ಕೆಲವು ದಿನಗಳ ಹಿಂದೆ ಅಮೆರಿಕದ ನ್ಯೂ ಹ್ಯಾಂಪ್‌ಶೈರ್‌ನಲ್ಲಿ ನಡೆದ ಡೆಮಾಕ್ರಟಿಕ್ ಪಕ್ಷದ ಪ್ರೈಮರಿಯಲ್ಲಿ ಕೆಲವು ಕಿಡಿಗೇಡಿಗಳು ಎ.ಐ. ಆಧಾರಿತ ವಾಯ್ಸ ರೋಬೋ ಕಾಲ್‌ಗಳ ಮೂಲಕ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ರ ನಕಲಿ ಧ್ವನಿಯನ್ನು ಬಿತ್ತರಿಸಿದ್ದರು.
Advertisement
ಈ ಹಿನ್ನೆಲೆಯಲ್ಲಿ ರೋಬೊ ಕರೆಗಳಿಗೆ ನಿಷೇಧ ಹೇರಿ ಅಮೆರಿಕ ಸರಕಾರ ಆದೇಶ ಹೊರಡಿಸಿದೆ. “ಜನರನ್ನು ಸುಲಿಗೆ ಮಾಡಲು, ಸೆಲೆಬ್ರೆಟಿಗಳನ್ನು ಅನುಕರಿಸಲು, ಮತದಾರರಿಗೆ ತಪ್ಪು ಮಾಹಿತಿ ನೀಡಲು ಎಐ ಆಧಾರಿತ ವಾಯ್ಸ ರೋಬೊಕಾಲ್‌ಗಳನ್ನು ವಂಚಕರು ಬಳಸುತ್ತಿದ್ದಾರೆ. ಹೀಗಾಗಿ ಎಐ ಆಧಾರಿತ ವಾಯ್ಸ ರೋಬೊಕಾಲ್‌ಗಳ ಮೇಲೆ ಸಂಪೂರ್ಣ ನಿಷೇಧ ಹೇರಲಾ ಗಿದೆ’ ಎಂದು ಅಮೆರಿಕ ಸರಕಾರದ ಸಂವಹನ ಆಯೋಗ ಆದೇಶ ಹೊರಡಿಸಿದೆ.
ಸಾಮಾನ್ಯವಾಗಿ ರಾಜಕೀಯ ಪಕ್ಷ ಅಥವಾ ಟೆಲಿಮಾರ್ಕೆಟಿಂಗ್ ಕಂಪೆ ನಿಯ ಪರವಾಗಿ ರೆಕಾರ್ಡ್ ಮಾಡಿದ ಸಂದೇಶವನ್ನು ತಲುಪಿಸುವ ಸ್ವಯಂ ಚಾಲಿತ ದೂರವಾಣಿ ಕರೆ ಇದಾಗಿದೆ. ಎಐ ತಂತ್ರಜ್ಞಾನ ಆಧರಿಸಿ ಸಲೆಬ್ರೆಟಿ ಗಳ ನಕಲಿ ಧ್ವನಿಯಲ್ಲಿ ರೆಕಾರ್ಡ್ ಮಾಡಿದ ಸಂದೇಶವನ್ನು ಸ್ವಯಂ ಚಾಲಿತವಾಗಿ ನಿಗದಿತ ವ್ಯಕ್ತಿಗಳಿಗೆ ದೂರವಾಣಿ ಕರೆ ಮಾಡಲಾಗುತ್ತದೆ.