Advertisement
ಎನ್.ಸಿ.ಸಿ. ಎಕ್ಸ್ ಕೆಡೆಟ್ಸ್ ಮತ್ತು ಪ್ರಸ್ತುತ ಕೆಡೆಟ್ ಗಳನ್ನೊಳಗೊಂಡ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ಯುವ ಪಡೆಯನ್ನೇ ಹೊಂದಿದ್ದ ಈ ತಂಡವು ಉಳುಮೆ ಪೂರೈಸಿ ನಾಟಿ ಮಾಡಲು ಸಮತಟ್ಟುಗೊಳಿಸಿದ ಗದ್ದೆಯಲ್ಲಿ ಸಾಲು ನಾಟಿ ಪದ್ಧತಿಯನ್ನು ಅನುಸರಿಸಿಕೊಂಡು ಭತ್ತದ ಸಸಿಯ (ನೇಜಿ) ನಾಟಿಯನ್ನು ಯಶಸ್ವಿಯಾಗಿ ನಡೆಸಿದರು.
Related Articles
Advertisement
ಕೃಷಿಯಿಂದ ವಿಮುಕ್ತರಾಗಿರುವ ರೈತರನ್ನು ಮರಳಿ ಕೃಷಿಯತ್ತ ಆಕರ್ಷಿಸುವಂತೆ ಪ್ರೋತ್ಸಾಹಿಸುವುದು ಮತ್ತು ಯುವ ಜನರಲ್ಲಿ ಕೃಷಿ ಬಗ್ಗೆ ಅರಿವು ಮೂಡಿಸುವ ಮುಖ್ಯ ಉದ್ದೇಶದಿಂದ ಸುಮಾರು 300 ರಷ್ಟು ಸದಸ್ಯರನ್ನೊಳಗೊಂಡ ಈ ತಂಡವು ಉಡುಪಿಯ ವಿವಿಧ ಪ್ರದೇಶದಲ್ಲಿ ಸುಮಾರು 16 ಎಕರೆ ಹಡಿಲು ಬಿದ್ದ ಗದ್ದೆಯನ್ನು ಈ ವರ್ಷ ನಾಟಿ ಮಾಡುತ್ತಿದೆ.