ಶ್ರೀನಗರ/ಜಮ್ಮು: ಉಗ್ರರಿಗೆ ಬೆಂಬಲ ನೀಡುವವರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಎಂಟು ಜಿಲ್ಲೆಗಳಲ್ಲಿ ಎನ್ಐಎ ಶುಕ್ರವಾರ ದಾಳಿ ನಡೆಸಿದೆ. ಶ್ರೀನಗರ, ಬುದ್ಗಾಂವ್, ಪುಲ್ವಾಮಾ, ಶೋಪಿಯಾನ್, ಆವಂತಿಪೊರ, ಅನಂತನಾಗ್, ಕುಪ್ವಾರಗಳಲ್ಲಿ ದಾಳಿ ನಡೆಸಿ ಶೋಧ ನಡೆಸಲಾಗಿದೆ. ನಿಷೇಧಿತ ಜಮಾತ್-ಇ-ಇಸ್ಲಾಮಿ ಮತ್ತು ಅದಕ್ಕೆ ನೆರವಾಗುವವರು ಎಂದು ಶಂಕಿಸಲಾಗಿರುವವರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಈ ಸಂಘಟನೆ ನಡೆಸಿದ ಕುಕೃತ್ಯಗಳ ಬಗ್ಗೆ ಮಾಹಿತಿ ನಡೆಸುವ ನಿಟ್ಟಿನಲ್ಲಿ ಶೋಧ ನಡೆಸಲಾಗಿದೆ. ಇದಲ್ಲದೆ, 2021 ಫೆ.5ರಂದು ತನಿಖಾ ಸಂಸ್ಥೆ ಉಗ್ರ ಸಂಘಟನೆಗಳಿಗೆ ವಿತ್ತೀಯ ನೆರವು ನೀಡಿದ ಪ್ರಕರಣ ವಿಚಾರದಲ್ಲೂ ಶೋಧ ನಡೆಸಲಾಗಿದೆ.
Advertisement
ಉಗ್ರರಿಗೆ ನೆರವು: ಕಾಶ್ಮೀರದಲ್ಲಿ NIA ದಾಳಿ
11:24 PM May 20, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.