Advertisement

ಆಹಾರ್‌ನ 39ನೇ ವಾರ್ಷಿಕ ಮಹಾಸಭೆ, ವಿಚಾರ ಸಂಕಿರಣ

05:03 PM Dec 18, 2018 | Team Udayavani |

ಮುಂಬಯಿ: ಆಹಾರ್‌ ಸಂಸ್ಥೆಯು ಪ್ರಸ್ತುತ ಬಲಿಷ್ಠಗೊಂಡಿದ್ದು, 39 ವರ್ಷಗಳನ್ನು ಪೂರೈಸಿದ ಸಂಸ್ಥೆಯು ಹೊಟೇಲ್‌ ಉದ್ಯಮಿಗಳ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಸಂಸ್ಥೆಯ ಹೆಸರನ್ನು ಸರಕಾರದ ಅಥವಾ ಇನ್ನಿತರ ಯಾವುದೆ ವಿಭಾಗಗಳಲ್ಲೂ ಹೇಳಿದರು ಕೂಡಾ ಅರ್ಧದಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿದೆ ಎನ್ನಲು ಸಂತೋಷವಾಗುತ್ತಿದೆ. ಆಹಾರ್‌ನ ಪೂರ್ವಾಧ್ಯಕ್ಷರಾದ ದತ್ತ ಕದಂ ಮತ್ತು ರಮಾನಾಥ ಪಯ್ಯಡೆ ಹಾಗೂ ಇನ್ನಿತರ ಮಾಜಿ ಅಧ್ಯಕ್ಷರುಗಳ ಯೋಗದಾನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಸಂಸ್ಥೆಯ ಸದಸ್ಯರು ಪ್ರಯತ್ನಪಟ್ಟರೆ ಯಾವುದೇ ಸಮಸ್ಯೆಗಳಿಗೂ ಪರಿಹಾರ ಸಿಗಲು ಸಾಧ್ಯವಿದೆ ಎನ್ನುವುದಕ್ಕೆ ಸಂಸ್ಥೆಯ ಮುಂದೆ ಹಲವಾರು ನಿದರ್ಶಗಳಿವೆ. ಹೊಟೇಲಿಗರು ಒಗ್ಗಟ್ಟಾಗಿ, ಒಮ್ಮತದಿಂದ ಒಗ್ಗೂಡಿದಾಗ ಸಮಸ್ಯೆಗಳ ಪರಿಹಾರ ಮತ್ತಷ್ಟು ಸುಲಭವಾಗುತ್ತದೆ. ಆದ್ದರಿಂದ ಭವಿಷ್ಯದಲ್ಲಿ ನಾವೆಲ್ಲರು ಸಂಘಟಿತರಾಗಿ ಹೋರಾಟ ಮಾಡುವ ಉದ್ದೇಶವನ್ನಿಟ್ಟುಕೊಳ್ಳಬೇಕು ಎಂದು ಆಹಾರ್‌ನ ಅಧ್ಯಕ್ಷ ಸಂತೋಷ್‌ ಶೆಟ್ಟಿ ಅವರು ಅಭಿಪ್ರಾಯಿಸಿದರು.

Advertisement

ಡಿ. 14 ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನಡೆದ ಆಹಾರ್‌ನ 39ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸ್ತುತ ವರ್ಷದಲ್ಲಿ ಆಹಾರ್‌ ಹೊಟೇಲ್‌ ಉದ್ಯಮಕ್ಕೆ ಸಂಬಂಧಿಸಿದ ಹೆಚ್ಚಿನ ಸಮಸ್ಯೆಗಳನ್ನು ಪರಿಹಾರವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ. ನೋಟ್‌ ಬ್ಯಾನ್‌, ಜಿಎಸ್‌ಟಿ, ಡ್ರೈಡೇ ಸಮಸ್ಯೆ, ಎಫ್‌ಎಸ್‌ಐ, ಹೈವೇ, ಗಾರ್‌ಬೇಜ್‌, ಪ್ಲಾಸ್ಟಿಕ್‌ ಬ್ಯಾನ್‌, ಸಂಸಾರ್‌ ಹೊಟೇಲ್‌ನ ಗ್ಯಾಸ್‌ ದುರಂತ, ಕಮಲಾ ಮಿಲ್‌ ಬೆಂಕಿ ದುರಂತ, ಬಿಎಂಸಿ ಸಮಸ್ಯೆ, ಪೊಲೀಸ್‌ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಸೇರಿದಂತೆ ನೂರಾರು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇದು ಆಹಾರ್‌ನ ಪ್ರತಿಷ್ಠೆಯನ್ನು  ಹೆಚ್ಚಿಸಿದೆ. ಸಂಸ್ಥೆಯ ಪ್ರಸ್ತುತ ದೇಶದ ಗಮನ ಸೆಳೆಯುವಲ್ಲೂ ಯಶಸ್ವಿಯಾಗಿದ್ದು, ಇದು ನಮ್ಮೆಲ್ಲರ ಒಗ್ಗಟ್ಟಿನ ಕಾರ್ಯಕ್ಕೆ ಸಂದ ಜಯವಾಗಿದೆ. ಭವಿಷ್ಯದಲ್ಲೂ ಸಂಸ್ಥೆಯ ಎಲ್ಲಾ ಕಾರ್ಯಗಳಿಗೆ ಹೊಟೇಲಿಗರ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂದರು.

