Advertisement
ಶಿಕ್ಷಣದಿಂದ ಮೌಲ್ಯಗಳು, ವೈಜ್ಞಾನಿಕ ಮನೋಭಾವ, ಚಿಂತನಶೀಲತೆ, ಜ್ಞಾನ ಸೃಜಿಸಬೇಕು ಎಂಬ ಮೂಲ ಪರಿಕಲ್ಪನೆಗಳಿದ್ದರೂ ಸಹ ಉದ್ಯೋಗವೇ ನಮ್ಮಲ್ಲಿ ಶಿಕ್ಷಣದ ಮಹತ್ವ, ಪ್ರಭಾವ ಮತ್ತು ಯಶಸ್ಸನ್ನು ಅಳೆಯುವ ಮಾನದಂಡವಾಗಿ ಬದಲಾಗಿದೆ. ಕಳೆದ ಐದಾರು ದಶಕಗಳಿಂದ ಆಳವಾಗಿ ಬೇರೂರಿರುವ ಶಿಕ್ಷಣದ ಈ ಯಶಸ್ಸಿನ ಮಾಪಕದಲ್ಲಿ ಕೃಷಿಗೆ ಸ್ಥಾನವೇ ಇರಲಿಲ್ಲ. ಓದಿ ಕೃಷಿಕನಾಗುವುದು ಎಂದರೆ ಶಿಕ್ಷಣದ ವೈಫಲ್ಯ ಎಂಬ ರೀತಿಯ ಮೂಢನಂಬಿಕೆಯೇ ಸೃಷ್ಟಿಯಾಗಿದೆ. ಇಂತಹ ಕಾಲಘಟ್ಟ ದಲ್ಲಿ ಕೃಷಿಯನ್ನು ಶಿಕ್ಷಣದ ವ್ಯಾಪ್ತಿಗೆ ತರುವ ಮೂಲಕ ವೃತ್ತಿಪರ ಕೃಷಿಕರನ್ನು ರೂಪಿಸಲು ಸರಕಾರ ಮುಂದಾಗುತ್ತಿರುವುದು ಪ್ರಶಂಸನೀಯ.
Related Articles
Advertisement
ಈ ಹಿನ್ನೆಲೆಯಲ್ಲಿ ಕೃಷಿ ಪಠ್ಯ ಕ್ರಮನ್ನು ಒಂಬತ್ತರಿಂದ ಹನ್ನೆರಡನೇ ತರಗತಿ ತನಕ ಅಂದರೆ ನಾಲ್ಕು ವರ್ಷಗಳ ಕಾಲ ಬೋಧಿಸಿ ಪ್ರಮಾಣ ಪತ್ರವನ್ನು ನೀಡುವ ಸರ ಕಾ ರದ ಪ್ರಯತ್ನಕ್ಕೆ ಸಾಮಾಜಿಕ ಮತ್ತು ಶೈಕ್ಷಣಿಕ ವಾಗಿ ಹೆಚ್ಚಿನ ಮಹತ್ವವಿದೆ.
ಆಸಕ್ತ ಮಕ್ಕಳಿಗೆ ಕೈತೋಟ, ಸಾಂಪ್ರದಾಯಿಕ ಕೃಷಿಯ ಜತೆಗೆ ಆಧುನಿಕ ಕೃಷಿ ಪದ್ಧತಿ, ಕೃಷಿ ಪರಿಸರದ ಸುತ್ತಲಿನ ಬೆಳವಣಿಗೆಗಳ ಶಿಕ್ಷಣವು ದೊರೆಯುವಂತೆ ಆಗಲಿ. ಜತೆಗೆ ಮುಂದಿನ ದಿನಗಳಲ್ಲಿ ಹೈನುಗಾರಿಕೆ, ಮೀನುಗಾರಿಕೆ, ಜೇನು ಸಾಕಣೆ, ಕೋಳಿಸಾಕಣೆ ಮುಂತಾದ ಗ್ರಾಮೀಣ ಪರಿಸರ ಆಧಾರಿತ ಜೀವನೋಪಾಯ ಸಾಧ್ಯತೆ, ಅವಕಾಶಗಳ ಬಗೆಗಿನ ಶಿಕ್ಷಣವು ಸಹ ದೊರೆಯುವಂತಹ ಪಠ್ಯಕ್ರಮವನ್ನು ರೂಪಿಸುವತ್ತ ಸರಕಾರ ಚಿಂತನೆ ನಡೆಸಬೇಕು.