Advertisement

AI: ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ಜಾಹೀರಾತು ಪ್ರದರ್ಶಿಸುವ ಎಐ

11:09 PM Oct 25, 2023 | Team Udayavani |

ಸಾಂಪ್ರದಾಯಿಕ ಶೈಲಿಯ ಹುಡುಕುವ(ಸರ್ಚ್‌) ಪ್ರಕ್ರಿಯೆಯ ಬದಲಾಗಿ ಕೃತಕ ಬುದ್ಧಿಮತ್ತೆ ಚಾಲಿತ ಹುಡುಕಾಟ ವ್ಯವಸ್ಥೆಯನ್ನು ಗೂಗಲ್‌ ಈಗಾಗಲೇ ಜಾರಿಗೆ ತಂದಿದೆ. ಇದನ್ನು ಆಗಸ್ಟ್‌ನಲ್ಲಿ ಗೂಗಲ್‌ ಪರಿಚಯಿಸಿತ್ತು. ಇದಕ್ಕೆ ಹೊಸ ಸೇರ್ಪಡೆಯಾಗಿ, ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ಜಾಹೀರಾತುಗಳ ಪ್ರದರ್ಶನಕ್ಕಾಗಿ ಎಐ ಆಧಾರಿತ ತಂತ್ರಜ್ಞಾನಕ್ಕೆ ಗೂಗಲ್‌ ಮೊರೆ ಹೋಗಿದೆ. ಈ ನಿಟ್ಟಿನಲ್ಲಿ ನೂತನ ತಂತ್ರಜ್ಞಾನವನ್ನು ಗೂಗಲ್‌ ಅಭಿವೃದ್ಧಿಪಡಿಸುತ್ತಿದೆ. ಕಂಪೆನಿಯ ದೊಡ್ಡ ಪ್ರಮಾಣದ ಆದಾಯಕ್ಕೆ ಜಾಹೀರಾತುಗಳೇ ಮೂಲ. ಹೀಗಾಗಿ ಗ್ರಾಹಕರಿಗೆ ಹೆಚ್ಚು ಸುಲಭವಾಗಿ ಮಾಹಿತಿ ಒದಗಿಸುವ ಜತೆಗೆ ಜಾಹೀರಾತುಗಳ ವರ್ಧನೆಗಾಗಿ ನೂತನ ಎಐ ಚಾಲಿತ ಹುಡುಕಾಟ ವ್ಯವಸ್ಥೆ ಜಾರಿಗೆ ಗೂಗಲ್‌ ಮುಂದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next