Advertisement
ಎಣ್ಮಕಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಶೇಣಿ ಶ್ರೀಶಾರದಾಂಬ ಎಯುಪಿ ಶಾಲೆಯಲ್ಲಾಗಿದೆ ಈ ರೀತಿಯ ಕೃಷಿ ಪಾಠ ಕಳೆದ ಹಲವಾರು ವರ್ಷಗಳಿಂದ ಒಂದು ಪರಿಪಾಠದಂತೆ ನಡೆದುಕೊಂಡು ಬಂದಿರುವುದು.
ಕೃಷಿಯ ಬಾಲ ಪಾಠ
ಇಲ್ಲಿನ ಶಾಲಾ ಶಿಕ್ಷಕರು ವರ್ಷಂಪ್ರತಿ ಮುತುವರ್ಜಿ ವಹಿಸಿ ತರಕಾರಿ ಬೀಜ ಗಳನ್ನು ತಂದು ಹದಗೊಳಿಸಿದ ಜಾಗದಲ್ಲಿ ಮಕ್ಕಳ ಪುಟ್ಟ ಕೈಯಿಂದ ನೆಡಿಸಿ ಆಯಾಯ ಸಮಯಕ್ಕನುಗುಣವಾಗಿ ಹಾಕಬೇಕಾದ ನೀರಿನ ಪ್ರಮಾಣ, ಗೊಬ್ಬರ ಇನ್ನಿತರ ಕೃಷಿ ಪೋಷಣೆಯ ಕ್ರಮವನ್ನು ಸ್ವತ: ಪ್ರಾತ್ಯಕ್ಷಿಕೆಯಂತೆ ಬೋಧಿಸುವುದರ ಜತೆಗೆ ಮಕ್ಕಳಿಗೆ ಅನುಭವಯುಕ್ತವಾಗಿಸಲು ಇದೊಂದು ಸುಂದರ ಮಾರ್ಗವಾಗಿದೆ. ವರ್ಷಂಪ್ರತಿ ಇಲ್ಲಿ ಬೆಂಡೆ, ತೊಂಡೆ, ಅಲಸಂಡೆ, ಹಾಗಲ ಕಾಯಿ, ಟೊಮ್ಯಾಟೊ, ಸೌತೆ, ಹಸಿ ಮೆಣಸು, ಬಾಳೆ ಇನ್ನಿತರ ತರಕಾರಿಗಳನ್ನು ಬೆಳೆಸಲಾಗುತ್ತದೆ. ಇದು ಸಂಪದ್ಭರಿತವಾಗಿ ಫಲ ನೀಡಿದಾಗ ಮಕ್ಕಳ ಭೋಜನಕ್ಕೊಂದು ಪೋಷಕಯಕ್ತ ತರಕಾರಿ ಆಗಿ ಉಪಯೋಗವೂ ಆಗು ತ್ತದೆ. ಜತೆಗೆ ಮಕ್ಕಳಿಗೆ ಚಿಕ್ಕಂದಿನಿಂದಲೇ ಕೃಷಿ ಕಾರ್ಯದ ಬಗ್ಗೆ ಒಲವು ಬೆಳೆಸಿ ಕೊಳ್ಳಲೊಂದು ಪ್ರೇರಣೆಯ ಹಾದಿಯೂ ಆಗಿರುವುದರಿಂದ ಇಂತಹ ಆದರ್ಶ ಕೃಷಿ ಕಾಯಕಗಳು ಅಲ್ಪ ಸ್ವಲ್ಪವಾದರೂ ಅಲ್ಲಲ್ಲಿ ಗೋಚರಿಸಬೇಕು. ಹಾಗಾದರೆ ಮಾತ್ರ “ಕೈ ಕೆಸರಾದರೂ ಬಾಯಿ ಮೊಸರು’ ಎಂಬ ಗಾದೆ ಮಾತಿಗೆ ಮಹತ್ವ ಬಂದು ಮುಂದಿನ ತಲೆಮಾರು ಕೃಷಿಯೆಡೆಗೆ ಆಸಕ್ತಿ ಬೆಳೆಸುವುದರೊಂದಿಗೆ ದೇಶ ವನ್ನು ಸುಭಿಕ್ಷೆಯತ್ತ ಕೊಂಡೊಯ್ಯಲು ಪ್ರರಣೆ ಸಿಗಲಿ.
Related Articles
ಕಳೆದ ಕೆಲವು ವರ್ಷಗಳಿಂದ ಶೇಣಿ ಶಾಲೆಯಲ್ಲಿ ನಡೆಸುತ್ತಾ ಬಂದಿರುವ ಈ ಪುಟ್ಟ ಕೃಷಿ ಪ್ರಯೋಗ ಬಹುಮಟ್ಟಿನಲ್ಲಿ ಪ್ರಗತಿ ಕಂಡಿದೆ. ಇದರಿಂದಾಗಿ ಮಕ್ಕಳಿಗೂ, ಶಾಲೆಗೂ ಫಲಪ್ರದವಾಗಿದೆ. ಶಾಲೆಯ ಪಾಠದ ಜತೆಗೆ ವಿರಾಮದ ಅಥವಾ ಆಟದ ಸಮಯದಲ್ಲಿ ಇಂತಹ ಚಟುವಟಿಕೆಗೆ ಮಹತ್ವ ನೀಡಲಾಗುತ್ತದೆ.
– ಶ್ರೀಧರ ಮಾಸ್ತರ್ ಕುಕ್ಕಿಲ,
ಶಿಕ್ಷಕರು, ಪ್ರಗತಿಪರ ಕೃಷಿಕರು
Advertisement