Advertisement
ಇಲ್ಲಿನ ಕೃಷಿ ವಿವಿಯ 33ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿಆನ್‌ಲೈನ್ ಮೂಲಕ ಘಟಿಕೋತ್ಸವಭಾಷಣ ಮಾಡಿದ ಅವರು, ಕೃಷಿಯಲ್ಲಿಸಾಕಷ್ಟು ಮಾರ್ಪಾಟುಗಳಾಗಲುಅಂತರ್ಜಲ ಮಟ್ಟ ಕಾಪಾಡುವುದು, ನೀರಾವರಿಯಲ್ಲಿ ಅಧಿಕ ನೀರು ಬಳಕೆ ಕಡಿಮೆ ಮಾಡುವುದು, ಅತ್ಯಧಿಕ ರಸಾಯನಿಕಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳಿಗೆ ಕಡಿವಾಣ ಹಾಕಬೇಕಿದೆ. ಅಲ್ಲದೇ ಜಾಗತಿಕ ತಾಪಮಾನ ಬದಲಾವಣೆ ಹಾಗೂ ಹಸಿರುಮನೆ ಪರಿಣಾಮಗಳಿಂದ ಕೃಷಿಗೆ ತೀವ್ರ ಹಿನ್ನೆಡೆಯುಂಟಾಗುವಸಾಧ್ಯತೆ ಇದ್ದು, ಇದಕ್ಕೆ ಸುಸ್ಥಿರ ಪರಿಹಾರ ಕಂಡುಕೊಳ್ಳಲೇಬೇಕಾದ ಅನಿವಾರ್ಯತೆ ಇದೆ ಎಂದರು.
Related Articles
Advertisement
ಕೃಷಿಯಲ್ಲಿ ನವೋದ್ಯಮಕ್ಕೆ ಒತ್ತು ನೀಡಲಾಗುತ್ತಿದ್ದು, ಮಹಿಳಾ ಉದ್ದಿಮೆದಾರರ ಪ್ರಮಾಣ ಶೇ.14 ಹಾಗೂ ಮಹಿಳಾ ಉದ್ಯೋಗಿಗಳ ಪ್ರಮಾಣ ಶೇ.25 ಮಾತ್ರ ಇದೆ. ಆಹಾರ ಸಂಸ್ಕರಣೆಕೇವಲ ಶೇ.2ರಷ್ಟಿದೆ. ಕೃಷಿ ಉತ್ಪನ್ನಗಳಮೌಲ್ಯವರ್ಧನೆಗೆ ಒತ್ತು ನೀಡದ ಹೊರತುಕೃಷಿ ಅಭಿವೃದ್ಧಿ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳುಸಾವಿರಾರು ಕೋಟಿ ರೂ. ಅನುದಾನವನ್ನುರೈತರಿಗೆ ನೀಡುತ್ತಿದ್ದು, ರೈತರಲ್ಲೂ ಹೊಸ ಕೃಷಿ ಮಾದರಿ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಸಚಿವ ಪಾಟೀಲ ಹೇಳಿದರು.
ಕುಲಪತಿ ಡಾ| ಮಹದೇವ ಬ. ಚೆಟ್ಟಿ ವಿಶ್ವವಿದ್ಯಾಲಯದ ಸಂಕ್ಷಿಪ್ತ ವಾರ್ಷಿಕ ವರದಿ ನೀಡಿದರು. ರಮೇಶ ದೇಸಾಯಿ ಸೇರಿದಂತೆ ವಿವಿಧ ನಿಕಾಯಗಳ ಡೀನ್‌ಗರು, ವಿದ್ಯಾ ವಿಷಯಕ ಪರಿಷತ್ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ರಾಜ್ಯದ ಕೃಷಿಯಲ್ಲಿ ವೈಜ್ಞಾನಿಕತೆ ಅಳವಡಿಸಿ ಕೃಷಿಕರನ್ನು ಕೃಷಿ ಉದ್ಯಮಿಗಳನ್ನಾಗಿ ಪರಿವರ್ತಿಸಲು ಸಮಗ್ರ ಕೃಷಿ ನೀತಿ ರೂಪಿಸಲು ಸಮಿತಿ ರಚಿಸಲಾಗಿದೆ. 60 ಸಾವಿರನವೋದ್ಯಮಗಳಲ್ಲಿ 500 ಕೃಷಿ ನವೋದ್ಯಮಗಳಿದ್ದು, ಇವುಗಳ ಪ್ರೇರೇಪಿಸಿ, ಕೃಷಿ ನವೋದ್ಯಮ ನೀತಿ ಜಾರಿಗೆ ತರಲಾಗುವುದು. – ಬಿ.ಸಿ. ಪಾಟೀಲ, ಕೃಷಿ ಸಚಿವ
ಕೃಷಿಗೆ ನೀರಿನ ಲಭ್ಯತೆ ಮುಂದಿನ ದಿನಗಳಲ್ಲಿ ತೀವ್ರವಾಗಿ ಕುಸಿತ ಕಾಣಲಿದ್ದು, ಶೇ.83ರಿಂದ 70ಕ್ಕೆ ಇಳಿಯಲಿದೆ. ಕೃಷಿ ವಿದ್ಯುತ್ ಬಳಕೆ ಕಡಿಮೆ ಮಾಡಬೇಕಾಗಿದೆ. ಪಂಜಾಬ, ಹರಿಯಾಣದಲ್ಲಿ ಬೆಳೆಯ ನಂತರ ಉಳಿವ ಮೇವು ಮತ್ತು ಹೊಟ್ಟನ್ನು ಸುಟ್ಟು ಹಾಕುವ ಬದಲು ಅದನ್ನು ಶಕ್ತಿಯಾಗಿ ಕೃಷಿಗೆ ಬಳಸಿಕೊಳ್ಳಬೇಕಿದೆ. – ಪ್ರೊ| ಅಶುತೋಷ ಶರ್ಮಾ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