Advertisement

AI; ಕನ್ನಡ ಸೇರಿ ಜಗತ್ತಿನ‌ 98 ಭಾಷೆಗಳಲ್ಲಿ ಬರೆಯುವ ಹನುಮಾನ್‌ ತಂತ್ರಾಂಶ

01:39 AM May 11, 2024 | Team Udayavani |

ಹೊಸದಿಲ್ಲಿ: ಕನ್ನಡ ಸೇರಿದಂತೆ ದೇಶದ 12 ಹಾಗೂ ಜಗತ್ತಿನ 98 ಭಾಷೆಗಳಲ್ಲಿ ಬರೆಯುವ “ಹನುಮಾನ್‌’ ಎಂಬ ಎಐ ತಂತ್ರಾಂಶ ಈಗ ಸಿದ್ಧಗೊಂಡಿದೆ. ಅದನ್ನು ದೇಶದಲ್ಲಿಯೇ ಅಭಿವೃದ್ಧಿಗೊಳಿಸಲಾಗಿದೆ. ಎಸ್‌ಎಂಎಲ್‌ ಇಂಡಿಯಾ ಎಂಬ ಸ್ವದೇಶಿ ಕಂಪೆನಿ, ಅಬುಧಾಬಿಯ 3 ಎಐ ಕಂಪೆನಿಗಳ ಸಹಯೋಗದೊಂದಿಗೆ ಹನು ಮಾನ್‌ ಅಭಿವೃದ್ಧಿಪಡಿಲಾಗಿದೆ. ಬಹುತೇಕ ಜೆನ್‌ ಎಐಗಳು ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯವಿದೆ. ಆದರೆ ಹನುಮಾನ್‌ ಇಂಗ್ಲಿಷ್‌ ಬರದೆ ಇರುವ ಭಾರತೀಯರಿಗೂ ಸೇವೆ ಒದಗಿಸಲಿದೆ. ವಿಷಯ ಸೃಷ್ಟಿ, ಅನು ವಾದ ಇತ್ಯಾದಿ ಸೇವೆ ನೀಡಲಿರುವ ಹನುಮಾನ್‌ ಬಳಕೆದಾರರಿಗೆ ವೆಬ್‌ ಹಾಗೂ ಆ್ಯಪ್‌ ಮೂಲಕ ಉಚಿತವಾಗಿ ಲಭ್ಯವಿದೆ. ಇದರಿಂದಾಗಿ ಸ್ಥಳೀಯ ಮಟ್ಟದ ಸಂವಹನಕ್ಕೆ ಹೆಚ್ಚಿನ ರೀತಿಯ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next