ವಿಜಯಪುರ: ಪಿಂಚಣಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ನೌಕರರ ಸಂಘದಿಂದ ಮಾ. 4ರಂದು ಅನುದಾನಿತ ಶಾಲಾ-ಕಾಲೇಜುಗಳನ್ನು ಬಂದ್ ಮಾಡಿ ಪ್ರತಿಭಟಿಸಲು ನಿರ್ಧರಿಸಲಾಗಿದೆ.
ಈ ಕುರಿತು ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಪುತ್ರ ಕಿರನಳ್ಳಿ, ರಾಜ್ಯದ ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ಪಿಂಚಣಿ ಹಾಗೂ ವಿವಿಧ ಬೇಡಕೆಗಳ ಈಡೇರಿಕೆಗಾಗಿ ಮಾ. 4ರಂದು ಶಾಲೆ-ಕಾಲೇಜು ಸ್ಥಗಿತಗೊಳಿಸಿ ಬೆಂಗಳೂರನಲ್ಲಿ ವಿಧಾನಸೌಧ ಚಲೋ ಹಾಗೂ ಅನಿರ್ದಿಷ್ಟ ಅವಧಿಯ ಅಹೋರಾತ್ರಿ ಧರಣಿ ಆರಂಭಿಸಲು ನಿರ್ಧರಿಸಿದೆ ಎಂದು ವಿವರಿಸಿದ್ದಾರೆ.
ಪ್ರಮುಖ ಬೇಡಿಕೆಗಳಾದ 2006ರ ನಂತರ ಸೇವೆಗೆ ಸೇರಿದ ನೌಕರರಿಗೆ ಹಳೆಯ ನಿಶ್ಚಿತ ನಿಶ್ಚಿತ ಪಿಂಚಣಿ ಹಾಗೂ ಕಾಲ್ಪನಿಕ ವೇತನ ಜಾರಿ ಮಾಡಬೇಕು. ಮಾನ್ಯತೆ ನವೀಕರಣ ಸರಳಿಕರಿಸಬೇಕು. ಅನುದಾನಿತ ಶಾಲಾ ಮಕ್ಕಳಿಗೂ ಸರ್ಕಾರಿ ಶಾಲೆಗಳ ಮಕ್ಕಳಿಗೆ ನೀಡುವ ಎಲ್ಲ ಸೌಲಭ್ಯ ನೀಡಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರಲು ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.
ಶಿವಲಿಂಗ ಉಮ್ಮರಗಿ, ಪಿಂಚಣಿ ವಂಚಿತ ನೌಕರರ ಸಂಘದ ಅಧ್ಯಕ್ಷ ಅರವಿಂದ ತೇಲಿ, ಪ್ರೌಢಶಾಲಾ ಮಹಾಮಂಡಳದ ಅಧ್ಯಕ್ಷ ಎಂ.ಜಿ.ಉಪ್ಪಾರ, ಮಾಧ್ಯಮಿಕ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಎಚ್.ಬಿರಾದಾರ, ಎಸ್.ಎಂ.ಬಿರಾದಾರ, ಪಿ.ಎ.ಪಾಟೀಲ, ವೆಂಕಟೇಶ ಟಿ, ಎಸ್.ಎಂ.ಕಂಬಾರ, ಎಸ್. ಎಂ.ಜಮಾದಾರ, ಬಿ.ಬಿ.ಚೌಧರಿ, ಸಿ.ಹೆಚ್.ದೇವರಮನಿ, ಸಿ.ಎಸ್.ವಾಲಿಕಾರ, ಎಂ.ಐವ.ಬಡಿಗೇರ, ಡಿ.ಎಂ.ಚೌಹಾಣ, ಬಿ.ಬಿ. ಪಾಟೀಲ, ಎಸ್.ಬಿ.ಹಳದಮಠ, ಎಸ್.ಎಸ್.ರೊಟ್ಟಿ, ಎ.ಆರ್.ಹತ್ತಿ, ಎಂ.ಬಿ.ಹೊಸೂರ, ಎಂ.ಎಸ್.ರೂಗಿ, ಎಸ್. ಎಸ್.ಸಂಗಮ, ಆರ್.ಎಲ್.ನಾಯಕ, ಆರ್.ಎಸ್.ಮಸಳಿ, ಪಿ.ಆರ್.ಬಿರಾದಾರ, ಮಲ್ಲಪ್ಪ ಬಸವರಾಜ ಎಂ.ಕೆ.ಕುಲಕರ್ಣಿ, ಡಿ.ಸಿ.ನಾಗಠಾಣ, ಎಸ್.ಎಸ್.ಕುಂಬಾರ, ಬಿ.ಎ.ಇವಣಿ, ಎಸ್.ಎಂ.ಮಲಗೊಂಡ, ಎಮ್.ಕೆ.ನಾಯಕ, ಆದೇಶ ಎ.ಕೆ.ರಾಠೊಡ, ಸುಭಾಷ್ ಪಾಟೀಲ ಇದ್ದರು. ಶಿವಲಿಂಗ ಉಮ್ಮರಗಿ ಸ್ವಾಗತಿಸಿದರು. ಬುಳ್ಳಪ್ಪ ನಿರೂಪಿಸಿದರು.