Advertisement
ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಆಹಾರ್‌ನ ಅಧ್ಯಕ್ಷ ಶಿವಾನಂದ ಡಿ. ಶೆಟ್ಟಿ ಮಾತನಾಡಿ, ಹೊಟೇಲಿಗರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿರುವ ಆಹಾರ್ ಕಳೆದ 41 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಸದಸ್ಯರ ಆಶಾಕಿರಣವಾಗಿ ಗುರುತಿಸಿ ಕೊಂಡಿದೆ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲೂ ಹೊಟೇಲಿಗರ ಹಲವಾರು ಕ್ಲಿಷ್ಟಕರವಾದ ಸಮಸ್ಯೆಗಳನ್ನು ಬಗೆಹರಿ ಸುವಲ್ಲೂ ಯಶಸ್ವಿಯಾಗಿದೆ. ಸಂಬಂಧಪಟ್ಟ ವಿವಿಧ ಅಧಿಕಾರಿಗಳು, ಸಚಿವರು, ಶಾಸಕರು, ಸಂಸದರನ್ನು ಮುಖತಃ ಭೇಟಿಯಾಗಿ ಹೊಟೇಲಿಗರ ಸಮಸ್ಯೆಗಳನ್ನು ಅವರಿಗೆ ಮನವರಿಕೆ ಮಾಡಿದ್ದೇವೆ. ನಮ್ಮ ಹಗಲಿರುಳಿನ ಸಾರ್ಥಕ ಸೇವೆಯಿಂದ ಹಲವಾರು ಸಮಸ್ಯೆಗಳಿಗೆ ಪರಿಹಾರ ಲಭಿಸಿದೆ ಎನ್ನಲು ಸಂತೋಷವಾಗುತ್ತಿದೆ. ಆಹಾರ್ ಸಂಸ್ಥೆಯು ಅಭಿವೃದ್ಧಿಪಥದಲ್ಲಿ ಸಾಗುತ್ತಿದೆ. ಇಂದಿನ ಮಹಾಸಭೆಯನ್ನು ಪಂಚತಾರಾ ಹೊಟೇಲ್‌ನಲ್ಲಿ ಆಯೋಜಿಸಲು ಮಹಾಸಭೆ ಸಮಿತಿಯ ಕಾರ್ಯಾಧ್ಯಕ್ಷ ವಿಜಯ ಶೆಟ್ಟಿ ಮತ್ತು ಅವರಿಗೆ ಸಹಕರಿಸಿದ ಮಹೇಶ್ ಶೆಟ್ಟಿ ಅವರ ಸಹಕಾರವನ್ನು ಮರೆಯುವಂತಿಲ್ಲ. ಕೊರೊನಾ ಅಂಗವಾಗಿ ಸರಕಾರವು ಹೊಟೇಲಿಗರಿಗೆ ಹಲವಾರು ಮಾರ್ಗಸೂಚಿಗಳನ್ನು ನೀಡಿದ್ದು, ಅದಕ್ಕೆ ತಕ್ಕಂತೆ ವ್ಯವಹರಿಸಬೇಕು. ನ್ಯಾಯಬದ್ಧವಾಗಿ ವ್ಯವಹಾರ ಮಾಡಿದಾಗ ಮಾತ್ರ ನಾವು ಯಾರಿಗೂ ಹೆದರುವ ಆವಶ್ಯಕತೆಯಿಲ್ಲ. ಸರಕಾರದ ನಿಯಮಗಳನ್ನು ಪಾಲಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಆಹಾರ್‌ನ ಸಾಧನೆಯಲ್ಲಿ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಹಾಗೂ ಉಪಸಮಿತಿಗಳ ಪಾತ್ರ ಅಪಾರವಾಗಿದೆ. ಅವರೆಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಯತ್ತ ಸಾಗಿಸೋಣ. ಸದಸ್ಯರ ಸಮಸ್ಯೆಗಳಿಗೆ ಏಕತೆ ಮತ್ತು ಒಗ್ಗಟ್ಟಿನಿಂದ ಸಂಘಟಿತರಾಗಿ ಸಹಕರಿಸೋಣ ಎಂದರು.
Related Articles
Advertisement
ಆಹಾರ್‌ನ ಮಾಜಿ ಅಧ್ಯಕ್ಷ, ಸಲಹೆಗಾರ ಲಯನ್ ಸಂತೋಷ್ ಆರ್. ಶೆಟ್ಟಿ ಮಾತನಾಡಿ, ಆಹಾರ್‌ನ ಪ್ರಸ್ತುತ ಅಧ್ಯಕ್ಷ ಶಿವಾನಂದ ಶೆಟ್ಟಿ ಮತ್ತು ಅವರ ತಂಡವು ಉತ್ತಮ ಕೆಲಸಗಳನ್ನು ಮಾಡುತ್ತಿದೆ. ಆಹಾರ್ ಇಂದು ಸ್ಟಾರ್ ಹೊಟೇಲ್‌ನಲ್ಲಿ ಮಹಾಸಭೆಯನ್ನು ಮಾಡುವಷ್ಟು ಬೆಳೆದಿದೆ ಎನ್ನುವುದು ಹೆಮ್ಮೆಯ ವಿಷಯವಾಗಿದೆ. ಆಹಾರ್‌ನಿಂದ ಇನ್ನಷ್ಟು ಉತ್ತಮ ಕಾರ್ಯಗಳು ನಡೆಯುತ್ತಿರಲಿ ಎಂದು ಹಾರೈಸಿದರು.
