Advertisement

ರೈತರು ಹತಾಶರಾಗದಿರಿ, ಆತ್ಮಹತ್ಯೆಗೆ ಯೋಚಿಸದಿರಿ: ಕೃಷಿ ಸಚಿವ ಬಿ.ಸಿ.ಪಾಟೀಲ ಮನವಿ

10:32 AM Apr 08, 2020 | keerthan |

ವಿಜಯಪುರ: ಕೋವಿಡ್-19 ರೋಗ ಯಾರೂ ಊಹಿಸಾಲಗದ ವಿಚಿತ್ರ ಸನ್ನಿವೇಶ ಸೃಷ್ಟಿಸಿದೆ. ಇಂತ ಸಂದರ್ಭದಲ್ಲಿ ಸರಕಾರ ಲಾಕ್‍ಡೌನ್ ನಿರ್ಬಂಧ ಹೇರಿದ್ದು, ರೈತರು ಕೂಡ ಸಮಸ್ಯೆ ಎದುರಿಸುವಂತಾಗಿದೆ. ಹಾಗಂತ ಯಾವುದೇ ರೈತರು ಬೆಳೆದ ಬೆಳೆ ಹಾಳು ಮಾಡುವುದು, ಆತ್ಮಸ್ಥೈರ್ಯ ಕಳೆದುಕೊಳ್ಳುವ, ಆತ್ಮಹತ್ಯೆ ಚಿಂತನೆ ಮಾಡಬಾರದು. ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅನ್ನದಾತರಲ್ಲಿ ಮನವಿ ಮಾಡಿದ್ದಾರೆ.

Advertisement

ಮಂಗಳವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸದ್ಯ ಸೃಷ್ಟಿಯಾಗಿರುವ ಸಂಕಷ್ಟದ ಸ್ಥಿತಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ನಮ್ಮ ಸರ್ಕಾರ ಸಿದ್ಧವಾಗಿದೆ ಎಂದರು.

ಪ್ರಸ್ತುತ ಸಂದರ್ಭದಲ್ಲಿ ಕೈಗೆ ಬಂದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸುವಲ್ಲಿ, ಮಾರಾಟ ಮಾಡುವಲ್ಲಿ ರೈತರು ಆರಂಭಿಕ ಹಂತದಲ್ಲಿ ತೊಂದರೆಯಾಗಿ, ಹಾನಿ ಅನುಭವಿಸಿರಬಹುದು. ಇದೀಗ ಕೃಷಿ-ತೋಟಗಾರಿಕೆ ಉತ್ಪನ್ನ ಸಾಗಾಟ-ಮಾರಾಟಕ್ಕೆ ಮುಕ್ತ ಅವಕಾಶ ನೀಡಲಾಗಿದೆ. ಹೀಗಾಗಿ ಯಾವುದೇ ರೈತರು ಹತಾಶರಾಗುವುದು ಬೇಡ. ಸರ್ಕಾರ ನಿಮ್ಮೊಂದಿಗೆ ಇದೆ ಎಂದು ಭವರಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next