Advertisement

2 ಓಟು ಮತ್ತು 1ಸೀಟು, ಅಹ್ಮದ್‌ ಪಟೇಲ್‌ ಸೋಲು-ಗೆಲುವಿಗಾಗಿ ಹೈಡ್ರಾಮಾ

06:45 AM Aug 09, 2017 | Harsha Rao |

ಅಹಮದಾಬಾದ್‌: ಇಲ್ಲಿ ಕೇವಲ ಒಂದು ಸೀಟು ಮತ್ತು ಕೇವಲ ಎರಡು ಅಡ್ಡಮತ. ಈ ಎರಡು ವಿಚಾರದಲ್ಲಿ ಇಡೀ ದೇಶವೇ ತುದಿಗಾಲಿನಲ್ಲಿ ಕುಳಿತುಕೊಳ್ಳುವ ಸ್ಥಿತಿಗೆ ಬಂದಿದ್ದು, ಕೇಂದ್ರ ಚುನಾವಣಾ ಆಯೋಗ ಥರ್ಡ್‌ ಅಂಪೈರ್‌ ಜಾಗದಲ್ಲಿ ಉಸಿರು ಬಿಗಿಹಿಡಿದು ಕುಳಿತಿದೆ.

Advertisement

ಗುಜರಾತ್‌ನಿಂದ ರಾಜ್ಯಸಭೆಗೆ 3 ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಗೆಲುವು ಶತಃಸಿದ್ಧ. ಬಿಜೆಪಿಗೆ ಇವರಿಬ್ಬರನ್ನು ಅನಾ ಯಾಸವಾಗಿ ಗೆಲ್ಲಿಸುವ ಸಾಮರ್ಥ್ಯವಿದ್ದು ಹೀಗಾಗಿ ಜಯ ಪಕ್ಕಾ ಆಗಿದೆ. ಆದರೆ ಮೂರನೇ ಸ್ಥಾನಕ್ಕಾಗಿ ಬಿಜೆಪಿಯ 3ನೇ ಅಭ್ಯರ್ಥಿ ಮತ್ತು ಕಾಂಗ್ರೆಸ್‌ನ ಅಹ್ಮದ್‌ ಪಟೇಲ್‌ ನಡುವೆ ಹಣಾಹಣಿ ಕದನ ಕುತೂ ಹಲಕ್ಕೆ ಕಾರಣವಾಗಿದ್ದು, ಇಡೀ ದೇಶವೇ ಇದೊಂದು ಸೀಟಿನ ಮೇಲೆ ಗಮನಹರಿಸಿಕೊಂಡು ಕುಳಿತಿದೆ.

ಸಂಜೆಯಿಂದ ತಡರಾತ್ರಿವರೆಗೆ (ಪತ್ರಿಕೆ ಮುದ್ರಣಕ್ಕೆ ಹೋಗುವ ಮುನ್ನ) ಬಿಜೆಪಿ ಮತ್ತು ಕಾಂಗ್ರೆಸ್‌ ತಲಾ ಮೂರು ಬಾರಿ ಕೇಂದ್ರ ಚುನಾವಣಾ ಆಯೋಗದ ಬಾಗಿಲು ತಟ್ಟಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಆಯೋಗ ಇರಲಿಲ್ಲ. ಆದರೂ, ತಡರಾತ್ರಿಯ ವೇಳೆಗೆ ಫ‌ಲಿತಾಂಶ ಹೊರಹಾಕಬಹುದು ಎಂದು ಹೇಳಲಾಗಿತ್ತು.