ಆಹಾರ್‌ನ ಮಾಜಿ ಅಧ್ಯಕ್ಷ ಹಾಗೂ ಸಲಹೆಗಾರ ಎ. ಬಿ. ಶೆಟ್ಟಿ ಮಾತನಾಡಿ, ಹೊಟೇಲಿಗರ ಸಮಸ್ಯೆಗಳನ್ನು ಪರಿಹರಿಸುತ್ತಾ ಆಹಾರ್ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ ಎಂದು ತಿಳಿಸಿದರು. ಆಹಾರ್ ಮಾಜಿ ಅಧ್ಯಕ್ಷ ಮತ್ತು ಸಲಹೆಗಾರ ನಾರಾಯಣ ಆಳ್ವ ಮಾತನಾಡಿ, ಕೋವಿಡ್ ಲಾಕ್‌ಡೌನ್ ಸಂದರ್ಭ ಕಷ್ಟ ಏನೆಂಬುದು ಎಲ್ಲರಿಗೂ ಅರಿವಾಗಿದೆ. ಆಹಾರ್‌ನ ಸಾಧನೆ ಅಭಿನಂದನೀಯ ಎಂದರು.
ಆಹಾರ್‌ನ ಮಾಜಿ ಅಧ್ಯಕ್ಷರಾದ ಅರವಿಂದ ಶೆಟ್ಟಿ, ಸಂತೋಷ್ ಶೆಟ್ಟಿ, ಸುಧಾ ಕರ್ ಶೆಟ್ಟಿ ಮೊದಲಾದವರು ಆಹಾರ್‌ನ ಸಾಧನೆಗಳನ್ನು ವಿವರಿಸಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಕಳೆದ ಸಾಲಿನ ಎಸ್‌ಎಸ್‌ಸಿ, ಎಚ್‌ಎಸ್‌ಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಹೊಟೇಲಿಗರ ಮಕ್ಕಳನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ಕೋವಿಡ್ ಮಾರ್ಗ
ಸೂಚಿಗಳಿಗೆ ಅನುಗುಣವಾಗಿ ಮಹಾಸಭೆ ಯನ್ನು ಆಯೋಜಿಸಲಾಗಿತ್ತು.
ಶಶಿಕಾಂತ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ದರು. ಆಹಾರ್‌ನ ಕಾರ್ಯದರ್ಶಿ ಸುಕೇಶ್ ಶೆಟ್ಟಿ ವಂದಿಸಿದರು. ಆಹಾರ್‌ನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ವಿವಿಧ ಉಪಸಮಿತಿಗಳು, ಪ್ರಾದೇಶಿಕ ವಲಯಗಳ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡು ಸಹಕರಿಸಿದರು. ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಆಹಾರ್ ಕುಟುಂಬದವನಾದ ನನಗೆ ಇಂದು ನನ್ನದೇ ಮನೆಯಿಂದ ಸಮ್ಮಾನ ಲಭಿಸಿದೆ. ಆಹಾರ್ ಫೈವ್‌ಸ್ಟಾರ್ ಹೊಟೇಲ್‌ನಲ್ಲಿ ಮಹಾಸಭೆಯನ್ನು ಆಯೋಜಿಸುವಷ್ಟು ಬೆಳೆದು ನಿಂತಿರುವುದು ಅಭಿಮಾನದ ಸಂಗತಿಯಾಗಿದೆ. ಆಹಾರ್ ಪ್ರತಿಯೊಂದು ಸಮಯದಲ್ಲೂ ಹೊಟೇಲಿಗರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದೆ. ಸಂಸ್ಥೆಯು ಉತ್ತರೋತ್ತರ ಅಭಿವೃದ್ಧಿಯನ್ನು ಕಾಣಲಿ. ಸಮ್ಮಾನಿಸಿದ ಎಲ್ಲರಿಗೂ ಕೃತಜ್ಞತೆಗಳು. ನನ್ನ ಮೇಲೆ ಗೌರವ ಮತ್ತು ಪ್ರೀತ್ಯಾಭಿಮಾನದಿಂದ ಬಂಟರ ಸಂಘದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದು, ಸಂಘದ ಪ್ರತಿಷ್ಠೆ, ಘನತೆಯನ್ನು ಹೆಚ್ಚಿಸಲು ಸದಾ ಶ್ರಮಿಸುತ್ತೇನೆ. ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಸದಾಯಿರಲಿ. –ಚಂದ್ರಹಾಸ್ ಕೆ. ಶೆಟ್ಟಿ, ಅಧ್ಯಕ್ಷರು, ಬಂಟರ ಸಂಘ ಮುಂಬಯಿ