Advertisement

MGM ಕಾಲೇಜಿನಲ್ಲಿ ಎಐ ರಾಷ್ಟ್ರೀಯ ಸಮ್ಮೇಳನ: ಎಐ ಬಳಕೆ ಅನಿವಾರ್ಯ: ಡಾ| ಪಿ. ಗಿರಿಧರ ಕಿಣಿ

12:44 AM Aug 23, 2024 | Team Udayavani |

ಉಡುಪಿ: ಪ್ರಸ್ತುತ ಸ್ವಾಭಾವಿಕ ಬುದ್ಧಿಯನ್ನು ಕೃತಕ ಬುದ್ಧಿಮತ್ತೆ ಮೀರಿಸುವಂತಿದೆ. ಈ ಸವಾಲಿನ ನಡುವೆಯೂ ಹವಾಮಾನ ಬದಲಾಣೆ ಹಾಗೂ ಆರೋಗ್ಯ ಕ್ಷೇತ್ರದ ಹಲವು ಸಮಸ್ಯೆಗಳಿಗೆ ಕೃತಕ ಬುದ್ಧಿಮತ್ತೆ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಆದರೂ ಎಐ ಅನುಷ್ಠಾನ ಮತ್ತು ಉಪಯೋಗದಲ್ಲಿ ಎಚ್ಚರವೂ ಅಗತ್ಯ ಎಂದು ಮಾಹೆ ಕುಲಸಚಿವ ಡಾ| ಪಿ. ಗಿರಿಧರ ಕಿಣಿ ಹೇಳಿದರು.

Advertisement

ಎಂಜಿಎಂ ಕಾಲೇಜಿನ ಕಂಪ್ಯೂಟರ್‌ ಸೈನ್ಸ್‌ ವಿಭಾಗದಿಂದ ಐಕ್ಯೂಎಸಿ ಸಹಯೋಗದಲ್ಲಿ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ “ಆರ್ಟಿಫಿಶಿಯಲ್‌ ಇಂಟೆಲಿಜೆನ್ಸಿ : ಫ‌Åಮ್‌ ಥಿಯರಿ ಟು ಇಂಪ್ಯಾಕ್ಟ್’ ಎಂಬ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೃತಕ ಬುದ್ಧಿಮತ್ತೆ ಪ್ರಸ್ತುತ ನಮ್ಮ ಜೀವನದ ಅವಿಭಾಜ್ಯ ಅಂಗದಂತಾಗಿದೆ. ಜಾಗತಿಕವಾಗಿ ಎದ್ದಿರುವ ಹಲವು ಸವಾಲುಗಳಿಗೆ ಇದರ ಮೂಲಕ ಉತ್ತರ ಕಂಡುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಎಐ/ಎಂಎಲ್‌ ತಜ್ಞ ಜಯರಾಮ್‌ ಬಿ.ಕೆ. ಅವರು ಎಐ ಅಪ್ಲಿಕೇಶನ್‌ ವಿಕಾಸದ ಬಗ್ಗೆ ಮಾಹಿತಿ ನೀಡಿ, ಎಐಯ ಪ್ರಸ್ತುತತೆ, ಬಳಸಲು ಇರುವ ಸವಾಲು ಹಾಗೂ ಎಚ್ಚರಿಕೆ ಸಹಿತ ಅನೇಕ ಅಂಶಗಳನ್ನು ತಿಳಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಮುಖ್ಯಸ್ಥ ಡಾ| ಮಂಜಯ್ಯಡಿ.ಎಚ್‌., ಎಜಿಇ ಕಾರ್ಯದರ್ಶಿ ಬಿ.ಪಿ. ವರದರಾಯ ಪೈ, ಟಿ.ಮೋಹನ್‌ದಾಸ್‌ ಪೈ ಕೌಶಲಾಭಿವೃದ್ಧಿ ಕೇಂದ್ರ ನಿರ್ದೇಶಕ ಟಿ. ರಂಗ ಪೈ ಶುಭ ಹಾರೈಸಿದರು.

