ಮುಂಬಯಿ: ಅಹ್ಮದ್ ನಗರವನ್ನು ಅಹಲ್ಯಾದೇವಿ ಹೋಳ್ಕರ್ ನಗರ ಎಂದು ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ತಿಳಿಸಿದ್ದಾರೆ.
Advertisement
ಜಾಮಖೇಡ್ ಚೌಂಡಿಯಲ್ಲಿ ನಡೆದ ಪುಣ್ಯಶ್ಲೋಕ ಅಹಲ್ಯಾದೇವಿ ಹೋಳ್ಕರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಶಿಂಧೆ ಮಾತನಾಡಿ, ಅಹಲ್ಯಾದೇವಿಯ ಆದರ್ಶವನ್ನು ಪಾಲಿಸಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಸರಕಾರದ ಅವಧಿಯಲ್ಲಿ ಈ ನಿರ್ಧಾರ ಕೈಗೊಳ್ಳುತ್ತಿರುವುದು ನಮ್ಮ ಅದೃಷ್ಟ. ಅಹ್ಮದ್ ನಗರಕ್ಕೆ ಅಹಲ್ಯಾದೇವಿಯ ಹೆಸರಿಡಬೇಕೆಂದು ಶಾಸಕ ಗೋಪಿಚಂದ್ ಪಡಲ್ಕರ್ ಬೇಡಿಕೆ ಮಂಡಿಸಿದ್ದರು ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಉಪಸ್ಥಿತರಿದ್ದರು.