Advertisement

ಅಂಧೇರಿಯಲ್ಲಿ  ಆಹಾರ್‌ನ ಮೂರನೇ ಮಾಸಿಕ ಸಭೆ

03:10 PM Mar 02, 2018 | Team Udayavani |

ಮುಂಬಯಿ: ಪ್ರಸ್ತುತ ಅಗ್ನಿ ಸುರಕ್ಷತೆಯ ನಿಯಮಾವಳಿಗಳಲ್ಲಿ ಮಹತ್ತರ ಬದಲಾವಣೆಗಳನ್ನು ತರಲಾಗಿದೆ. ಆಹಾರ್‌ನ ನಿಯೋಗವು ಇತ್ತೀಚೆಗೆ ಮಹಾನಗರ ಪಾಲಿಕೆಯ ಆಯುಕ್ತ, ಮುಖ್ಯ ಅಗ್ನಿ ಶಾಮಕ ದಳದ ನಿರೀಕ್ಷಕ ಹಾಗೂ ಸಂಬಂಧಪಟ್ಟವರನ್ನು ಭೇಟಿಯಾಗಿ ಅಸಾಧ್ಯವಾದ ಷರತ್ತುಗಳನ್ನು ನೀಡಬಾರದಂತೆ ಚರ್ಚಿಸಿದೆ. ಆಹಾರ್‌ನ ಮನವಿಗೆ ಮನ್ನಣೆಯನ್ನು ನೀಡಿ ನಿಯಮಾವಳಿಗಳಲ್ಲಿ ಬಹಳಷ್ಟು ತಿದ್ದುಪಡಿಯನ್ನು ಮಾಡಲಾಗಿದೆ. ಸದ್ಯದಲ್ಲೇ ಅದರ ಅಂತಿಮ ಪ್ರತಿ ಕೈಸೇರಲಿದೆ. ಅಂತಿಮ ನಿಯಮಾವಳಿಗಳು ನಮ್ಮ ಉದ್ಯಮದ ಹಿತದೃಷ್ಟಿಯಿಂದ ಕೂಡಿರಲಿದ್ದು, ಇದನ್ನು ಪ್ರತಿ  ಹೊಟೇಲಿಗರು ಪಾಲಿಸಬೇಕು. ಆಹಾರ್‌ನ ಸೇವಾ ಶುಲ್ಕದ ಎಸ್‌ಎಲ್‌ಪಿ ಮಾನ್ಯ ಸುಪ್ರೀಂ ಕೋರ್ಟ್‌ನಲ್ಲಿ ಅಂತಿಮ ತೀರ್ಪು ಹೊರ ಬೀಳಲಿದೆ. ಆಹಾರ್‌ ನಿಯೋಗವು ಮಾನ್ಯ ಎಕ್ಸೈಸ್‌ ಸಚಿವ ಚಂದ್ರಶೇಖರ್‌ ಬಾವೆನ್‌ಕುಳೆ ಇವರನ್ನು ಭೇಟಿಯಾಗಿ ಪರ್ಮಿಟ್‌ನ ರದ್ಧತಿ ಎಫ್‌ಎಲ್‌-111 ಲೈಸನ್ಸ್‌ನ ವರ್ಗಾವಣೆಗೆ ಸದ್ಯ ತಗಲುವ ಎಂಟು ಸಲದ ಲೈಸನ್ಸ್‌ ದರದ ರದ್ಧತಿ ಇರುವ ಎಫ್‌ಎಲ್‌-111 ಲೈಸನ್ಸ್‌ ದರದಲ್ಲಿ ರದ್ಧತಿ ವಿನಾಯಿತಿ ಹಾಗೂ ಅನಗತ್ಯ ಪುಸ್ತಕಗಳ ರದ್ಧತಿಯ ಬಗ್ಗೆ ಸುದೀರ್ಘ‌ವಾಗಿ ಚರ್ಚೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಎಕ್ಸೈಸ್‌ ಡಿಪಾರ್ಟ್‌ಮೆಂಟ್‌ನ ಕಾರ್ಯದರ್ಶಿ ವಲ್ಸಾ ನಾಯರ್‌, ಆಯುಕ್ತೆ ಅಶ್ವಿ‌ನಿ ಜೋಶಿ ಹಾಗೂ ಇತರ ಅಧಿಕಾರಿಗಳು ಭಾಗವಹಿಸಿದ್ದರು. ಸಚಿವರು ಚರ್ಚೆಗೆ ಸೂಕ್ತವಾಗಿ ಸ್ಪಂದಿಸಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಕನಿಷ್ಠ ವೇತನ ಹಾಗೂ ವೇತನದಲ್ಲಿ ಆಹಾರ ಭತ್ತೆಯ ಕಡಿತದ ಬಗ್ಗೆ ಚರ್ಚಿಸಲು ಕಾರ್ಮಿಕ ಕಾರ್ಯಾಲಯ ಆಹಾರ್‌ಗೆ ಆಹ್ವಾನ ನೀಡಿದ್ದು, ಫೆ. 23 ರಂದು ಆಹಾರ್‌ನ ನಿಯೋಗವು ಮುಖ್ಯ ಕಾರ್ಮಿಕ ಆಯುಕ್ತರನ್ನು ಭೇಟಿಯಾಗಿ ವಿವರಗಳನ್ನು ಮಂಡಿಸಿ ಚರ್ಚಿಸಿದೆ ಎಂದು ಆಹಾರ್‌ನ ಅಧ್ಯಕ್ಷ ಸಂತೋಷ್‌ ಆರ್‌. ಶೆಟ್ಟಿ ಅವರು ನುಡಿದರು.

