Advertisement

Dhaka ದಿಂದ ಏರ್ ಇಂಡಿಯಾ ವಿಮಾನದಲ್ಲಿ ದೆಹಲಿಗೆ ಬಂದ 205 ಮಂದಿ ಭಾರತೀಯರು

11:11 AM Aug 07, 2024 | Team Udayavani |

ಹೊಸದಿಲ್ಲಿ: ಬಾಂಗ್ಲಾದಲ್ಲಿ ಹಿಂಸಾಚಾರ ಭುಗಿಲೆದ್ದು ರಾಜಕೀಯ ಅಸ್ಥಿರತೆ ಮನೆ ಮಾಡಿರುವ ವೇಳೆ ಏರ್ ಇಂಡಿಯಾ ವಿಶೇಷ ವಿಮಾನ ಆರು ಶಿಶುಗಳು ಸೇರಿದಂತೆ 205 ಮಂದಿ ಭಾರತೀಯರನ್ನು ಬುಧವಾರ ಬೆಳಗ್ಗೆ ಢಾಕಾದಿಂದ ಹೊಸದಿಲ್ಲಿಗೆ ಕರೆತಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಮಂಗಳವಾರ ತಡರಾತ್ರಿ ಬಾಂಗ್ಲಾದೇಶದ ರಾಜಧಾನಿಗೆ ಟೇಕ್ ಆಫ್ ಆದ ಚಾರ್ಟರ್ಡ್ ಫ್ಲೈಟ್ ಅನ್ನು A321 ನಿಯೋ ವಿಮಾನದಲ್ಲಿ ಕರೆತರಲಾಗಿದೆ.

ವಿಮಾನದಲ್ಲಿ 199 ವಯಸ್ಕರು ಮತ್ತು ಆರು ಶಿಶುಗಳನ್ನು ಢಾಕಾದಿಂದ ಮರಳಿ ಕರೆತಂದಿದ್ದು ವಿಮಾನ ನಿಲ್ದಾಣದಲ್ಲಿ ಮೂಲಸೌಕರ್ಯ ಸವಾಲುಗಳ ನಡುವೆಯೂ ಯಾವುದೇ ಪ್ರಯಾಣಿಕರಿಲ್ಲದೆ ರಾಷ್ಟ್ರ ರಾಜಧಾನಿಯಿಂದ ಹಾರಿದ ವಿಮಾನವನ್ನು ಏರ್ ಇಂಡಿಯಾ ಬಹಳ ಕಡಿಮೆ ಸಮಯದಲ್ಲಿ ನಿರ್ವಹಿಸಿದೆ ಎಂದು ಬೆಳವಣಿಗೆಗಳ ಬಗ್ಗೆ ತಿಳಿದಿರುವ ಅಧಿಕಾರಿ ತಿಳಿಸಿದ್ದಾರೆ.

ಬುಧವಾರ ಏರ್ ಇಂಡಿಯಾ ತನ್ನ ನಿಗದಿತ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದ್ದು ದೆಹಲಿಯಿಂದ ಢಾಕಾಕ್ಕೆ ಎರಡು ದೈನಂದಿನ ವಿಮಾನಗಳು ಹಾರಾಟ ನಡೆಸಲಿವೆ. ಮಂಗಳವಾರ, ಏರ್ ಇಂಡಿಯಾ ತನ್ನ ಬೆಳಗಿನ ವಿಮಾನವನ್ನು ರದ್ದುಗೊಳಿಸಿತ್ತು ಆದರೆ ಸಂಜೆಯ ವಿಮಾನ ಢಾಕಾಗೆ ಹಾರಾಟ ನಡೆಸಿತ್ತು.

ವಿಸ್ತಾರಾ ಮತ್ತು ಇಂಡಿಗೋ ಸಹ ವೇಳಾಪಟ್ಟಿಯ ಪ್ರಕಾರ ಬಾಂಗ್ಲಾದೇಶದ ರಾಜಧಾನಿಗೆ ತಮ್ಮ ಸೇವೆಗಳನ್ನು ನಿರ್ವಹಿಸುತ್ತಿವೆ.ವಿಸ್ತಾರಾ ಮುಂಬೈನಿಂದ ದೈನಂದಿನ ವಿಮಾನಗಳನ್ನು ಮತ್ತು ದೆಹಲಿಯಿಂದ ಢಾಕಾಕ್ಕೆ ಮೂರು ಸಾಪ್ತಾಹಿಕ ಸೇವೆಗಳನ್ನು ನಿರ್ವಹಿಸುತ್ತಿದೆ.

Advertisement

ಸಾಮಾನ್ಯವಾಗಿ, ಇಂಡಿಗೋ ವಿಮಾನ ದೆಹಲಿ, ಮುಂಬೈ ಮತ್ತು ಚೆನ್ನೈನಿಂದ ಢಾಕಾಗೆ ಒಂದು ದೈನಂದಿನ ವಿಮಾನವನ್ನು ಮತ್ತು ಕೋಲ್ಕತ್ತಾದಿಂದ ಎರಡು ದೈನಂದಿನ ಸೇವೆಗಳನ್ನು ನಿರ್ವಹಿಸುತ್ತಿದೆ. ವಿಸ್ತಾರಾ ಮತ್ತು ಇಂಡಿಗೋ ಎರಡೂ ಮಂಗಳವಾರ ಬಾಂಗ್ಲಾದೇಶದ ರಾಜಧಾನಿಗೆ ತಮ್ಮ ವಿಮಾನಗಳನ್ನು ರದ್ದುಗೊಳಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next