ಮುಂಬಯಿ: ಹೊಟೇಲ್ ಉದ್ಯಮದ ಪ್ರತಿಷ್ಠಿತ ಇಂಡಿಯನ್ ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ (ಆಹಾರ್) ಇದರ 39 ನೇ ವಾರ್ಷಿಕ ರೆಸ್ಟೋರೆಂಟ್ ಬಿಜಿನೆಸ್ ಎಕ್ಸಿಬೀಷನ್ ಮತ್ತು ವಾರ್ಷಿಕ ಮಹಾಸಭೆಯು ಡಿ. 14 ರಂದು ಕುರ್ಲಾ ಪೂರ್ವದ ಬಂಟರ ಸಂಘದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ದಿನಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಆಹಾರ್‌ನ ಅಧ್ಯಕ್ಷ ಸಂತೋಷ್ ಆರ್. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಬೆಳಗ್ಗೆ 10 ಕ್ಕೆ ರೆಸ್ಟೋರೆಂಟ್ ಬಿಜಿನೆಸ್ ಎಕ್ಸಿಬಿಷನ್-2018 ನಡೆಯಿತು. ಕಾರ್ಯಕ್ರಮವನ್ನು ಆಹಾರ್‌ನ ಮಾಜಿ ಅಧ್ಯಕ್ಷ, ಸಲಹೆಗಾರ, ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಇದರ ನಿರ್ದೇಶಕ ಸಂತೋಷ್ ಆರ್. ಶೆಟ್ಟಿ ಅವರು ಉದ್ಘಾಟಿಸಿದರು. ಮಧ್ಯಾಹ್ನ 12 ರಿಂದ ಆಹಾರ್ವೇಧ ವಿಷಯವಾಗಿ ಹರೀಶ್ ಶೆಟ್ಟಿ ಹಾಗೂ ಮಧ್ಯಾಹ್ನ 12.45 ರಿಂದ ಫಾಯರ್ ಸೇಫ್ಟಿ ಆಡಿಟ್ ಆ್ಯಂಡ್ ಟ್ರೈನಿಂಗ್ ವಿಷಯವಾಗಿ ಎಫ್‌ಎಸ್‌ಎಐ ಇದರ ರಾಜೇಶ್ ಜಿ. ಷಿರ್ಕೆ ಅವರು ಉಪನ್ಯಾಸ ನೀಡಿದರು.
ಅಪರಾಹ್ನ 4 ರಿಂದ ಆಹಾರ್ 39 ನೇ ವಾರ್ಷಿಕ ಮಹಾಸಭೆಯು ಸಂಸ್ಥೆಯ ಅಧ್ಯಕ್ಷ ಸಂತೋಷ್ ಆರ್. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಮಾರಂಭದಲ್ಲಿ ಹೊಟೇಲ್ ಉದ್ಯಮಿ, ಆಹಾರ್‌ನ ಮಾಜಿ ಅಧ್ಯಕ್ಷ, ಪ್ರಸ್ತುತ ಸಲಹೆಗಾರ ಎಸ್. ಎಂ. ಶೆಟ್ಟಿ ಅವರಿಗೆ ಆಹಾರ್‌ನ ಪ್ರತಿಷ್ಠಿತ ಲೈಫ್ ಟೈಮ್ ಅಚೀವ್‌ಮೆಂಟ್ ಅವಾರ್ಡ್‌ನ್ನು ಹಾಗೂ ಪ್ರಸಿಡೆಂಟ್ ನಾಮಿನಿ ಅವಾರ್ಡ್‌ನ್ನು ನಿರಂಜನ ಶೆಟ್ಟಿ ಅವರಿಗೆ ಸಂಸ್ಥೆಯ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರ ಉಪಸ್ಥಿತಿಯಲ್ಲಿ ಪ್ರದಾನಿಸಲಾಯಿತು.
