Advertisement
ಪ್ರಾಯೋಜಕ ವಲಯ 8ರ ಉಪಾಧ್ಯಕ್ಷ ಭುಜಂಗ ಶೆಟ್ಟಿ ಅವರ ಸ್ವಾಗತ ಭಾಷಣದೊಂದಿಗೆ ಸಭೆಯು ಪ್ರಾರಂಭಗೊಂಡಿತು. ಆಹಾರ್‌ನ ಅಧ್ಯಕ್ಷ ಸಂತೋಷ್ ಆರ್. ಶೆಟ್ಟಿ ಮಾತನಾಡಿ, ಪ್ರತಿ ವರ್ಷ ಮಹಾನಗರ ಪಾಲಿಕೆ ಹೊಟೇಲಿಗರ ಅರ್ಜಿಯ ಮೇಲೆ ಮಾನ್ಸೂನ್ ಶೆಡ್ ಅನ್ನು ಹಾಕಲು ಪರವಾನಿಗೆಯನ್ನು ನೀಡುತ್ತಿತ್ತು. ಆದರೆ ಪ್ರಸಕ್ತ ವರ್ಷ ಪರವಾನಿಗೆಯನ್ನು ನೀಡದೆ ಮಾನ್ಸೂನ್ ಶೆಡ್ ಅನ್ನು ತೆರವುಗೊಳಿಸಲು ಮಹಾನಗರ ಪಾಲಿಕೆಯ ಅಧಿಕಾರಿಗಳು 48 ತಾಸುಗಳ ನೋಟಿಸ್ ನೀಡಿದ್ದರು.
ಸದ್ಯ ಮಹಾನಗರ ಪಾಲಿಕೆಯು ಯಾವ ರೀತಿಯ ಕಂಟೈನರ್‌ಗಳನ್ನೂ ಉಪಯೋಗಿಸಲು ಬಿಡುತ್ತಿಲ್ಲ ಮತ್ತು ಅದರ ಬದಲಿಗೆ ಪರ್ಯಾಯ ವಸ್ತುಗಳನ್ನೂ ಪರಿಚಯಿಸುತ್ತಿಲ್ಲ. ಈ ಸಂಬಂಧ ಆಹಾರ್ ಸಚಿವರು, ಮುಖ್ಯಮಂತ್ರಿ ಹಾಗೂ ಪರಿಸರ ಇಲಾಖೆಯಲ್ಲಿ ಮಾತುಕತೆಯನ್ನು ನಡೆಸಿದ್ದು ಸದ್ಯದಲ್ಲೇ ಸಮಾಧಾನಕರ ಫಲಿತಾಂಶ ಸಿಗಬಹುದೆಂದು ತಿಳಿಸಿದರು.
Related Articles
ಸಭೆಯಲ್ಲಿ ಸಲಹೆಗಾರರಾದ ಚಂದ್ರಹಾಸ ಕೆ. ಶೆಟ್ಟಿ, ಆದರ್ಶ್ ಬಿ. ಶೆಟ್ಟಿ, ನಾರಾಯಣ್ ಆಳ್ವ ಹಾಗೂ ಸುಧಾಕರ ವೈ. ಶೆಟ್ಟಿ ಸಮಯೋಚಿತವಾಗಿ ತಮ್ಮ ಸಲಹೆ/ಸೂಚನೆಗಳನ್ನು ಸದಸ್ಯರಿಗೆ ನೀಡಿದರು.
Advertisement
ಈ ಸಂದರ್ಭದಲ್ಲಿ ನಿರಂಜನ್ ಶೆಟ್ಟಿ (ಮಹಾನಗರ ಪಾಲಿಕೆ ಉಪಸಮಿತಿ), ಅಕ್ಷಯ್ ಶೆಟ್ಟಿ (ಎಫ್‌ಎಸ್‌ಎಸ್‌ಎಐ ಉಪ ಸಮಿತಿ), ಹರಿಶ್ಚಂದ್ರ ಶೆಟ್ಟಿ (ಎಫ್‌ಎಸ್‌ಎಸ್‌ಎಐ ಉಪ ಸಮಿತಿ) ಹಾಗೂ ಮಹೇಶ್ ಶೆಟ್ಟಿ (ಪ್ರಮೋಶನ್ ಉಪಸಮಿತಿ) ಅವರು ತಮ್ಮ ಉಪಸಮಿತಿಯ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು.