ಇಬ್ಬರು ಕಾಂಗ್ರೆಸ್‌ ಶಾಸಕರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾಗೆ ಮತಪತ್ರ ತೋರಿಸಿ ಬಿಜೆಪಿಗೆ ಅಡ್ಡಮತ ಹಾಕಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್‌ ನೇತಾರರು, ಇವರಿಬ್ಬರ ಮತಗಳನ್ನೂ ಅಸಿಂಧು ಮಾಡಬೇಕು ಎಂದು ಚುನಾವಣಾ ಬಾಗಿಲಿಗೆ ತಡಕಾಡುತ್ತಿದ್ದಾರೆ. ಇವರಿಗೆ ಪ್ರತಿಯಾಗಿ ಬಿಜೆಪಿ ಕೂಡ ಮೂರು ಬಾರಿ ಕೇಂದ್ರ ಚುನಾವಣಾ ಆಯೋಗದ ಬಾಗಿಲು ತಟ್ಟಿದ್ದು, ಕಾಂಗ್ರೆಸ್‌ ಆಧಾರರಹಿತ ಆರೋಪ ಮಾಡುತ್ತಿದೆ ಎಂದು ಹೇಳಿದೆ. ಅಲ್ಲದೆ ಈ ಕೂಡಲೇ ಮತ ಎಣಿಕೆಗೆ ಆಸ್ಪದ ನೀಡಬೇಕು ಎಂದು ಆಗ್ರಹಿಸಿದೆ.

ರಾತ್ರಿ 10.30ರ ವೇಳೆಗೆ ಕಾಂಗ್ರೆಸ್‌ ನಾಲ್ಕು ಬಾರಿ ಮತ್ತು ಬಿಜೆಪಿ ಮೂರು ಬಾರಿ ಆಯೋಗಕ್ಕೆ ಭೇಟಿ ನೀಡಿ ಪರಸ್ಪರ ಮನವಿ-ಪ್ರತಿ ಮನವಿ ಸಲ್ಲಿಸಿದವು. ಒಂದು ವೇಳೆ ಅಡ್ಡಮತ ಅಸಿಂಧು ಮಾಡದಿದ್ದರೆ ಸುಪ್ರೀಂಕೋರ್ಟ್‌ಗೆ ಹೋಗುವುದಾಗಿ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುಜೇìವಾಲ ಹೇಳಿದರು.

Advertisement

ಸಂಜೆ ಆರು ಗಂಟೆ: ಕಾಂಗ್ರೆಸ್‌ನ ಇಬ್ಬರು ಶಾಸಕರು ಬಿಜೆಪಿ ನಾಯಕರಿಗೆ ಬ್ಯಾಲೆಟ್‌ ಪತ್ರ ತೋರಿಸಿ ಮತ ದಾನ ಮಾಡಿರುವುದರಿಂದ ಇವರಿಬ್ಬರ ಮತಗಳನ್ನು ಅಸಿಂಧು ಮಾಡಬೇಕು ಎಂದು ಕೋರಿ ಮೊದಲ ಬಾರಿಗೆ ಕೈ ನಾಯಕರು ಕೇಂದ್ರ ಚುನಾವಣಾ ಆಯೋಗದ ಬಾಗಿಲು ಬಡಿದರು. ಕೇಂದ್ರದ ಮಾಜಿ ಸಚಿವ ಆನಂದ್‌ ಶರ್ಮಾ, ಕಾಂಗ್ರೆಸ್‌ ಪ್ರಧಾನ ವಕ್ತಾರ ರಣದೀಪ್‌ ಸುಜೇìವಾಲಾ ಅವರು ದಿಲ್ಲಿಯಲ್ಲಿರುವ ಆಯೋಗದ ಕಚೇರಿಗೆ ಭೇಟಿ ನೀಡಿ ಈ ಸಂಬಂಧ ಮನವಿ ಮಾಡಿದರು. ಅಲ್ಲದೆ ಶಾಸಕರ   ವಿಡಿಯೋ ಸಾಕ್ಷಿ ಇದ್ದು, ಈ ಕೂಡಲೇ ಅಸಿಂಧು ಮಾಡಿ ಎಂದು ಆಗ್ರಹಿಸಿತು.

ಸಂಜೆ 7 ಗಂಟೆ: ಕಾಂಗ್ರೆಸ್‌ ನೀಡಿದ ಮನವಿ ಅನ್ವಯ ಮೊದಲ ಬಾರಿಗೆ ಸಭೆ ಸೇರಿದ ಕೇಂದ್ರ ಚುನಾವಣಾ ಆಯೋಗದ ಆಯುಕ್ತರು, ಗುಜರಾತ್‌ ಚುನಾವಣಾ ಅಧಿಕಾರಿಯಿಂದ ವರದಿ ಕೇಳಿದರು.