ಅಲ್ಲದೆ ಕಳೆದ ಎಸ್‌ಎಸ್‌ಸಿ ಮತ್ತು ಎಚ್‌ಎಸ್‌ಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಹೊಟೇಲ್ ಉದ್ಯೋಗಿಗಳ ಸುಮಾರು 11 ಪ್ರತಿಭಾವಂತ ಮಕ್ಕಳನ್ನು ನಗದು ಬಹುಮಾನದೊಂದಿಗೆ ಗೌರವಿಸಲಾಯಿತು. ಆಹಾರ್‌ನ ಗೌರವ ಪ್ರಧಾನ ಕಾರ್ಯದರ್ಶಿ ವಿಶ್ವಪಾಲ್ ಎಸ್. ಶೆಟ್ಟಿ, ಗೌರವ ಕೋಶಾಧಿಕಾರಿ ಜೆ. ಡಿ. ಶೆಟ್ಟಿ, ಗೌರವ ಜತೆ ಕಾರ್ಯದರ್ಶಿ ಸಮಿತ್ ಆರ್. ಅರಸ, ಗೌರವ ಜೊತೆ ಕೋಶಾಧಿಕಾರಿ ರಾಜೇಶ್ ಎಸ್. ನಾಯಕ್ ಹಾಗೂ ವಲಯ ಒಂದರ ಉಪಾಧ್ಯಕ್ಷ ಮಹೇಂದ್ರ ಎಸ್. ಕರ್ಕೇರ, ವಲಯ ಎರಡರ ಉಪಾಧ್ಯಕ್ಷ ಕೃಷ್ಣ ವಿ. ಶೆಟ್ಟಿ, ವಲಯ ಮೂರರ ಉಪಾಧ್ಯಕ್ಷ ವಿಜಯ ಕೆ. ಶೆಟ್ಟಿ, ವಲಯ ನಾಲ್ಕರ ಉಪಾಧ್ಯಕ್ಷ ಸುರೇಶ್ ಎಸ್. ಶೆಟ್ಟಿ, ವಲಯ ಐದರ ಉಪಾಧ್ಯಕ್ಷ ವಿಜಯ ಎಸ್. ಶೆಟ್ಟಿ, ವಲಯ ಆರರ ಉಪಾಧ್ಯಕ್ಷ ಅಮರ್ ಎಸ್. ಶೆಟ್ಟಿ, ವಲಯ ಏಳರ ಉಪಾಧ್ಯಕ್ಷ ರಾಜನ್ ಆರ್. ಶೆಟ್ಟಿ, ವಲಯ ಎಂಟರ ಉಪಾಧ್ಯಕ್ಷ ಭುಜಂಗ ಎಸ್. ಶೆಟ್ಟಿ, ವಲಯ ಒಂಬತ್ತರ ಉಪಾಧ್ಯಕ್ಷ ಕರುಣಾಕರ ಎಸ್. ಶೆಟ್ಟಿ, ವಲಯ ಹತ್ತರ ಉಪಾಧ್ಯಕ್ಷ ಪ್ರಭಾಕರ ಬಿ. ಶೆಟ್ಟಿ ಹಾಗೂ ಸಲಹಾ ಸಮಿತಿ, ವಿವಿಧ ಉಪಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.
ಪ್ರಾಯೋಜಕರಾಗಿ ಡೈಯಾಜಿಯೋ, ಪೆಪ್ಸಿ, ಪೆನೊìಡ್ ರೀಕಾರ್ಡ್, ಅದಾನಿ ಎಲೆಕ್ಟಿÅಸಿಟಿ, ಸಹ ಪ್ರಾಯೋಜಕರಾಗಿ ರೋಸ್ಸಾರಿ, ಕಿಂಗ್‌ಫಿಶರ್, ವಿಕೆಎಲ್, ಸುಜೀ, ಮೆನ್ಸಾನ್, ಪ್ರೊಫೆಕ್ಟ್ ಕ್ಯಾಪಿಟಲ್, ರಹೇಜಾ ಯುನಿವರ್ಸಲ್, ನೆಸ್ಟೆಲೇ ಪ್ರೊಫೇಶನಲ್, ಎಸ್. ಎಲ್. ರಹೇಜಾ ಆಸ್ಪಿಟಲ್ ಇನ್ನಿತರ ಸಂಸ್ಥೆಗಳು ಸಹಕರಿಸಿದವು. ದಿನಪೂರ್ತಿ ನಡೆದ ಕಾರ್ಯಕ್ರಮಗಳಲ್ಲಿ ಹೊಟೇಲ್ ಉದ್ಯಮಿಗಳು, ಸಂಸ್ಥೆಯ ಸದಸ್ಯ ಬಾಂಧವರು ಪಾಲ್ಗೊಂಡಿದ್ದರು.
ಚಿತ್ರ-ವರದಿ : ಸುಭಾಷ್ ಶಿರಿಯಾ