Advertisement

AICF ವಿರುದ್ಧ ಕರುಣ್‌ ದುಗ್ಗಲ್‌ ಲೀಗಲ್‌ ನೊಟೀಸ್‌

12:25 AM Jun 18, 2024 | Team Udayavani |

ಹೊಸದಿಲ್ಲಿ: ಮಾಜಿ ಚೆಸ್‌ ಆಟಗಾರ, ಈಗ ಶಾಲಾ ಶಿಕ್ಷಕರಾಗಿರುವ ಕರುಣ್‌ ದುಗ್ಗಲ್‌ ಅಖಿಲ ಭಾರತ ಚೆಸ್‌ ಫೆಡರೇಶನ್‌ಗೆ (ಎಐಸಿಎಫ್) ಲೀಗಲ್‌ ನೊಟೀಸ್‌ ಜಾರಿ ಮಾಡಿ ದ್ದಾರೆ. ಚೆಸ್‌ ನಿಯಮ ಉಲ್ಲಂ ಸಿರುವ ಆರೋಪದಡಿ ಯಲ್ಲಿ ಎಲೋ ರೇಟಿಂಗ್‌ ಪಾಯಿಂಟ್‌ ತೆಗೆದು ಹಾಕಿರುವ ಎಐಸಿಎಫ್ ವಿರುದ್ಧ ನೊಟೀಸ್‌ ಜಾರಿ ಮಾಡಿರುವ ದುಗ್ಗಲ್‌, ಪರಿಹಾರವಾಗಿ ಒಂದು ಕೋಟಿ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದಾರೆ.

Advertisement

2010ರಲ್ಲಿ ಚೆಸ್‌ ಅಸೋಸಿಯೇಶನ್‌ ಆಫ್ ಇಂಡಿಯಾ ಪ್ರಾಯೋಜಿಸಿದ್ದ ಟೂರ್ನಿಯೊಂದರಲ್ಲಿ ಪಾಲ್ಗೊಂಡು ನಿಯಮ ಉಲ್ಲಂ ಸಿದ್ದಾರೆ ಎಂಬ ಆರೋಪದಡಿಯಲ್ಲಿ ದುಗ್ಗಲ್‌, ಗುರ್ಪ್ರೀತ್‌ ಪಾಲ್‌ ಸಿಂಗ್‌, ಹೇಮಂತ್‌ ಶರ್ಮ ಮತ್ತು ದೇವೇಂದ್ರ ಬಾಕಪೇಯಿ ಅವರ ಎಲೋ ರೇಟಿಂಗ್‌ ಪಾಯಿಂಟ್‌ಗಳನ್ನು ಎಐಸಿಎಫ್ ತೆಗೆದು ಹಾಕಿತ್ತು. ಈ ಬಗ್ಗೆ ದುಗ್ಗಲ್‌ ಸೇರಿ ನಾಲ್ವರು, ಕಾಂಪಿಟಿಶನ್‌ ಕಮಿಷನ್‌ ಆಫ್ ಇಂಡಿಯಾಗೆ ದೂರು ನೀಡಿದ್ದಾರೆ.

“ಎಐಸಿಎಫ್ ಅಂದಿನ ನಿರ್ಧಾರದಿಂದ ನಮಗೆ ಅವಕಾಶಗಳು ಕೈ ತಪ್ಪಿದವು, ಪ್ರಾಯೋಜಕರನ್ನು ಕಳೆದುಕೊಂಡೆವು, ವಿದೇಶಗಳಲ್ಲಿ ನಮಗೆ ಅವಮಾನವಾಯಿತು, ನಮ್ಮ ಕೆಲಸದಲ್ಲಿ ಭಡ್ತಿ ಪಡೆಯಲು ತೊಂದರೆ ಸೇರಿ ಅನೇಕ ಸಮಸ್ಯೆಗಳಾಗಿವೆ. ಹೀಗಾಗಿ ನಮಗೆ ಪರಿಹಾರ ನೀಡಬೇಕು’ ಎಂದು ನೊಟೀಸ್‌ನಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next