Advertisement

ಮಹಾರಾಷ್ಟ್ರದಲ್ಲಿ ಕೋವಿಡ್19 ರುದ್ರ ನರ್ತನ: ಗುರುವಾರ ಒಂದೇ ದಿನ 25 ಸಾವು, 229 ಹೊಸ ಪ್ರಕರಣ

09:16 AM Apr 11, 2020 | Mithun PG |

ಮುಂಬೈ:  ಕೋವಿಡ್ 19 ವೈರಸ್ ಗೆ ಮಹಾರಾಷ್ಟ್ರ ತತ್ತರಿಸಿ ಹೋಗಿದ್ದು ಗುರುವಾರ ಒಂದೇ ದಿನ 25 ಮಂದಿ ಪ್ರಾಣ ತ್ಯೆಜಿಸಿದ್ದಾರೆ. ಸೋಂಕಿತರ ಪ್ರಮಾಣದಲ್ಲೂ ಕೂಡ ಭಾರೀ ಏರಿಕೆ ಕಂಡುಬಂದಿದ್ದು 229 ಹೊಸ ಪ್ರಕರಣಗಳು ದಾಖಲಾಗಿವೆ.

Advertisement

ಆ ಮೂಲಕ ರಾಜ್ಯದಲ್ಲಿ ವೈರಸ್ ಸೋಂಕಿತರ ಸಂಖ್ಯೆ 1,364ಕ್ಕೆ ಏರಿಕೆಯಾಗಿದೆ. ಮಾತ್ರವಲ್ಲದೆ ಒಟ್ಟಾರೆ ಬಲಿಯಾದವರ ಸಂಖ್ಯೆ 98ಕ್ಕೆ ಜಿಗಿದಿದೆ. ವಾಣಿಜ್ಯ ರಾಜಧಾನಿ ಮುಂಬೈ ಮಹಾನಗರಿಯೊಂದರಲ್ಲೇ ಗುರುವಾರ 79 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ಮುಂಬೈನಲ್ಲಿ ಸೋಂಕಿತರ ಸಂಖ್ಯೆ 857ಕ್ಕೆ ಏರಿಕೆಯಾಗಿದೆ. ಅಂತೆಯೇ ಇಲ್ಲಿ ಇಂದು 9 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ಮುಂಬೈನಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 65ಕ್ಕೆ ಏರಿಕೆಯಾಗಿದೆ.

ಮುಂಬೈ ಬಳಿಕ ಕೊರೋನಾ ವೈರಸ್ ಗೆ ಮಹಾರಾಷ್ಟ್ರದಲ್ಲಿ ತೀವ್ರ ಹೊಡೆತಕ್ಕೆ ಸಿಕ್ಕ ಜಿಲ್ಲೆಯೆಂದರೆ ಅದು ಪುಣೆ. ಪುಣೆಯಲ್ಲಿ ಇಂದು ಒಂದೇ ದಿನ 14 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಇಲ್ಲಿ ಸೋಂಕಿತರ ಪ್ರಮಾಣ 200ರ ಗಡಿ ದಾಟಿದೆ. ಉಳಿದಂತೆ ಥಾಣೆ,  ಅಹಮದ್ ನಗರ್.ಸಾಂಗ್ಲಿ, ನಾಗ್ ಪುರ್, ಅರುಂಗಬಾದ್ , ಲಾತೂರ್, ಬುಲ್ದಾನ ಮುಂತಾದ ಜಿಲ್ಲೆಗಳಲ್ಲಿ ಸೋಂಕಿತರ ಪ್ರಮಾಣ ಏರುಗತಿಯಲ್ಲಿ ಸಾಗಿದೆ.

ರಾಜ್ಯದ ಸೋಂಕಿತರಲ್ಲಿ 125 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.