Advertisement

ಕೋವಿಡ್ ಲಸಿಕೆ ಪಡೆದ ಕೃಷಿ ಸಚಿವ ಬಿ.ಸಿ. ಪಾಟೀಲ್

12:23 PM Mar 02, 2021 | Team Udayavani |

ಹಾವೇರಿ: ಕೃಷಿ ಸಚಿವ  ಬಿ.ಸಿ.ಪಾಟೀಲ್ ಅವರು ಹಿರೇಕೆರೂರಿನ ಸ್ವಗೃಹದಲ್ಲಿ ಸರ್ಕಾರಿ ವೈದ್ಯರಿಂದ ಕೋವಿಡ್ ಲಸಿಕೆ ಪಡೆದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೋವಿಡ್ ಲಸಿಕೆ ಪಡೆಯಲು ಹಿಂದೇಟು ಹಾಕುವುದು ಸರಿಯಲ್ಲ. ಕೆಲವರು ಈ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು, ಇದರತ್ತ ಯಾರೂ ಗಮನ ನೀಡಬಾರದು. ಕರ್ನಾಟಕ ಸರ್ಕಾರ ಜನರ ಸುರಕ್ಷತೆಯಿಂದ ಕೋವಿಡ್ ಲಸಿಕೆ ನೀಡುತ್ತಿದೆ‌. ಅದರಲ್ಲಿಯೂ ಪ್ರಧಾನಿ ನರೇಂದ್ರ‌ಮೋದಿ ಕೋವಿಡ್ ಲಸಿಕೆಯನ್ನು ಸರ್ಕಾರಿ ವೈದ್ಯರಿಂದ ಪಡೆದು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ ಎಂದರು.

ನಮ್ಮ ಭಾರತದಲ್ಲಿಯೇ ತಯಾರಿಸಿದ ಕೋವಿಡ್ ಲಸಿಕೆಗೆ ಪ್ರಶಂಸೆ ವ್ಯಕ್ತವಾಗಿದೆ. ಕೋವಿಡ್ ಸಂಘರ್ಷದ ಸಮಯದಲ್ಲಿ ಕರ್ನಾಟಕ ಹಾಗೂ ಭಾರತ ಸರ್ಕಾರ ಜನರೊಂದಿಗೆ ನಿಂತು ಅವರ ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡಿದೆ. ವೈದ್ಯರು ಲಸಿಕೆಗೆ ನೀಡಿದ ಬಳಿಕ‌ ಹೇಳಿದ ಕೆಲವು ಸರಳ ನಿಯಮಗಳನ್ನು ಪಾಲಿಸಿದರೆ ಸಾಕು. ಯಾವುದೇ ನಿರ್ಭೀತಿಯಿಂದ ಕೋವಿಡ್ ಲಸಿಕೆ ಪಡೆಯಬೇಕೆಂದು ಬಿ.ಸಿ ಪಾಟೀಲ್ ಕರೆ ನೀಡಿದರು.

ಇದನ್ನೂ ಓದಿ:  ಲೈಂಗಿಕ ದೌರ್ಜನ್ಯ ಪ್ರಕರಣ: ಜಾಮೀನು ಪಡೆದು ಹೊರಬಂದಾತ ಸಂತ್ರಸ್ತೆಯ ತಂದೆಯನ್ನು ಹತ್ಯೆಗೈದ !

Advertisement

Udayavani is now on Telegram. Click here to join our channel and stay updated with the latest news.

Next