Advertisement

ಆ್ಯಗ್ರಿಟೆಕ್‌ ಇಂಡಿಯಾ; ಬೃಹತ್‌ ಕೃಷಿ ಉತ್ಪನ್ನ ಪ್ರದರ್ಶನ ಮೇಳ

07:33 PM Sep 01, 2019 | Team Udayavani |

ಇಂದು ಭಾರತ ವೇಗವಾಗಿ ಬೆಳೆಯುತ್ತಿರುವ ಜಿ20 ರಾಷ್ಟ್ರಗಳಲ್ಲಿ ಒಂದಾಗಿದೆ. ದೇಶವು ಹಲವು ಕೃಷಿ ಸರಕುಗಳ ಪ್ರಮುಖ ರಫ್ತುದಾರನಾಗಿ ಹೊರಹೊಮ್ಮಿದೆ. ಈ ಖ್ಯಾತಿಗೆ ಪಾತ್ರವಾಗಲು ದ್ವಿದಳ ಧಾನ್ಯಗಳು, ಹಣ್ಣುಗಳು, ತರಕಾರಿಗಳು ಮತ್ತು ಡೈರಿ ಉತ್ಪನ್ನಗಳ ಉತ್ಪಾದನೆ ಕಾರಣವಾಗಿವೆ. ಕೃಷಿ ಕ್ಷೇತ್ರದಲ್ಲಿ ಭಾರತ ಇನ್ನೂ ಹೆಚ್ಚಿನದನ್ನು ಸಾಧಿಸುವ ಸಾಮರ್ಥ್ಯವನ್ನು ಹೊಂದಿದೆ. ಆಧುನಿಕ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳನ್ನು ಬಳಸಿಕೊಳ್ಳುವ ಮೂಲಕ ಅನೇಕ ಸಣ್ಣ ಹಿಡುವಳಿದಾರರು, ರೈತರು ಇನ್ನಷ್ಟು ಅಭಿವೃದ್ಧಿಯನ್ನು ಹೊಂದಬಹುದಾಗಿದೆ. 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಸೇರಿದಂತೆ ಇನ್ನೂ ಕೃಷಿ ಸಂಬಂಧಿತ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಭಾರತ ಸರ್ಕಾರ ಹೊಂದಿದೆ.

Advertisement

ಈ ನಿಟ್ಟಿನಲ್ಲಿ ಹಲವು ಸಂಘಸಂಸ್ಥೆಗಳೂ ಕಾರ್ಯನಿರತವಾಗಿವೆ. ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಮೂರು ದಿನಗಳ “ಆ್ಯಗ್ರಿ ಟೆಕ್‌ ಇಂಡಿಯಾ- 2019′ ಎಕ್ಸ್‌ಪೋ ಅದಕ್ಕೆ ಸಾಕ್ಷಿ. ಈ ಬಾರಿ ನಡೆದ 11ನೇ ಆವೃತ್ತಿಯಲ್ಲಿ 400ಕ್ಕೂ ಅಧಿಕ ಮಳಿಗೆಗಳಲ್ಲಿ, 30ಕ್ಕೂ ಹೆಚ್ಚು ದೇಶಗಳ ಸಂಸ್ಥೆಗಳು ತಾವು ಆವಿಷ್ಕರಿಸಿದ ಕೃಷಿ ಉತ್ಪನ್ನಗಳು, ತಂತ್ರಜ್ಞಾನಗಳನ್ನು ಪ್ರದರ್ಶನಕ್ಕಿಟ್ಟಿದ್ದವು. ಮೀಡಿಯಾ ಟುಡೇ ಗ್ರೂಪ್‌ ಈ ಪ್ರದರ್ಶನ ಮೇಳವನ್ನು ಆಯೋಜಿಸಿತ್ತು.

ರಾಜ್ಯದ ಗ್ರಾಮೀಣ ನಿವಾಸಿಗಳಿಗೆ, ಕೃಷಿಯು ಪ್ರಮುಖ ಉದ್ಯೋಗ. ಕರ್ನಾಟಕ, ಹಲವು ಕೃಷಿ ಉತ್ಪನ್ನಗಳ ಪ್ರಮುಖ ಉತ್ಪಾದಕ. ಅಲ್ಲದೆ ಏಷ್ಯಾದ ಅತಿದೊಡ್ಡ ಕೃಷಿ ಉತ್ಪಾದನಾ ಮಾರುಕಟ್ಟೆಗಳಲ್ಲಿ ಒಂದಾದ ಅಮೋರ್ಗೋಲ್‌ ನಮ್ಮ ಹುಬ್ಬಳ್ಳಿಯಲ್ಲೇ ಇರುವುದು ಮುಕುಟಪ್ರಾಯದಂತೆ. ಎಕ್ಸ್‌ಪೋದಲ್ಲಿ ವಿದೇಶಿ ಸಂಸ್ಥೆಗಳ ಪಾಲ್ಗೊಳ್ಳುವಿಕೆಯಿಂದ ತಂತ್ರಜ್ಞಾನ ವಿನಿಮಯದ ಲಾಭವೂ ಇದೆ. ಇದರಿಂದಾಗಿ ಸ್ಥಳೀಯ ಸಂಸ್ಥೆಗಳಿಗೆ ಎಕ್ಸ್‌ಪೋಷರ್‌ ದೊರೆಯುವುದು. ಅಲ್ಲದೆ ಯಾವುದೇ ಕೃಷಿ ಉತ್ಪನ್ನ ತಯಾರಕನಿಗೂ ಈ ಎಕ್ಸ್‌ಪೋ ವೇದಿಕೆಯನ್ನು ಕಲ್ಪಿಸುತ್ತದೆ.

ಹೆಚ್ಚಿನ ಮಾಹಿತಿಗೆ: 9036259062

Advertisement

Udayavani is now on Telegram. Click here to join our channel and stay updated with the latest news.

Next