Advertisement

ದುರಸ್ತಿ ಹಿನ್ನಲೆ: ಆಗುಂಬೆ ಘಾಟಿ ಒಂದು ತಿಂಗಳು ಬಂದ್

02:44 PM Mar 31, 2019 | Team Udayavani |

ಹೆಬ್ರಿ: ರಾಷ್ಟ್ರೀಯ ಹೆದ್ದಾರಿ 169 ಏ ಆಗುಂಬೆ ಘಾಟಿಯಲ್ಲಿ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ಮಾಡುವ ಸಲುವಾಗಿ ಎಪ್ರಿಲ್ ಒಂದರಿಂದ 30ರವರೆಗೆ ಒಂದು ತಿಂಗಳ ಕಾಲ ಘಾಟಿಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ.

Advertisement

ವಾಹನ ನಿಷೇಧದ ಬಗ್ಗೆ ಆದೇಶ ಹೊರಡಿಸಿರುವ ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ವಾಹನ ಸಂಚಾರಕ್ಕೆ ಬದಲಿ ಮಾರ್ಗಗಳನ್ನು ಸೂಚಿಸಿದ್ದಾರೆ. ಕಳೆದ ಮಳೆಗಾಲದಲ್ಲಿ ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿದು ಸಂಚಾರ ದುಸ್ತರವಾಗಿತ್ತು. ಗುಡ್ಡ ಕುಸಿತಕ್ಕೆ ಶಾಶ್ವತ ಪರಿಹಾರ ಮತ್ತು ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸುವಗಿ ಸಲುವಾಗಿ ಒಂದು ತಿಂಗಳ ಕಾಲ ದುರಸ್ತಿ ಕಾರ್ಯ ನಡೆಯಲಿದೆ.

ಬದಲಿ ಮಾರ್ಗ: ಒಂದು ತಿಂಗಳ ಘಾಟಿಯಲ್ಲಿನ ವಾಹನ ನಿರ್ಭಂದಿಂದಾಗಿ ಉಂಟಾಗುವ ಸಮಸ್ಯೆಗೆ ಸುಗಮ ಸಂಚಾರ ಕಲ್ಪಿಸಲು ಜಿಲ್ಲಾಧಿಕಾರಿಗಳು ಬದಲಿ ಮಾರ್ಗ ಸೂಚಿಸಿದ್ದಾರೆ. ಎಪ್ರಿಲ್ ಒಂದರಿಂದ ಎಪ್ರಿಲ್ 30ರವರೆಗೆ ಈ ಬದಲಿ ಮಾರ್ಗಗಳು ಅನ್ವಯವಾಗುತ್ತದೆ.

ಲಘು ವಾಹನಗಳು: ಸಾಮಾನ್ಯ ಬಸ್ಸುಗಳು, ಜೀಪು, ವ್ಯಾನ್, ಎಲ್.ಸಿ.ವಿ( ಮಿನಿ ವ್ಯಾನ್) ದ್ವಿಚಕ್ರ ವಾಹನಗಳು ಒಂದು ತಿಂಗಳ ಕಾಲ ತೀರ್ಥಹಳ್ಳಿ- ಕೊಪ್ಪ- ಶೃಂಗೇರಿ- ಮಾಳಾಘಾಟ್- ಕಾರ್ಕಳ- ಉಡುಪಿ ಮೂಲಕವಾಗಿ ಸಂಚರಿಸಬಹುದು.


ಭಾರಿ ವಾಹನಗಳು: ರಾಜಹಂಸ, ಐರಾವತ ಬಸ್ಸುಗಳು ಮತ್ತು ಖಾಸಗಿ ಲಕ್ಷುರಿ ಬಸ್ಸುಗಳು ಮತ್ತು ಬುಲೆಟ್ ಟ್ಯಾಂಕರ್ಸ್, ಷಿಪ್ ಕಾರ್ಗೋ ಕಂಟೈನರ್ಸ್, ಲಾಂಗ್ ಚಾಸೀಸ್ ವಾಹನಗಳು ಎಪ್ರಿಲ್ 30ರವರೆಗೆ ತೀರ್ಥಹಳ್ಳಿ- ಮಾಸ್ತಿಕಟ್ಟೆ- ಹೊಸಂಗಡಿ- ಸಿದ್ದಾಪುರ- ಕುಂದಾಪುರ- ಉಡುಪಿ ದಾರಿಯಲ್ಲಿ ಸಂಚಾರ ನಡೆಸಬೇಕು ಎಂದು ಶಿವಮೊಗ್ಗ ಜಿಲ್ಲಾಧಿಕಾರಿಯವರು ಅಧಿಸೂಚನೆ ಹೊರಡಿಸಿದ್ದಾರೆ.

ಈ ಬದಲಿ ಮಾರ್ಗದೊಂದಿಗೆ ಆಗುಂಬೆಯಲ್ಲಿರುವ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮಿನಿ ಬಸ್ ಗಳನ್ನು ತೀರ್ಥಹಳ್ಳಿ- ಆಗುಂಬೆ- ಬಿದರಗೋಡು- ಶೃಂಗೇರಿ ಮಾರ್ಗವಾಗಿಯೂ ಮತ್ತು ಸಾಮಾನ್ಯ ಬಸ್ಸುಗಳನ್ನು ತೀರ್ಥಹಳ್ಳಿ- ಕಲ್ಮನೆ- ಹೆಗ್ಗೋಡು- ರಾಮಕೃಷ್ಣಾಪುರ- ಕಮ್ಮರಡಿ- ಶೃಂಗೇರಿ ಮಾರ್ಗದಲ್ಲಿ ಸಂಚರಿಸಬಹುದಾಗಿದೆ.

Advertisement

ಮುಂದೂಡಿಕೆಯಾಗಿದ್ದ ದುರಸ್ತಿ ಕಾರ್ಯ: ಈ ಹಿಂದೆ ದುರಸ್ತಿ ಕಾರ್ಯ ನಡೆಸಲು ಮಾರ್ಚ್ ಒಂದರಿಂದ 31ರವರಗೆ ವಾಹನ ಸಂಚಾರ ನಿಷೇಧಿಸಿ ಆದೇಶ ಹೊರಡಿಸಲಾಗಿತ್ತು. ಆದರೆ ವಿದ್ಯಾರ್ಥಿಗಳ ಪರೀಕ್ಷಾ ಸಮಯವಾದ್ದರಿಂದ ಈ ಆದೇಶವನ್ನು ಮುಂದೂಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next