Advertisement

Bollywood: ಸುನೀಲ್‌ ಶೆಟ್ಟಿ ಪುತ್ರನ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿ

07:05 PM Mar 09, 2024 | Team Udayavani |

ಮುಂಬಯಿ: ಕರಾವಳಿ ಬೆಡಗಿ ಪೂಜಾ ಹೆಗ್ಡೆ ಸಲ್ಮಾನ್‌ ಖಾನ್‌ ಅವರ ʼಕಿಸಿ ಕಾ ಬಾಯ್ ಕಿಸಿ ಕಿ ಜಾನ್ʼ ಸಿನಿಮಾದಲ್ಲಿ ಕಾಣಿಸಿಕೊಂಡ ಬಳಿಕ ಇದೀಗ ಮತ್ತೊಂದು ಬಾಲಿವುಡ್‌ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

ʼತಡಪ್ʼ ಸಿನಿಮಾದ ಮೂಲಕ ಬಿಟೌನ್‌ ಗೆ ಎಂಟ್ರಿಯಾದ ಸುನೀಲ್ ಶೆಟ್ಟಿ ಪುತ್ರ ಅಹಾನ್‌ ಶೆಟ್ಟಿ ಅವರ ಸಿನಿಮಾದಲ್ಲಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಕ್ಕೆ ಖ್ಯಾತ ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ಅವರು ಬಂಡವಾಳ ಹಾಕಲಿದ್ದಾರೆ.

ಸಿನಿಮಾಕ್ಕೆ ʼಸಂಕಿʼ ಎಂದು ಟೈಟಲ್‌ ಇಡಲಾಗಿದೆ. ಇದೊಂದು ಲವ್‌ ಸ್ಟೋರಿ ಸಿನಿಮಾವಾಗಿದ್ದು, ಮುಂದಿನ ವರ್ಷದ(2025) ಫೆ.14 ರಂದು ಸಿನಿಮಾ ರಿಲೀಸ್‌ ಆಗಲಿದೆ ಎನ್ನಲಾಗಿದೆ. ಅದ್ನಾನ್ ಶೇಖ್ ಹಾಗೂ ಯಾಸಿರ್ ಜಾ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ.

ಸಿನಿಮಾದ ಇತರೆ ಪಾತ್ರವರ್ಗದ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

ಬಹುಭಾಷಾ ನಟಿಯಾಗಿರುವ ಪೂಜಾ ಹೆಗ್ಡೆ ಸಲ್ಮಾನ್‌ ಖಾನ್‌ ಜೊತೆಗಿನ ಸಿನಿಮಾದಲ್ಲಿ ನಟಿಸಿ, ಬಿಟೌನ್‌ ನಲ್ಲಿ ಸದ್ದು ಮಾಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next