ಸಂಜೆ 7.8 ಗಂಟೆ: ಕಾಂಗ್ರೆಸ್‌ ಮನವಿಗೆ ಪ್ರತಿಯಾಗಿ ಬಿಜೆಪಿಯಿಂದ ಮರು ಮನವಿ. ಕೇಂದ್ರ ಸಚಿವರಾದ ಮುಖಾ¤ರ್‌ ಅಬ್ಟಾಸ್‌ ನಖೀÌ, ಪಿಯೂಶ್‌ ಗೋಯಲ್‌, ಧರ್ಮೇಂದ್ರ ಪ್ರಧಾನ್‌ ಆಯೋಗದ ಕಚೇರಿಗೆ ಹೋಗಿ ಮನವಿ ಸಲ್ಲಿಸಿದರು.

ಅಲ್ಲದೆ ನಂತರದ ವಿದ್ಯಮಾನದ ಪ್ರಕಾರ, ಹಿರಿಯ ಸಚಿವರಾದ ಅರುಣ್‌ ಜೇಟಿÉ, ರವಿಶಂಕರ್‌ ಪ್ರಸಾದ್‌ ಮತ್ತು ನಿರ್ಮಲಾ ಸೀತಾರಾಮನ್‌ ಕೂಡ ಈ ನಿಯೋಗ ಸೇರಿಕೊಂಡರು.

ಬಳಿಕ ಮಾತನಾಡಿದ ರವಿಶಂಕರ್‌ ಪ್ರಸಾದ್‌, ಕಾಂಗ್ರೆಸ್‌ ಬೆಳಗ್ಗೆಯಿಂದ ಏನು ಮಾಡುತ್ತಿತ್ತು? ಈಗ ಸೋಲುವುದು ಖಚಿತವಾಗುತ್ತಿದ್ದಂತೆ ಆಯೋ ಗದ ಕಚೇರಿ ಬಾಗಿಲು ಬಡಿದಿದೆ. ಕಾಂಗ್ರೆಸ್‌ ಆರೋಪ ವೆಲ್ಲವೂ ಆಧಾರ ರಹಿತ ಎಂದರು. ಅಲ್ಲದೆ ಕಾಂಗ್ರೆಸ್‌ ಮನವಿಯನ್ನು ತಿರಸ್ಕರಿಸುವಂತೆ ಆಯೋಗದ ಮುಂದೆ ಮನವಿ ಸಲ್ಲಿಸಿರುವುದಾಗಿ ಅವರು ಹೇಳಿದರು.

ರಾತ್ರಿ 7.52: ಕಾಂಗ್ರೆಸ್‌ನ ಪಿ.ಚಿದಂಬರಂ, ಗುಲಾಂ ನಬಿ ಆಜಾದ್‌, ಆನಂದ್‌ ಶರ್ಮಾ ಮತ್ತು ರಣದೀಪ್‌ ಸುಜೇìವಾಲ ಅವರಿಂದ ಮತ್ತೂಮ್ಮೆ ಚುನಾವಣಾ ಆಯೋಗದ ಕಚೇರಿಗೆ ಭೇಟಿ. 2000ನೇ ಇಸವಿಯಲ್ಲಿ ಹರ್ಯಾಣದಿಂದ ರಾಜ್ಯಸಭೆ ಚುನಾವಣೆಯಲ್ಲಿ ಅಕಸ್ಮಾತ್‌ ಆಗಿ ಬೇರೊಬ್ಬರಿಗೆ ಮತ ಪತ್ರ ಬಹಿರಂಗ ಮಾಡಿದ್ದರಿಂದ ಶಾಸಕರೊಬ್ಬರ ಮತವನ್ನು ಅಸಿಂಧು ಮಾಡಲಾಗಿತ್ತು. ಈ ಪ್ರಕರಣದಲ್ಲೂ ಕಾಂಗ್ರೆಸ್‌ ಶಾಸಕರಿಬ್ಬರ ಮತಗಳನ್ನು ಅಸಿಂಧು ಮಾಡಲೇಬೇಕು ಎಂದು ಮನವಿ ಸಲ್ಲಿಸಲಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಹೇಳಿದರು. 

