Advertisement
ಇಡೀ ಜೀವಮಾನ ಕೃಷಿಯನ್ನು ನೆಚ್ಚಿಯೇ ಅಪ್ಪ ಬದುಕಿದ್ದು ಕೃಷಿ ಎಂದರೆ ನನಗೆ ನೆನಪಾಗುವುದೂ ಒಂದು ಅಪ್ಪ, ಇನ್ನೊಂದು ರಾಮನವಮಿ.
Related Articles
Advertisement
ಅದು ದೊಡ್ಡಕ್ಕನ ಮದುವೆಯ ಸಂದರ್ಭ. ಹಿಂದಿನ ದಿನ ಏನೋ ಕೆಲಸವಿದೆ ಅಂತ ಅಪ್ಪ ಹೊಲಕ್ಕೆ ಹೋಗಿದ್ದರು. ಬರುವಾಗ ಒಂದು ಸಣ್ಣ ಮಣ್ಣಿನ ಭರಣಿಯಲ್ಲಿ ಹೊಲದ ಮಣ್ಣನ್ನು ತುಂಬಿ ತಂದಿದ್ದರು. ಅಕ್ಕ ಗಂಡನ ಮನೆಗೆ ಹೊರಡುವಾಗ ಹಿರಿಯರೆಲ್ಲರ ಕಾಲಿಗೆ ನಮಸ್ಕರಿಸುತ್ತಾ, ಅಪ್ಪನ ಕಾಲಿಗೂ ನಮಸ್ಕರಿಸಿ ಎ¨ªಾಗ ಅಪ್ಪಆ ಕರಡಿಗೆಯನ್ನು ಕೈಗಿಟ್ಟರು. ಅಕ್ಕ ಅದನ್ನ ಅಪ್ಪನ ಜೀವವೇ ತನ್ನ ಕೈನಲ್ಲಿದೆ ಎನ್ನುವಂತೆ ಎದೆಗವುಚಿ ಹಿಡಿದುಕೊಂಡು ಗಂಡನ ಮನೆಗೆ ಹೊರಟು ಹೋದಳು.
ಯಾವುದೋ ಒಂದು ಸಣ್ಣ ವಿಷಯವನ್ನು ದೊಡ್ಡದು ಮಾಡಿ ಅವಳ ಗಂಡನ ಮನೆಯವರು ಅಕ್ಕನನ್ನು ಮೂರು ವರ್ಷ ನಮ್ಮ ಮನೆಗೆ ಕಳುಹಿಸಲಿಲ್ಲ. ಮುಂದೆ ಒಂದು ದಿನ ಬ್ಯಾಂಕಿನಲ್ಲಿ ಅಡವಿಟ್ಟಿದ್ದ ಅವರ ಆಸ್ತಿ ಹರಾಜಿಗೆ ಬಂದು ಅದನ್ನು ಅಪ್ಪಬಿಟ್ಟು ಬೇರೆ ಯಾರೂ ಪರಿಹರಿಸಲು ಸಾಧ್ಯವಿಲ್ಲ ಎನ್ನುವಂಥಾದಾಗ ಅವರ ಮನೆಯವರು ನಮ್ಮ ಮನೆಗೆ ಬರಲು ಒಲವು ತೋರಿಸಿದರು. ಅಕ್ಕ ಇದೇ ವಿಷಯವಾಗಿ ಕೊರಗಿ ಕೊರಗಿ ಒಣಗಿದ ಕಟ್ಟಿಗೆಯಂತಾಗಿದ್ದಳು.
ವಿಷಯ ಗೊತ್ತಾದ ತಕ್ಷಣ ಅಪ್ಪನನ್ನನ್ನು ಅವಳ ಮನೆಗೆ ಕಳುಹಿಸಿ ಕರೆದುಕೊಂಡು ಬಾ ಎಂದರು. ನಾನು ಹೋಗಿ ಕರೆದುಕೊಂಡು ಬಂದೆ. ಮನೆಗೆ ಬಂದ ಅಕ್ಕನನ್ನು ನೋಡಿದ ತಕ್ಷಣ ಅಪ್ಪಹೇಳಿದ್ದು ಒಂದೇ ಮಾತು, “ಬಂದದ್ದು ಬರ್ಲಿ… ನಾನ್ ನೋಡ್ಕೊàತೀನಿ…. ನೀನು ತಿಂದುಂಡು ಗಟ್ಟಿಯಾಗಿರು’ ಎಂದು.
ಅವಳು ಗಂಡನ ಮನೆಗೆ ಹೋಗಿದ್ದು, ವಾಪಸ್ಸು ಮನೆಗೆ ಬಂದದ್ದು ಎರಡೂ ರಾಮನವಮಿ ದಿನ.ಮನೆಯಲ್ಲಿ ಸಣ್ಣಪುಟ್ಟ ಕಾರಣಕ್ಕೆ ಸಿಟ್ಟಾಗಿ ಕೂರುತ್ತಿದ್ದ ನನ್ನ ರಮಿಸಲು ಅಪ್ಪ, “ನಾ ಅಡಿ ಇಡುವ ನನ್ನ ಹೊಲದ ಹಸುರು ನೀ. ಮುನಿಸೇಕೆ ಕೂಸೇ?’ ಎನ್ನುತ್ತಿದ್ದರು. ಕಲಿತು, ನೌಕರಿ ಹಿಡಿದು ಬದುಕು ಕಟ್ಟಿಕೊಳ್ಳಲು ಊರು ಬಿಟ್ಟು, ಮಹಾನಗರಗಳೆಂಬ ಪರದೇಶಿಗಳ ಸಂತೆಯಲ್ಲಿ ಸಣ್ಣದೊಂದು ಗೂಡು ಕಟ್ಟಿಕೊಳ್ಳಲು ಹೆಣಗಾಡಿದ್ದು ಸಾಕಾಗಿ, ಊರಿಗೆ ವಾಪಸ್ಸು ಬಂದು, ಅಪ್ಪಓಡಾಡಿದ ಹೊಲದಲ್ಲಿ ನೆಲೆ ನಿಂತು, “ನೀವು ಅಡಿಯಿಡುವ ನಿಮ್ಮ ಹೊಲದ ಹಸುರಾಗಿ ಬದುಕಲು ಬಂದಿದ್ದೇನೆ’ ಎಂದು ಹೇಳಿದ್ದು ಈ ಸಲದ ರಾಮನವಮಿಯದಲ್ಲಿ. ಹೀಗಾಗಿ ನನಗೆ ರಾಮನವಮಿ ಎಂದರೆ ಮೌನಿಯೊಬ್ಬನ ಧ್ಯಾನದಂತೆ ಬದುಕುತ್ತಿರುವ ಕಡಲ ಗಾಂಭೀರ್ಯದ ಅಪ್ಪ ನೆನಪಾಗುತ್ತಾರೆ. – ಮೈಥಿಲಿ ಧರ್ಮಣ್ಣ