Advertisement

Sunset View Point ಆಗುಂಬೆಯಲ್ಲಿ ಕೇಳುತ್ತಿದ್ಯಾ ಜಣ ಜಣ ಕಾಂಚಾಣದ ಸದ್ದು!?

07:29 PM Aug 16, 2023 | Shreeram Nayak |

ತೀರ್ಥಹಳ್ಳಿ : ಪರಿಸರ ಪ್ರೇಮಿಗಳಿಂದ ಹಿಡಿದು ಪ್ರವಾಸಿಗರಿಗೂ ಅಚ್ಚುಮೆಚ್ಚಿನ ತಾಣವಾಗಿರುವ
ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಎಂದು ಹೆಸರುವಾಸಿಯಾಗಿರುವ ಆಗುಂಬೆ ಘಾಟಿಯಲ್ಲಿ ಈಗ ಪ್ರವಾಸಿಗರ ದಂಡು ಹರಿದು ಬರುತ್ತಿದೆ.

Advertisement

ಅದರಲ್ಲೂ ಆಗುಂಬೆಯ ಸೂರ್ಯಾಸ್ತ ಮಾನ ವೀಕ್ಷಣಾ ಸ್ಥಳ ಸದ್ಯ ಪ್ರವಾಸಿಗರ ಹಾಟ್ ಫೇವರೆಟ್ ಸ್ಥಳವಾಗಿ ಗುರುತಿಸಿಕೊಂಡಿದೆ. ಹಾಗಾಗಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು ಪ್ರವಾಸಿಗರು ವಾಹನವನ್ನು ಎಲ್ಲಿಂದರಲ್ಲಿ ನಿಲ್ಲಿಸಿ ಹೋಗುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರದೇಶ ಕಾರ್ಕಳ ವನ್ಯ ಜೀವಿ ವಿಭಾಗಕ್ಕೆ ಒಳಪಟ್ಟಿರುತ್ತದೆ. ವಾಹನವನ್ನು ಮೇಲ್ಭಾಗದಲ್ಲಿ ನಿಲ್ಲಿಸಿ ಸೂರ್ಯಾಸ್ತಮಾನವನ್ನು ವೀಕ್ಷಣೆ ಮಾಡಬೇಕು.

ಆದರೆ ವಾಹನಗಳು ಸೂರ್ಯಾಸ್ತಮಾನ ಪ್ರದೇಶದಲ್ಲೇ ನಿಂತರು ಕೂಡ ಅಲ್ಲಿನ ತನಿಖಾಧಿಕಾರಿಗಳ ಕೊಠಡಿಯಲ್ಲಿರುವ ಸಿಬ್ಬಂದಿಗಳು ಪಾರ್ಕಿಂಗ್ ಬಗ್ಗೆ ಯಾವುದೇ ಚಾಕಾರು ಎತ್ತುತ್ತಿಲ್ಲ. ಈ ಪ್ರದೇಶದಲ್ಲಿ ಹಣವನ್ನು ಕೊಟ್ಟರೆ ಎಷ್ಟು ಹೊತ್ತು ಬೇಕಾದರೂ ವಾಹನ ನಿಲುಗಡೆ ಮಾಡಬಹುದು. ವಾಹನಗಳನ್ನು ಅಡ್ಡಾ ದಿಡ್ಡಿ, ಬೇಕಾಬಿಟ್ಟಿಯಾಗಿ ಆ ಪ್ರದೇಶದಲ್ಲಿ ನಿಲ್ಲುವುದರಿಂದ ಶಿವಮೊಗ್ಗ -ಉಡುಪಿಗೆ ಓಡಾಡುವ ವಾಹನಗಳಿಗೆ ಸಮಸ್ಯೆ ಆಗುತ್ತಿದೆ ಎಂದು ಕೆಲವರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next