Advertisement

Agumbe ಬಳಿ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ಬಿದ್ದು ಅನಾಹುತ

12:38 PM Nov 18, 2023 | Kavyashree |

ತೀರ್ಥಹಳ್ಳಿ : ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ  ಕೊಟ್ಟಿಗೆಗೆ ಬೆಂಕಿ ತಗಲಿ ಕೊಟ್ಟಿಗೆ ಮತ್ತು ಹುಲ್ಲು ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ತಾಲೂಕಿನ ಆಗುಂಬೆ ಹೋಬಳಿಯ ನಂಟೂರು ಗ್ರಾಮದಲ್ಲಿ ಸಂಭವಿಸಿದೆ.

Advertisement

ನಿಲುವಾನೆ ನಿವಾಸಿ ಶ್ರೀನಿವಾಸ್ ಗೌಡ ಎಂಬವವರ ಮನೆಯ ಕೊಟ್ಟಿಗೆಗೆ ಬೆಂಕಿ ತಗಲಿದ್ದು, ಕೊಟ್ಟಿಗೆ ಮತ್ತು ಹುಲ್ಲು ಸಂಪೂರ್ಣವಾಗಿ ಸುಟ್ಟು ಹೋಗಿದೆ.

ಕೊಟ್ಟಿಗೆಯಲ್ಲಿ ಬೆಂಕಿ ಕಂಡ ಕೂಡಲೇ ಮಾಲಿಕ ಶ್ರೀನಿವಾಸ್ ಕೊಟ್ಟಿಗೆಯಲ್ಲಿದ್ದ ಜಾನುವಾರುಗಳ ಹಗ್ಗ ತೆಗೆದು ಯಾವುದೇ ಪ್ರಾಣ ಹಾನಿಯಾಗದಂತೆ ಕಾಪಾಡಿ ನಂತರ ಗ್ರಾಮಸ್ಥರ ಸಹಾಯ ಪಡೆದು ಅಗ್ನಿ ನಂದಿಸಲು ಪ್ರಯತ್ನಿಸಿದ್ದಾರೆ.

ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನಾ ಸ್ಥಳದಲ್ಲಿ ರಾಘವೇಂದ್ರ ಕುಂದಾದ್ರಿ, ಪಿ ಡಿ ಓ ವಿನಯ್, ಬಿಳಿಗೆರೆ ಮಂಜುನಾಥ್ ಸ್ಥಳೀಯರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next