ಕೋಶಾಧಿಕಾರಿ ಜೆ. ಡಿ. ಶೆಟ್ಟಿ ಅವರು ಮಾತನಾಡಿ, ಝೋಮ್ಯಾಟೊ, ಸ್ವಿಗ್ಗಿ ಯಂತಹ ಸಂಸ್ಥೆಯಿಂದ ಜಿಆರ್‌ಒವೈ ಕಿಚನ್‌ನ ಉಪಯೋಗಿಸಿ ನಮ್ಮ ಉದ್ಯೋಗಕ್ಕೆ ಹಾನಿ ಮಾಡುತ್ತಿದೆ. ಇದರ ವಿರುದ್ಧ ನಾವೆಲ್ಲರೂ ಒಟ್ಟಾಗಿ ಹೋರಾಡಬೇಕಿದೆ ಎಂದು ತಿಳಿಸಿದರು. ಕೆ.ವಿ. ಶೆಟ್ಟಿ ಅವರು ಮಾನ್ಸೂನ್ ಶೆಡ್ ವಿಷಯದಲ್ಲಿ ಜರಗಿದ 3 ಸಭೆಗಳ ಬಗ್ಗೆ ವಿವರಿಸಿದರು.
ಹೊಟೇಲ್ ಸಾಯಿ ಪ್ಯಾಲೆಸ್‌ನ ಮಾಲಕ ರವಿ ಶೆಟ್ಟಿ ಅವರನ್ನು ಸಹಕಾರಕ್ಕಾಗಿ ಸಮ್ಮಾನಿಸಲಾಯಿತು. ಸಭೆಯ ಪ್ರಾಯೋಜಕ ವಲಯ 8ರ ಅಧ್ಯಕ್ಷ ಭುಜಂಗ ಶೆಟ್ಟಿ ಅವರನ್ನು ಅವರ ವಲಯದ ಸದಸ್ಯರು ಸಮ್ಮಾನಿಸಿದರು.
ಉಪಾಧ್ಯಕ್ಷರಾದ ಮಹೀಂದ್ರ ಎಸ್. ಕರ್ಕೇರ (ವಲಯ-1), ಕೆ.ವಿ. ಶೆಟ್ಟಿ (ವಲಯ -2), ವಿಜಯ್ ಕೆ. ಶೆಟ್ಟಿ (ವಲಯ -3), ಸುರೇಶ್ ಎಸ್. ಶೆಟ್ಟಿ (ವಲಯ -4), ಅಮರ್ ಶೆಟ್ಟಿ (ವಲಯ -6), ವಿಜಯ್ ಎಸ್. ಶೆಟ್ಟಿ (ವಲಯ – 5), ರಾಜನ್ ಶೆಟ್ಟಿ (ವಲಯ -7), ಕರುಣಾಕರ್ ಶೆಟ್ಟಿ (ವಲಯ – 9), ಭುಜಂಗ ಶೆಟ್ಟಿ (ವಲಯ -8) ಹಾಗೂ ಪ್ರಭಾಕರ ಶೆಟ್ಟಿ (ವಲಯ -10) ಅವರು ತಮ್ಮ ವಲಯದ ಕಾರ್ಯಚಟುವಟಿಕೆ ಬಗ್ಗೆ ವಿವರಿಸಿದರು.
ಗೌರವ ಜತೆ ಕಾರ್ಯದರ್ಶಿ ಸಮಿತ್ ಅರಸರು ಪ್ರದರ್ಶನ ಮಳಿಗೆಯ 13 ವ್ಯಾಪಾರಿಗಳನ್ನು ಪರಿಚಯಿಸಿ ಸಮ್ಮಾನಿಸಿದರು. ಗೌ.ಪ್ರ. ಕಾರ್ಯದರ್ಶಿ ವಿಶ್ವಪಾಲ್ ಶೆಟ್ಟಿ ಅವರು ವಂದಿಸಿದರು.