ರಾತ್ರಿ 8.11: ಕೇಂದ್ರ ಸಚಿವರಾದ ರವಿಶಂಕರ್‌ ಪ್ರಸಾದ್‌, ನಿರ್ಮಲಾ ಸೀತಾರಾಮನ್‌ ಮತ್ತು ಪಿಯೂಶ್‌ ಗೋಯಲ್‌ ಅವರಿಂದ ಎರಡನೇ ಬಾರಿಗೆ ಆಯೋಗದ ಕಚೇರಿಗೆ ಭೇಟಿ. ಕಾಂಗ್ರೆಸ್‌ನ ಆರೋಪಗಳ ಬಗ್ಗೆ ಚುನಾವಣಾ ಆಯೋಗದ ಮುಂದೆ ಸ್ಪಷ್ಟವಾಗಿ ಹೇಳಿಬಂದಿದ್ದೇವೆ. ಅವರ ಆರೋಪದಲ್ಲಿ ಹುರುಳಿಲ್ಲ. ನಮಗೆ ಆಯೋಗದ ಮೇಲೆ ಸಂಪೂರ್ಣವಾಗಿ ನಂಬಿಕೆ ಇದೆ ಎಂದು ಹೇಳಿದರು.

ರಾತ್ರಿ 9.19: ಕಾಂಗ್ರೆಸ್‌ನ ರಣದೀಪ್‌ ಸುಜೇìವಾಲಾ ಮತ್ತು ಆರ್‌ಪಿಎನ್‌ ಸಿಂಗ್‌ ಅವರಿಂದ ಮತ್ತೂಮ್ಮೆ ಕೇಂದ್ರ ಚುನಾವಣಾ ಆಯೋಗಕ್ಕೆ ಭೇಟಿ. ಮತ್ತೂಮ್ಮೆ ಮನವಿ ಸಲ್ಲಿಕೆ.

ರಾತ್ರಿ 9.19: ಕೇಂದ್ರ ಚುನಾವಣಾ ಆಯೋಗ ದಿಂದ ಮಹತ್ವದ ಸಭೆ. 2ಮತಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಂಬಂಧ ವೀಡಿಯೋ ವೀಕ್ಷಿಸುತ್ತಿದ್ದ ಆಯೋಗ. ಆದರೆ ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ.

ರಾತ್ರಿ 9.33: ಬಿಜೆಪಿಯಿಂದ ಮೂರನೇ ಬಾರಿಗೆ ಆಯೋಗಕ್ಕೆ ಭೇಟಿ. ಆಯೋಗದ ಕಚೇರಿ ಮುಂದೆ ಮಾತನಾಡಿದ ಪಿಯೂಶ್‌ ಗೋಯಲ್‌ರಿಂದ ಕಾಂಗ್ರೆಸ್‌ ವಿರುದ್ಧ ಆಕ್ರೋಶ. ಇಷ್ಟೆಲ್ಲಾ ಬೆಳವಣಿಗೆಗೆ ಕಾರಣವಾದ ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು ಎಂದು ಆಕ್ರೋಶ.

ರಾತ್ರಿ 10.20: ಕಾಂಗ್ರೆಸ್‌ನ ರಣದೀಪ್‌ ಸುಜೇìವಾಲ, ರಾಜೀವ್‌ ಶುಕ್ಲಾರಿಂದ 4ನೇ ಬಾರಿಗೆ ಆಯೋಗದ ಕಚೇರಿಗೆ ಭೇಟಿ. ನ್ಯಾಯಸಮ್ಮತ ವಾಗಿಯೇ ನಿರ್ಧಾರ ನೀಡಬೇಕು. ಇಲ್ಲದಿದ್ದರೆ ಸುಪ್ರೀಂಕೋರ್ಚ್‌ ಮೆಟ್ಟಿಲೇರುವ ಬಗ್ಗೆ ಸುಳಿವು.
ವಘೇಲಾ: ಕಾಂಗ್ರೆಸ್‌ ವಿರುದ್ಧ ಬಂಡಾಯವೆದ್ದ ಶಂಕರ್‌ಸಿನ್ಹ ವಘೇಲಾ ಅವರು ಅಹ್ಮದ್‌ ಪಟೇಲ್‌ಗೆ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next