ಕಾಲೇಜಿನ ಪ್ರಾಂಶುಪಾಲ ಡಾ| ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಪಿಯು ಕಾಲೇಜಿನ ಪ್ರಾಂಶುಪಾಲೆ ಪ್ರೊ| ಮಾಲತಿ ದೇವಿ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ| ದೇವಿದಾಸ ಎಸ್‌. ನಾಯ್ಕ, ಐಕ್ಯೂಎಸಿ ಸಂಯೋಜಕಿ ಪ್ರೊ| ಶೈಲಜಾ ಎಚ್‌., ಸಹಾಯಕ ಪ್ರಾಧ್ಯಾಪಿಕೆ ಡಾ| ಜ್ಯೋತಿ ಅಲ್ಫಾನ್ಸೋ ಉಪಸ್ಥಿತರಿದ್ದರು.

Advertisement

ಕಂಪ್ಯೂಟರ್‌ಸೈನ್ಸ್‌ ವಿಭಾಗದ ಮುಖ್ಯಸ್ಥ ಡಾ| ವಿಶ್ವನಾಥ ಪೈ ಸ್ವಾಗತಿಸಿ, ಪ್ರಸ್ತಾವಿಸಿದರು. ಪ್ರಾಧ್ಯಾಪಿಕೆ ಸುಷ್ಮಾ ಬಂಗೇರ ಯು. ಅತಿಥಿಗಳನ್ನು ಪರಿಚಯಿಸಿದರು. ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಸಹಾಯಕ ಪ್ರಾಧ್ಯಾಪಿಕೆ ರೇಖಾ ಎನ್‌. ಚಂದ್ರ ನಿರೂಪಿಸಿ, ಕಾರ್ಯಕ್ರಮದ ಸಂಯೋಜಕಿ ಹಾಗೂ ಪ್ರಾಧ್ಯಾಪಿಕೆ ಪ್ರವಿತ್ರಾ ಕೆ. ವಂದಿಸಿದರು.

ಶುಕ್ರವಾರ ಸಮಾರೋಪ
ಅಮೆರಿಕ, ಯು.ಕೆ., ಆಸ್ಟ್ರೇಲಿಯಾ, ಸಿಂಗಾಪುರ, ಯುಎಸ್‌ಎ, ಒಮನ್‌, ಕಾಂಬೋಡಿಯಾ, ಕೆನಡಾ ಸಹಿತ ವಿದೇಶಗಳಿಂದ ಹಾಗೂ ಕರ್ನಾಟಕ, ಮಹಾರಾಷ್ಟ್ರ, ಗೋವಾ, ತಮಿಳನಾಡು, ಮಧ್ಯಪ್ರದೇಶ, ಒಡಿಶಾ, ಗುಜರಾತ್‌, ಪಂಜಾಬ್‌, ಅಸ್ಸಾಂ ಮೊದಲಾದ ರಾಜ್ಯದ ಪ್ರತಿನಿಧಿಗಳು ಆನ್‌ಲೈನ್‌ ಹಾಗೂ ಆಫ್ಲೈನ್‌ನಲ್ಲಿ ಭಾಗವಹಿಸಿದ್ದಾರೆ. 40ಕ್ಕೂ ಅಧಿಕ ಸಂಶೋಧನ ಪ್ರಬಂಧ ಮಂಡನೆಯಾಗಲಿದ್ದು, ಇದರಲ್ಲಿ 20 ಪ್ರಬಂಧಗಳನ್ನು ವಿದ್ಯಾರ್ಥಿಗಳು ಮಂಡಿಸಲಿದ್ದಾರೆ. ಆ.23ರ ಮಧ್ಯಾಹ್ನ 2.30ರಿಂದ ಸಮಾರೋಪ ನಡೆಯಲಿದೆ. ಮಾಹೆ ಇಂಟರ್‌ನ್ಯಾಶನಲ್‌ ರಿಲೇಶನ್‌ ನಿರ್ದೇಶಕ ಡಾ| ಕರುಣಾಕರ ಕೊಟೆಗಾರ್‌ ಎ. ಮುಖ್ಯ ಅತಿಥಿಯಾಗಿರುವರು.

ವಿವಿಧ ಗೋಷ್ಠಿಗಳು
ಎಐ ಫಾರ್‌ ವೈರ್‌ಲೆಸ್‌, ದಿ ಫ್ಯೂಚರ್‌ ಆಪ್‌ ಕ್ರಿಯೇಟಿವಿಟಿ ವಿಷಯ ಮಂಡನೆ ನಡೆದಿದೆ. ಆ.23ರಂದು ಪ್ರಬಂಧ ಮಂಡನೆ, ಜನರೇಟಿವ್‌ ಎಐ ವಿಷಯದಲ್ಲಿ ಗೋಷ್ಠಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next