Advertisement

ಹರಿಣಗಳಿಗೆ ಬಿಗ್ ಶಾಕ್: ತೃತೀಯ ಪಂದ್ಯದಿಂದ ಏಡನ್ ಮಾಕ್ರಮ್ ಔಟ್

10:34 AM Oct 18, 2019 | Team Udayavani |

ರಾಂಚಿ: ಈಗಾಗಲೇ ಸರಣಿಯ ಮೊದಲೆರಡು ಪಂದ್ಯಗಳನ್ನು ಕಳೆದುಕೊಂಡಿರುವ ಪ್ರವಾಸಿ ದಕ್ಷಿಣ ಆಫ್ರಿಕಾಗೆ ಮತ್ತೊಂದು ಆಘಾತ ಎದುರಾಗಿದೆ. ರಾಂಚಿಯಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯಕ್ಕೆ ಆರಂಭಿಕ ಆಟಗಾರ ಏಡನ್ ಮಾಕ್ರಮ್ ಅಲಭ್ಯರಾಗಲಿದ್ದಾರೆ.

Advertisement

ಪುಣೆಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್ ನಲ್ಲಿ ಔಟಾದ ರೀತಿಯಿಂದ ಕೋಪಗೊಂಡಿದ್ದ ಮಾಕ್ರಮ್ ತನಗೆ ತಾನೇ ಗಾಯಗೊಳಿಸಿದ್ದರು. ಇದರಿಂದಾಗಿ ಮಾಕ್ರಮ್ ಮಣಿಗಂಟಿನ ಮೂಳೆಗಳು ಮುರಿದಿದ್ದು, ಹೆಚ್ಚಿನ ಚಿಕಿತ್ಸೆಗೆ ಮಾಕ್ರಮ್ ತವರಿಗೆ ಪ್ರಯಾಣ ಬೆಳೆಸಬೇಕಾಗಿದೆ.

ಈಗಾಗಲೇ ಸರಣಿ ಸೋತು ಹತಾಶರಾಗಿರುವ ಹರಿಣಗಳ ಬಳಿ ಯಾವುದೇ ಹೆಚ್ಚುವರಿ ಆರಂಭಿಕ ಆಟಗಾರನಿಲ್ಲ. ತಂಡದಲ್ಲಿ ಹೆಚ್ಚುವರಿಯಾಗಿ ಜುಬೈರ್ ಹಮ್ಜಾ ಮತ್ತು ಹೆನ್ರಿಕ್ ಕ್ಲಾಸೆನ್ ಇದ್ದು, ಅವರಿಬ್ಬರೂ ಮಧ್ಯಮ ಕ್ರಮಾಂಕದ ಆಟಗಾರರು. ಡುಪ್ಲೆಸಿಸ್ ಬಳಗದ ಬಳಿ ಈಗ ಇರುವ ಆಯ್ಕೆಯೆಂದರೆ ತೆಂಬ ಬವುಮ. ಆದರೆ ಬವುಮಾ ಆಡಿರುವ 38 ಟೆಸ್ಟ್ ಪಂದ್ಯಗಳಲ್ಲಿ ಇನ್ನಿಂಗ್ಸ್ ಆರಂಭಿಸಿರುವುದು ಒಮ್ಮೆ ಮಾತ್ರ!

ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯ ರಾಂಚಿಯ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಅಕ್ಟೋಬರ್ 19ರಿಂದ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next