Advertisement

ಕೃಷಿ , ಸಾಹಿತ್ಯ ಮಾನವ ಜೀವನದ ಅವಿಭಾಜ್ಯ ಅಂಗ

03:18 PM Nov 19, 2017 | |

ಕೆದಂಬಾಡಿ : ಕೃಷಿ ಮತ್ತು ಸಾಹಿತ್ಯ ಮಾನವ ಜೀವನದ ಅವಿಭಾಜ್ಯ ಅಂಗ. ಆದರೆ ಯುವಜನಾಂಗ ಇವೆರಡರಿಂದಲೂ ವಿಮುಖರಾಗುತ್ತಿದ್ದಾರೆ. ಹಾಗಾಗಿ ಕೃಷಿ ಮತ್ತು ಸಾಹಿತ್ಯವನ್ನು ಉಳಿಸುವ, ಬೆಳೆಸುವ ಕಾರ್ಯ ಆಗಬೇಕು ಎಂದು ಕಸಾಪ ತಾಲೂಕು ಘಟಕದ ಮಾಜಿ ಅಧ್ಯಕ್ಷ, ಕಾರ್ಕಳ ಸ.ಪ. ಕಾಲೇಜಿನ ಪ್ರಾಂಶುಪಾಲ ಡಾ| ವರದರಾಜ ಚಂದ್ರಗಿರಿ ಹೇಳಿದರು.

Advertisement

ಜಿಲ್ಲಾ ಕಸಾಪ ಪುತ್ತೂರು ಘಟಕದ ವತಿಯಿಂದ ಕೆದಂಬಾಡಿ ಸುಭಾಷ್‌ ರೈ ಅವರ ಕಿಲ್ಲೆ ನಿವಾಸದಲ್ಲಿ ನಡೆದ ಮನೆ-ಮನೆ ಸಾಹಿತ್ಯ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಹಿರಿಯ ಸಾಹಿತಿ, ನಿವೃತ್ತ ಪ್ರಾಧ್ಯಾಪಕ ಪ್ರೊ| ವಿ.ಬಿ ಅರ್ತಿಕಜೆ ಉದ್ಘಾಟಿಸಿ ಮಾತನಾಡಿ, ಹಸಿರು ಪರಿಸರದಲ್ಲಿ ಸಾಹಿತ್ಯದ
ಕಾರ್ಯ ಅರ್ಥಪೂರ್ಣವಾಗಿ ಮೂಡಿ ಬಂದಿದೆ ಎಂದರು.

ಆಸಕ್ತಿ ಮುಖ್ಯ
ಪ್ರಗತಿಪರ ಕೃಷಿಕ ಎ.ಕೆ. ಜಯರಾಮ ರೈ ಮಾತನಾಡಿ, ಕೃಷಿಯಲ್ಲಿ ಪ್ರಗತಿ ಸಾಧಿಸಬೇಕಾದರೆ ಆಸಕ್ತಿ ಮುಖ್ಯ. ಕೃಷಿ
ನಮಗೆ ಖುಷಿ ನೀಡುತ್ತದೆ ಎಂದರು. ತಾಲೂಕು ಕಸಾಪ ಅಧ್ಯಕ್ಷ ಐತ್ತಪ್ಪ ನಾಯ್ಕ ಮಾತನಾಡಿ, ಜನರಲ್ಲಿ ಓದುವ ಹವ್ಯಾಸವನ್ನು ಮೂಡಿಸುವ ಪ್ರಯತ್ನವನ್ನು ಸಾಹಿತ್ಯ ಪರಿಷತ್‌ ಮಾಡುತ್ತಿದೆ ಎಂದರು.

ಇದೇ ಸಂದರ್ಭ ಕಡಮಜಲು ಸುಭಾಷ್‌ ರೈ ದಂಪತಿಯನ್ನು ಸಮ್ಮಾನಿಸಲಾಯಿತು. ಎನ್‌.ಎಸ್‌. ಕಿಲ್ಲೆ ಪ್ರತಿಷ್ಠಾನದ ಅಧ್ಯಕ್ಷ
ಕಡಮಜಲು ಸುಭಾಷ್‌ ರೈ ಸ್ವಾಗತಿಸಿದರು. ಕಸಾಪ ಗೌರವ ಕೋಶಾಧಿಕಾರಿ ಎನ್‌.ಕೆ ಜಗನ್ನಿವಾಸ್‌ರಾವ್‌ ವಂದಿಸಿದರು. ಗೌರವ ಕಾರ್ಯದರ್ಶಿ ಡಾ| ಎಚ್‌.ಜಿ. ಶ್ರೀಧರ್‌ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next