಟ ಶುರು ಮಾಡಿವು’ ಎಂದಿದ್ದಾರೆ.
Related Articles
ಕಠಿಣಾತಿ ಕಠಿಣ ಕಾರ್ಯಾಚರಣೆ ಹೊರತಾಗಿಯೂ ಐಎಎಫ್ನ ಹಿರಿಯ ಅಧಿಕಾರಿಗಳ ಫೆ.26ರ ದಿನಚರಿಯಲ್ಲಿ ಬದಲಾಗಲಿಲ್ಲ ಎಂದು ಐತಿಹಾಸಿಕ ಸಾಧನೆಯ ಚಿತ್ರಣ ನೀಡಿದ ಸ್ಕ್ವಾಡರ್ನ್ ಲೀಡರ್ ಹೇಳುತ್ತಿದ್ದಂತೆ, ಅವರ ಮಾತುಗಳಲ್ಲಿದ್ದ ಹೆಮ್ಮೆ ಗೋಚರಿಸಿತು. ಯಾರಿಗೂ ಅನುಮಾನ ಬಾರದೇ ಇರಲಿ ಎಂದು ದೇಶದ ಪೂರ್ವ ಭಾಗಕ್ಕೆ ತೆರಳಿ ಅಲ್ಲಿಂದ ಕಾಶ್ಮೀರಕ್ಕೆ ಹೋದೆವು ಎಂದಿದ್ದಾರೆ. ಉಗ್ರ ಸಂಘಟನೆಯ ತರಬೇತಿ ಶಿಬಿರ ನಾಶ ಮಾಡಿದ ಬಳಿಕ ಒಂದರ ಮೇಲೊಂದು ಸಿಗರೇಟು ಸೇದಿ ನಿರಾಳರಾದೆವು ಎಂದಿದ್ದಾರೆ ಪೈಲಟ್‌ಗಳು.
Advertisement