Advertisement
ಇದಕ್ಕೆ ಅವರಿತ್ತ ಹೆಸರು: ರೆಂಟ್ ಎ- ಫಾರ್ಮ್ (ಬಾಡಿಗೆಗೊಂದು ಹೊಲ). ಆಸಕ್ತರು ಒಂದು ತಿಂಗಳ, ಮೂರು ತಿಂಗಳ ಅಥವಾ ಆರು ತಿಂಗಳ ಕಾರ್ಯಕ್ರಮದಲ್ಲಿ ಒಂದನ್ನು ಆಯ್ಕೆ ಮಾಡಿ, ಅದರ ಶುಲ್ಕ ತೆತ್ತು, ಸೇರಿಕೊಳ್ಳಬಹುದು. ವಾರಾಂತ್ಯಗಳಲ್ಲಿ ತಮ್ಮ ಜಮೀನಿಗೆ ಬಂದು ಕೃಷಿ ಕೆಲಸಗಳನ್ನು ಮಾಡುವುದು ಕಡ್ಡಾಯ. (ಈ ಕಾರ್ಯಕ್ರಮ ನಡೆಯುವ ಜಮೀನು ತಮಿಳ್ನಾಡಿನ ಕೊಯಂಬತ್ತೂರಿನ ಹತ್ತಿರದ ತೀಥಿಪಾಳಯಂನಲ್ಲಿದೆ.) ನಿಗದಿತ ಅವಧಿ ಮುಗಿದಾಗ, ಭಾಗವಹಿಸಿದವರು ತಾವು ಬೆಳೆಸಿದ ಫಸಲು ಕೊಯ್ದು ಒಯ್ಯಬಹುದು ಅಥವಾ ವಿಷ್ಣುವರ್ಧನರ ಸಂಸ್ಥೆಗೆ ಮಾರಬಹುದು. ಇದರಲ್ಲಿ ಭಾಗವಹಿಸಿದವರು ತರಬೇತಿ ಮುಗಿಯುವಾಗ, ತಾವು ಪಾವತಿಸಿದ ಶುಲ್ಕದಷ್ಟು ಬೆಲೆಯ ಫಸಲು ಪಡೆಯಲು ಸಾಧ್ಯ; ಮಾತ್ರವಲ್ಲ. ತಾವು ಬೆಳೆದ ಫಸಲು ಮಾರಿ ಲಾಭಗಳಿಸಲೂ ಸಾಧ್ಯ ಎನ್ನುತ್ತಾರೆ ವಿಷ್ಣುವರ್ಧನ್.
Related Articles
Advertisement
ತನ್ನ ಉದ್ಯೋಗಕ್ಕೆ ರಾಜೀನಾಮೆ ನೀಡುವ ಮುಂಚೆ ವಿಷ್ಣುವರ್ಧನ್ ಮಾಡಿದ ಕೆಲಸ: ಇಂಡಿಯನ್ ಸೂಪರ್ ಹೀರೋಸ್ ಎಂಬ ಸಂಘಟನೆ ಸ್ಥಾಪಿಸಿದ್ದು. ಇದು ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡ ಸರಕಾರೇತರ ಸಂಸ್ಥೆಗಳ ಮತ್ತು ಸ್ವಸಹಾಯ ಸಂಘಗಳ ಸಂಘಟನೆ. ಈ ಸಂಘಟನೆಯು ಕಡಿಮೆ ಜಮೀನು ಹೊಂದಿದ ಸಾವಯವ ರೈತರೊಂದಿಗೆ ಮತ್ತು ಇತರ ರೈತರೊಂದಿಗೆ ಸೇರಿಕೊಂಡು ಕೆಲಸ ಮಾಡಲಿಕ್ಕಾಗಿ ಸಹಕಾರಿ ಸಂಸ್ಥೆಯೊಂದನ್ನು ಸ್ಥಾಪಿಸಿತು.
