Advertisement

ಹಳ್ಳಿಗಳಿಂದ ನೆರವಿನ ಮಹಾಪೂರ

10:42 AM Aug 13, 2019 | Suhan S |

ಹೊನ್ನಾಳಿ: ನೆರೆ ಸಂತ್ರಸ್ತರಿಗೆ ತಾಲೂಕಿನ ವಿವಿಧ ಗ್ರಾಮಗಳಿಂದ ಪರಿಹಾರದ ಮಹಾಪೂರವೇ ಹರಿದು ಬರುತ್ತಿದೆ.

Advertisement

ನೆರೆ ಸಂತ್ರಸ್ತರಿಗೆ ಅತ್ಯವಶ್ಯವಾಗಿರುವ ಅಕ್ಕಿ, ರೊಟ್ಟಿ, ಚಟ್ನಿಪುಡಿ, ಬಟ್ಟೆಗಳು ಸೇರಿದಂತೆ ಇತರ ಉಪಯುಕ್ತ ವಸ್ತುಗಳು ಗ್ರಾಮಗಳಿಂದ ಗ್ರಾಮಸ್ಥರು ತಾಲೂಕು ಆಡಳಿತಕ್ಕೆ ತಂದು ಒಪ್ಪಿಸುತ್ತಿದ್ದಾರೆ.

ತಾಲೂಕಿನ ನರಸಗೊಂಡನಹಳ್ಳಿ ಗ್ರಾಮದಿಂದ 30 ಕ್ವಿಂಟಲ್ ಅಕ್ಕಿ, ಎರಡುವರೆ ಕ್ವಿಂಟಲ್ ಬೇಳೆ, ಹೊಸ ಬಟ್ಟೆಗಳು, ರೊಟ್ಟಿ, ಚಟ್ನಿಪುಡಿ ಹಾಗೂ ಬಿಸ್ಕತ್ತುಗಳನ್ನು ಟ್ರ್ಯಾಕ್ಟರ್‌ನಲ್ಲಿ ಹಾಕಿಕೊಂಡು ಬಂದು ತಾಲೂಕು ಆಡಳಿತಕ್ಕೆ ಒಪ್ಪಿಸಿದ್ದಾರೆ. ಕಮ್ಮಾರಗಟ್ಟೆ ಗ್ರಾಮದಿಂದ 4 ಕ್ವಿಂಟಲ್ ಅಕ್ಕಿ, ರೊಟ್ಟಿ, ಚಟ್ನಿಪುಡಿ, ಬಟ್ಟೆ, ಬಿಸ್ಕತ್ತುಗಳನ್ನು ತಾಲೂಕು ಆಡಳಿತಕ್ಕೆ ನೀಡಿದ್ದಾರೆ.

ಸಾಸ್ವೆಹಳ್ಳಿ ಗ್ರಾಮದವರು ಅಕ್ಕಿ, ರೊಟ್ಟಿ ತಂದು ಕೊಟ್ಟಿದ್ದಾರೆ. ರೊಟ್ಟಿ, ಚಟ್ನಿಪುಡಿ ಹಾಗೂ ಬಿಸ್ಕತ್ತುಗಳನ್ನು ಆದಷ್ಟು ಬೇಗನೆ ಕಳಿಸುವ ವ್ಯವಸ್ಥೆ ಮಾಡಲಾಗುತ್ತದೆ. ಅಕ್ಕಿ ಸಂಗ್ರಹವನ್ನು ನೋಡಿ ಕಳಿಸಿಕೊಡಲಾಗುವುದು ಎಂದು ಎಂದು ತಹಶೀಲ್ದಾರ್‌ ತುಷಾರ್‌ ಬಿ.ಹೊಸೂರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next