Advertisement

ಫೆ. 22 ರಂದು ಅಂಧೇರಿ ಪೂರ್ವದಲ್ಲಿರುವ ಸಾಯಿಪ್ಯಾಲೇಸ್‌ ಹೊಟೇಲ್‌ನಲ್ಲಿ ಸಂಜೆ 6.30 ರಿಂದ ನಡೆದ ಆಹಾರ್‌ನ ಮೂರನೇ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಎಫ್‌ಡಿಎಯ ಅಧಿಕಾರಿ ಎಂದು ವಿವಿಧ ಹೊಟೇಲ್‌ಗ‌ಳಲ್ಲಿ ಹಣ ವಸೂಲಿ ಮಾಡುತ್ತಿದ್ದ ನಕಲಿ ವ್ಯಕ್ತಿಯನ್ನು ಘಾಟ್‌ಕೋಪರ್‌ನಲ್ಲಿ ವಲಯ 6ರ ಮಾಜಿ ಉಪಾಧ್ಯಕ್ಷ ಸುನಿಲ್‌ ಪಾಟೀಲ್‌ ಅವರ ನೆರವಿನಿಂದ ಬಂಧಿಸಲಾಗಿದೆ. ಹೊಟೇಲಿಗರು ಇಂತಹ ನಕಲಿ ಅಧಿಕಾರಿಗಳಿಂದ ಜಾಗೃತರಾಗಿರಬೇಕು. ಯಾವುದೇ ವಿಷಯದಲ್ಲಿ ಸಂಶಯ ಬಂದಾಗ ತತ್‌ಕ್ಷಣ ಆಹಾರ್‌ನ ಆಯಾಯ ವಲಯಗಳ ಉಪಾಧ್ಯಕ್ಷರನ್ನು ಸಂಪರ್ಕಿಸಬೇಕು. ಅನಧಿಕೃತ ಆಹಾರ ವ್ಯಾಪಾರಸ್ಥರ ವಿರುದ್ಧ ಆಹಾರ್‌ ಮುಂಬಯಿ ಉತ್ಛ ನ್ಯಾಯಾಲದಲ್ಲಿ ದಾವೆ ಹೂಡಿದ್ದು, ಅದರ ವಿಚಾರಣೆ ಫೆ. 26 ರಂದು ನಡೆದಿದೆ. ಆಹಾರ್‌ ಸಂಸ್ಥೆಯ ಸದಸ್ಯರ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸಲಿದೆ ಎಂದರು.

