Advertisement

47 ವರ್ಷ ಹಿಂದಿನ ಪ್ರಕರಣಕ್ಕೆ ಜಾಮೀನು

01:35 AM Oct 17, 2020 | mahesh |

ಅಹ್ಮದಾಬಾದ್‌: ನಲವತ್ತ ಏಳು ವರ್ಷಗಳ ಹಿಂದೆ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಪ್ಟೆಂಬರ್‌ನಲ್ಲಿ ಬಂಧಿತರಾಗಿದ್ದ ವ್ಯಕ್ತಿಗೆ ಅಹ್ಮದಾಬಾದ್‌ನ ಸ್ಥಳೀಯ ಕೋರ್ಟ್‌ ಷರತ್ತು ಬದ್ಧ ಜಾಮೀನು ನೀಡಿದೆ. ಆ ವ್ಯಕ್ತಿಯನ್ನು ಯಶವಂತ ರಾವ್‌ ಮರಾಠ (68) ಎಂದು ಗುರುತಿಸಲಾಗಿದೆ. ಯಶವಂತ ರಾವ್‌ ವಿರುದ್ಧ 1973ರಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.12ರಂದು ಬಂಧನದ ಸಮನ್ಸ್‌ ನೀಡಲಾಗಿತ್ತು. ಹೀಗಾಗಿ ಗುಜರಾತ್‌ ಪೊಲೀಸರು ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಅವರ ನಿವಾಸದಲ್ಲಿ ಬಂಧಿಸಿದ್ದರು. ಹಿಂದಿನ ಅಸ್ಟೋಡಿಯಾ ಪೊಲೀಸ್‌ ಠಾಣೆ (ಖಾಡಿಯಾ ಎಂದು ಹೆಸರು)ಯಲ್ಲಿ ಕೇಸು ದಾಖಲಾಗಿತ್ತು.

Advertisement

ಬಂಧನದ ಬಳಿಕ ಅವರನ್ನು ಸಾಬರಮತಿ ಜೈಲಲ್ಲಿ ಇರಿಸಲಾಗಿತ್ತು. ಅಹ್ಮದಾಬಾದ್‌ನ ಪ್ರಧಾನ ಸೆಷನ್ಸ್‌ ಕೋರ್ಟ್‌ ನ್ಯಾಯಾಧೀಶ ಎಸ್‌.ಕೆ.ಬಕ್ಷಿ ಅವರ ಮುಂದೆ ಪ್ರಕರಣ ವಿಚಾರಣೆಗೆ ಬಂದಿತು. ಮರಾಠ ಪರ ವಕೀಲರು ವಾದ ಮಂಡಿಸಿ, ಪ್ರಕರಣದಲ್ಲಿ ತಮ್ಮ ಕಕ್ಷಿದಾರನ ವಿರುದ್ಧ ತಪ್ಪು ಆರೋಪ ಹೊರಿಸಲಾಗಿದೆ. 1973ರಲ್ಲಿ ನಡೆದಿದ್ದ ಪ್ರಕರಣದಲ್ಲಿ ಕಕ್ಷಿದಾರನ ವಾಹನ ದುರ್ಬಳಕೆ ಮಾಡಲಾಗಿತ್ತು ಮತ್ತು ಸಹ ಆರೋಪಿತ ವ್ಯಕ್ತಿ ಪರಿಚಯಸ್ಥ. ಹೀಗಾಗಿ, ಅವರಿಗೂ ಘಟನೆಗೂ ಸಂಬಂಧವಿಲ್ಲ ಎಂದು ವಾದಿಸಿದರು. ವಾದ ಪರೀಶೀಲಿಸದ ನ್ಯಾಯಾಧೀಶ ಬಕ್ಷಿ ವಯಸ್ಸು, ಪ್ರಕರಣದ ಹಿನ್ನೆಲೆ ಗಮನಿಸಿ ಷರತ್ತು ಬದ್ಧ ಜಾಮೀನು ನೀಡಿದೆ ಎಂದು “ದ ಟೈಮ್ಸ್‌ ಆಫ್ ಇಂಡಿಯಾ’ ವರದಿ ಮಾಡಿದೆ.

ಸರಕಾರಿ ವಕೀಲರು ತಮ್ಮ ವಾದದಲ್ಲಿ ಮರಾಠ 47 ವರ್ಷಗಳಿಂದ ತಲೆಮರೆಸಿ ಕೊಂಡಿದ್ದರು. ಹೀಗಾಗಿ, ಜಾಮೀನು ಸಲ್ಲದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next