Advertisement

CJI ಜತೆ ಎಐ ಚರ್ಚೆ: ಗಲ್ಲು ಶಿಕ್ಷೆ ಕುರಿತ ಪ್ರಶ್ನೆಗೆ ಎಐ ವಕೀಲನ ಉತ್ತರ!

07:31 PM Nov 07, 2024 | Team Udayavani |

ನವದೆಹಲಿ: ಸುಪ್ರೀಂಕೋರ್ಟ್‌ನ ವಸ್ತು ಸಂಗ್ರಹಾಲಯದಲ್ಲಿ ಸ್ಥಾಪಿಸಲಾಗಿರುವ ಕೃತಕ ಬುದ್ಧಿಮತ್ತೆ (ಎಐ) ವಕೀಲರ ಜತೆ ಗುರುವಾರ ಸಿಜೆಐ ಡಿ.ವೈ.ಚಂದ್ರಚೂಡ್‌ ಮಾತುಕತೆ ನಡೆಸಿದ್ದಾರೆ.

Advertisement

ಈ ವೇಳೆ ಅವರು ಭಾರತದಲ್ಲಿ ಗಲ್ಲುಶಿಕ್ಷೆಯ ಸಾಂವಿಧಾನಿಕ ಮಾನ್ಯತೆ ಬಗ್ಗೆ ಪ್ರಶ್ನಿಸಿದ್ದು, ಎಐ ನೀಡಿದ ಉತ್ತರದಿಂದ ಸಂತೋಷಗೊಂಡಿದ್ದಾರೆ. ರಾಷ್ಟ್ರೀಯ ನ್ಯಾಯಾಂಗ ಪ್ರದರ್ಶನಾಲಯ ಉದ್ಘಾಟಿಸಿದ ಬಳಿಕ ಅವರು ಈ ಸಂವಹನ ನಡೆಸಿದರು.

ಭಾರತದ ಸಂವಿಧಾನದಲ್ಲಿ ಮರಣದಂಡನೆ ಶಿಕ್ಷೆ ಇದೆಯೇ ಎಂದು ಸಿಜೆಐ ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಐ, “ಹೌದು, ಭಾರತದಲ್ಲಿ ಮರಣದಂಡನೆ ಸಂವಿಧಾನಬದ್ಧವಾಗಿದೆ. ಆದರೆ ಘೋರ ಕೃತ್ಯಗಳಂತಹ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಸುಪ್ರೀಂಕೋರ್ಟ್‌ ಈ ಶಿಕ್ಷೆಗೆ ಆದೇಶಿಸಲಿದೆ’ ಎಂದಿತು.

Advertisement

Udayavani is now on Telegram. Click here to join our channel and stay updated with the latest news.

Next