ಮಹಾಸಭೆಯಲ್ಲಿ ಹಿರಿಯ ಹೊಟೇಲ್‌ ಉದ್ಯಮಿಗಳಾದ ವಿಶ್ವನಾಥ ಸಿ. ಶೆಟ್ಟಿ ಮತ್ತು ವನಿತಾ ವಿ. ಶೆಟ್ಟಿ, ಸುರೇಶ್‌ ಪೂಜಾರಿ,  ಪ್ರದೀಪ್‌ ಆರ್‌. ಶೆಟ್ಟಿ ಮತ್ತು ಲೀಲಾವತಿ ಪಿ. ಶೆಟ್ಟಿ, ಬಾಲಕೃಷ್ಣ ಕೆ. ಶೆಟ್ಟಿ ಮತ್ತು ಸಾವಿತ್ರಿ ಬಿ. ಶೆಟ್ಟಿ, ನಾರಾಯಣ ಆರ್‌. ಶೆಟ್ಟಿ ಮತ್ತು ಶಕುಂತಲಾ ಎನ್‌. ಶೆಟ್ಟಿ, ಹರ್ಷಾಲ್‌ ರವಿಪಾಲ್‌ ಸಿ. ಸಿಂಗ್‌ ಗಾಂಧಿ,  ಅಹಮದ್‌ ಡಿ. ಲೋರಿಯಾ, ಶಾಂತಾರಾಮ ಶೆಟ್ಟಿ ಮತ್ತು ಚಂದ್ರಕಲಾ ಎಸ್‌. ಶೆಟ್ಟಿ, ರಘುರಾಮ ಕೆ. ಶೆಟ್ಟಿ, ಆಹಾರ್‌ನ ಮಾಜಿ ಅಧ್ಯಕ್ಷ ಆದರ್ಶ್‌ ಬಿ. ಶೆಟ್ಟಿ ದಂಪತಿ, ರವೀಂದ್ರನಾಥ ಎಂ. ನೀರೆ ದಂಪತಿ, ಶಶಿಧರ ಜಿ. ಶೆಟ್ಟಿ ದಂಪತಿ, ಜಗದೀಶ್‌ ಶೆಟ್ಟಿ ದಂಪತಿಯನ್ನು ಸಮ್ಮಾನಿಸಲಾಯಿತು.

ಸಮ್ಮಾನಿತರು ಸಂದಭೋìಚಿತವಾಗಿ ಮಾತನಾಡಿದರು. ಸಂಸ್ಥೆಯ ಮಾಜಿ ಅಧ್ಯಕ್ಷರುಗಳಾದ ಲಯನ್‌ ಸಂತೋಷ್‌ ಆರ್‌. ಶೆಟ್ಟಿ, ಆದರ್ಶ್‌ ಶೆಟ್ಟಿ, ಚಂದ್ರಹಾಸ ಕೆ. ಶೆಟ್ಟಿ, ನಾರಾಯಣ ಆಳ್ವ, ಸುಧಾಕರ ಶೆಟ್ಟಿ, ಅರವಿಂದ ಶೆಟ್ಟಿ ಅವರು ಸಂದಭೋìಚಿತವಾಗಿ ಮಾತನಾಡಿದರು. ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ವಿಶ್ವಪಾಲ್‌ ಶೆಟ್ಟಿ ಅವರು ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ದಯಾನಂದ ಡಿ. ಶೆಟ್ಟಿ ಅವರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಸದಸ್ಯರು ಸರ್ವಾನುಮತದಿಂದ ಅಂಗೀಕರಿಸಿದರು.