ಸಭೆಯ ಪ್ರಾಯೋಜಕರಾದ ವಲಯ 7 ರ ಉಪಾಧ್ಯಕ್ಷ ರಾಜನ್‌ ಶೆಟ್ಟಿ ಇವರು ಸ್ವಾಗತಿಸಿ ಸಭೆಯ ಉದ್ಧೇಶವನ್ನು ವಿವರಿಸಿದರು. ಸಭೆಯಲ್ಲಿ ವಿವಿಧ ವಲಯಗಳ ಉಪಾಧ್ಯಕ್ಷರುಗಳಾದ ವಲಯ ಒಂದರ ಮಹೇಂದ್ರ ಕರ್ಕೇರ, ವಲಯ ಎರಡರ ಕೃಷ್ಣ ವಿ. ಶೆಟ್ಟಿ, ವಲಯ ಮೂರರ ವಿಜಯ್‌ ಶೆಟ್ಟಿ, ವಲಯ ನಾಲ್ಕರ ಸುದೇಶ್‌ ಶೆಟ್ಟಿ, ವಲಯ ಐದರ ವಿಜಯ್‌ ಎಸ್‌. ಶೆಟ್ಟಿ, ವಲಯ ಆರರ ಅಮರ್‌ ಶೆಟ್ಟಿ, ವಲಯ ಏಳರ ರಾಜನ್‌ ಶೆಟ್ಟಿ, ವಲಯ ಒಂಭತ್ತರ ಕರುಣಾಕರ ಶೆಟ್ಟಿ, ವಲಯ ಹತ್ತರ ಪ್ರಭಾಕರ ಶೆಟ್ಟಿ ಇವರು ತಮ್ಮ ತಮ್ಮ ವಲಯಗಳ ಕಾರ್ಯಚಟುವಟಿಕೆಗಳನ್ನು ವಿವರಿಸಿ ಎಲ್ಲರ ಸಹಕಾರ ಬಯಸಿದರು.

ಸಲಹೆಗಾರುಗಳಾದ ಚಂದ್ರಹಾಸ್‌ ಶೆಟ್ಟಿ, ಸಂತೋಷ್‌ ಶೆಟ್ಟಿ, ಆದರ್ಶ್‌ ಶೆಟ್ಟಿ, ಅರವಿಂದ ಶೆಟ್ಟಿ ಅವರು ಮಾತನಾಡಿ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ನಿರಂಜನ್‌ ಶೆಟ್ಟಿ, ಅತಿಫ್‌ ರಸೂಲ್‌ ಸೋಲ್ಜರ್‌, ಸಂತೋಷ್‌ ಶೆಟ್ಟಿ, ಹಾಗೂ ಸುನಿಲ್‌ ಪಾಟೀಲ್‌ ಇವರು ತಮ್ಮ ಅನಿಸಿಕೆಗಳನ್ನು ನುಡಿದರು.

ಸಭೆಯಲ್ಲಿ ಹೊಟೇಲ್‌ ಉದ್ಯಮಕ್ಕೆ ಸಂಬಂಧಿತ 9 ವಿವಿಧ ಮಳಿಗೆಗಳ ಪ್ರದರ್ಶನ ನಡೆಯಿತು. ಅವರನ್ನು ಅಧ್ಯಕ್ಷ ಸಂತೋಷ್‌ ಶೆಟ್ಟಿ ಅವರು ಪುಷ್ಪಗುಚ್ಚವನ್ನಿತ್ತು ಗೌರವಿಸಿದರು. ಗೌರವ ಜತೆ ಕಾರ್ಯದರ್ಶಿ ವಿವಿಧ ಮಳಿಗೆಗಳನ್ನು ಪರಿಚಯಿಸಿದರು. ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಹೊಟೇಲ್‌ ಉದ್ಯಮಿ  ವಾಸು ಶೆಟ್ಟಿ ಹೊಟೇಲ್‌ ವಿಹಾರ್‌ ಸಾಂತಾಕ್ರೂಜ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಿವಿಧ ಸದಸ್ಯರುಗಳಿಂದ ಬಂದ ಪ್ರಶಂಸ ಪತ್ರಗಳನ್ನು ಗೌರವ ಕಾರ್ಯದರ್ಶಿ ವಿಶ್ವಪಾಲ್‌ ಎಸ್‌. ಶೆಟ್ಟಿ ಓದಿದರು.

Advertisement

ವಲಯ 7ರ ಉಪಾಧ್ಯಕ್ಷ ರಾಜನ್‌ ಶೆಟ್ಟಿ ಅವರನ್ನು ವಲಯದ ಸದಸ್ಯರೊಂದಿಗೆ ಅಧ್ಯಕ್ಷ ಸಂತೋಷ್‌ ಆರ್‌. ಶೆಟ್ಟಿ ಅವರು ಸಮ್ಮಾನಿಸಿ ಗೌರವಿಸಿದರು. ಗೌರವ ಪ್ರಧಾರ ಕಾರ್ಯದರ್ಶಿ ವಿಶ್ವಪಾಲ್‌ ಶೆಟ್ಟಿ ವಂದಿಸಿದರು. ಸದಸ್ಯ ಬಾಂಧವರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಸಭೆಯ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next