Advertisement

ಅಹ್ಮದ್‌ ಪಟೇಲ್‌ ಗೆಲ್ಲೋದು ಗ್ಯಾರಂಟಿ : ಗೆಹಲೋತ್‌ ವಿಶ್ವಾಸ

03:07 PM Aug 08, 2017 | Team Udayavani |

ಅಹ್ಮದಾಬಾದ್‌ : ಗುಜರಾತ್‌ನಲ್ಲಿ ನಡೆದಿರುವ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹಿರಿಯ ನಾಯಕ ಅಹ್ಮದ್‌ ಪಟೇಲ್‌ ಅವರು ಅನಾಯಾಸವಾಗಿ ಜಯ ಸಾಧಿಸುತ್ತಾರೆ ಎಂದು ಗುಜರಾತ್‌ ಕಾಂಗ್ರೆಸ್‌ ಪ್ರಭಾರಿ ಅಶೋಕ್‌ ಗೆಹಲೋತ್‌ ಹೇಳಿದ್ದಾರೆ. 

Advertisement

“ಗುಜರಾತ್‌ನ 44 ಶಾಸಕರ ಪೈಕಿ ಒಬ್ಬರು ಮಾತ್ರವೇ ಅಡ್ಡ ಮತದಾನ ಮಾಡಿದ್ದಾರೆ ಎಂಬುದನ್ನು ನಾವು ಒಪ್ಪುತ್ತೇವೆ.ಆದರೆ ಒಬ್ಬ ಎನ್‌ಸಿಪಿ ಮತ್ತು ಒಬ್ಬ ಜೆಡಿಯು ಶಾಸಕರು ನಮ್ಮನ್ನು ಬೆಂಬಲಿಸಿದ್ದಾರೆ’ ಎಂದು ಗೆಹಲೋತ್‌ ಹೇಳಿದರು. 

ನಮ್ಮ ಬಳಿ ಸಂಖ್ಯಾಬಲ ಇರುವುದರಿಂದ ಅಹ್ಮದ್‌ ಪಟೇಲ್‌ ಗೆಲ್ಲುವುದು ಖಚಿತ ಎಂದು ಗೆಹಲೋತ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next