ಮುಂದಿನ ಅವಧಿಗೆ ಚುನಾವಣೆ ನಡೆಯುವ ಸಲುವಾಗಿ ಅಧ್ಯಕ್ಷ ಮತ್ತು ಪದಾಧಿಕಾರಿಗಳ ನೇಮಕ ಪ್ರಕ್ರಿಯೆಗಳಿಗಾಗಿ ಅರ್ಜಿಯ ಯಾದಿಯನ್ನು ಚುನಾವಣಾಕಾರಿ ನ್ಯಾಯವಾದಿ ಡಿ. ಕೆ. ಶೆಟ್ಟಿ ಅವರು ಓದಿದರು. ಗರಿಷ್ಠ ಅಂಕಗಳನ್ನು ಪಡೆದ ಹೊಟೇಲ್‌ ಕಾರ್ಮಿಕರ ಮಕ್ಕಳನ್ನು ವಿದ್ಯಾರ್ಥಿ ವೇತನವನ್ನಿತ್ತು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಲಕ್ಕಿಡಿಪ್‌ ಡ್ರಾ ಮಾಡಲಾಯಿತು. ಸೌಮ್ಯಾ ಶೆಟ್ಟಿ, ಸತ್ಯಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಗೌರವ ಕಾರ್ಯದರ್ಶಿ ವಿಶ್ವಪಾಲ್‌ ಶೆಟ್ಟಿ ವಂದಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಯಿತು.

Advertisement

ಆಹಾರ್‌ನ ಗೌರವ ಪ್ರಧಾನ ಕಾರ್ಯದರ್ಶಿ ವಿಶ್ವಪಾಲ್‌ ಎಸ್‌. ಶೆಟ್ಟಿ, ಗೌರವ ಕೋಶಾಧಿಕಾರಿ ಜೆ. ಡಿ. ಶೆಟ್ಟಿ, ಗೌರವ ಜತೆ ಕಾರ್ಯದರ್ಶಿ ಸಮಿತ್‌ ಆರ್‌. ಅರಸ, ಗೌರವ ಜೊತೆ ಕೋಶಾಧಿಕಾರಿ ರಾಜೇಶ್‌ ಎಸ್‌. ನಾಯಕ್‌ ಹಾಗೂ ವಲಯ ಒಂದರ ಉಪಾಧ್ಯಕ್ಷ ಮಹೇಂದ್ರ ಎಸ್‌. ಕರ್ಕೇರ, ವಲಯ ಎರಡರ ಉಪಾಧ್ಯಕ್ಷ ಕೃಷ್ಣ ವಿ. ಶೆಟ್ಟಿ, ವಲಯ ಮೂರರ ಉಪಾಧ್ಯಕ್ಷ ವಿಜಯ ಕೆ. ಶೆಟ್ಟಿ, ವಲಯ ನಾಲ್ಕರ ಉಪಾಧ್ಯಕ್ಷ ಸುರೇಶ್‌ ಎಸ್‌. ಶೆಟ್ಟಿ, ವಲಯ ಐದರ ಉಪಾಧ್ಯಕ್ಷ ವಿಜಯ ಎಸ್‌. ಶೆಟ್ಟಿ, ವಲಯ ಆರರ ಉಪಾಧ್ಯಕ್ಷ ಅಮರ್‌ ಎಸ್‌. ಶೆಟ್ಟಿ, ವಲಯ ಏಳರ ಉಪಾಧ್ಯಕ್ಷ ರಾಜನ್‌ ಆರ್‌. ಶೆಟ್ಟಿ, ವಲಯ ಎಂಟರ ಉಪಾಧ್ಯಕ್ಷ ಭುಜಂಗ ಎಸ್‌. ಶೆಟ್ಟಿ, ವಲಯ ಒಂಭತ್ತರ ಉಪಾಧ್ಯಕ್ಷ ಕರುಣಾಕರ ಎಸ್‌. ಶೆಟ್ಟಿ, ವಲಯ ಹತ್ತರ ಉಪಾಧ್ಯಕ್ಷ ಪ್ರಭಾಕರ ಬಿ. ಶೆಟ್ಟಿ ಹಾಗೂ ಸಲಹಾ ಸಮಿತಿ, ವಿವಿಧ ಉಪಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು. 

ಚಿತ್ರ-ವರದಿ : ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next