ಇದು ರಾಸಾಯನಿಕಗಳನ್ನು ಬಳಸಿ ಕೃಷಿ ಮಾಡುವ ರೈತರನ್ನು ಸಂಪರ್ಕಿಸಿ, ಅವರು ಶೂನ್ಯ ಬಂಡವಾಳ ಸಮಗ್ರ ಸಾವಯವ ಕೃಷಿ ವಿಧಾನಕ್ಕೆ ಬದಲಾಗಲು ಮಾರ್ಗದರ್ಶನ ನೀಡತೊಡಗಿತು. ಕೃಷಿಯಲ್ಲಿ ರಾಸಾಯನಿಕ ಪೀಡೆನಾಶಕಗಳು ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆ ನಿಲ್ಲಿಸುವುದು ಮೊದಲ ಹೆಜ್ಜೆ; ಇವುಗಳ ಬದಲಾಗಿ ಕೃಷಿತ್ಯಾಜ್ಯ, ದನದ ಸಗಣಿ, ಮೂತ್ರ ಮತ್ತು ಹಸಿರುಸೊಪ್ಪನ್ನು ಗೊಬ್ಬರವಾಗಿ ಬಳಸುವುದು ಎರಡನೇ ಹೆಜ್ಜೆ. ಹೊಲಕ್ಕೆ ಹಾಕುವ ಎಲ್ಲ ಒಳಸುರಿಗಳೂ ಹೊಲದಿಂದಲೇ ಬರುತ್ತವೆ. ಹಾಗಾಗಿ, ಯಾವುದೇ ವೆಚ್ಚವಿಲ್ಲ. ಈ ವಿಧಾನದ ಕೃಷಿಗಾಗಿ ಯಾವುದನ್ನೂ ಹೊರಗಿನಿಂದ ಖರೀದಿಸಬೇಕಾಗಿಲ್ಲ. ಇದುವೇ ಶೂನ್ಯಬಂಡವಾಳ ಕೃಷಿ ಎಂದು ಮಾಹಿತಿ ನೀಡುತ್ತಾರೆ ವಿಷ್ಣುವರ್ಧನ್.
ಸಾವಯವ ರೈತರು ತಮ್ಮ ಉತ್ಪನ್ನ ಮಾರಾಟ ಮಾಡಲು ಪ್ರತ್ಯೇಕ ಮಾರುಕಟ್ಟೆ ಇಲ್ಲದಿರುವುದು ಇನ್ನೊಂದು ಸಮಸ್ಯೆ. ಇದಕ್ಕೆ ಪರಿಹಾರ: ಒಂದು ವೆಬ್‌ಸೈಟ್ ಶುರು ಮಾಡಿ, ಗ್ರಾಹಕರಿಗೆ ನೇರವಾಗಿ ಆನ್‌ಲೈನ್ ಮಾರಾಟ ಮಾಡುವುದು; ಹೀಗೆ ಮಾಡಿದರೆ, ಮಧ್ಯವರ್ತಿಗಳನ್ನು ದೂರವಿಡಲು ಸಾಧ್ಯ ಎಂಬುದು ವಿಷ್ಣುವರ್ಧನರಿಗೆ ಚೆನ್ನಾಗಿ ಅರ್ಥವಾದ ಸಂಗತಿ.
ಅಂತೂ ಫೆಬ್ರವರಿ, 2017ರಲ್ಲಿ ಅವರ ವೆಬ್‌ಸೈಟ್‌ಗೆ ಚಾಲೂ. ತಮಿಳುನಾಡಿನ ಇಬ್ಬರು ರೈತರ ಉತ್ಪನ್ನಗಳನ್ನು ಆನ್‌ಲೈನಿನಲ್ಲಿ ಮಾರಾಟ ಮಾಡುವ ಮೂಲಕ ವ್ಯವಹಾರದ ಆರಂಭವಾಯಿತು. ಈಗ ಇಂಡಿಯನ್ ಸೂಪರ್ ಹೀರೋಸ್ ಸಂಘಟನೆ ಇಂಡಿಯನ್ ಆರ್ಗಾನಿಕ್ ಸ್ಟೋರ್ ಎಂಬ ವೆಬೆÕ„ಟ್ ಮೂಲಕ 823 ಸಾವಯವ ಕೃಷಿಕುಟುಂಬಗಳ ಉತ್ಪನ್ನಗಳನ್ನು ಮಾರುತ್ತಿದೆ.
ಹೆಚ್ಚೆಚ್ಚು ರೈತರನ್ನು ಸಂಪರ್ಕಿಸಿ, ಅವರು ಬೆಳೆಸಿದ್ದನ್ನು ನೇರವಾಗಿ ರೈತರಿಗೆ ಮಾರಾಟ ಮಾಡಿ ಹೆಚ್ಚು ಲಾಭ ಗಳಿಸಬಹುದೆಂದು ವಿವರಿಸಿದ್ದು; ಸಾವಯವ ಕೃಷಿಯಲ್ಲಿ ಯಾವುದೇ ವೆಚ್ಚ ಇರುವುದಿಲ್ಲವೆಂದು ತಿಳಿಸಿದ್ದು, ಇದು 800ಕ್ಕಿಂತ ಜಾಸ್ತಿ ರೈತಕುಟುಂಬಗಳ ಮನವೊಲಿಸಲು ಅವರು ಅನುಸರಿಸಿದ ವಿಧಾನ.
ಇಂಡಿಯನ್ ಸೂಪರ್ ಹೀರೋಸ್ ಮಾರುತ್ತಿರುವ ಸಾವಯವ ಉತ್ಪನ್ನಗಳ ಮಾರಾಟ ಬೆಲೆ ಸಗಟು ಮಾರಾಟ ಬೆಲೆಗಿಂತ ಜಾಸ್ತಿ; ಆದರೆ ಚಿಲ್ಲರೆ ಮಾರಾಟ ಬೆಲೆಗಿಂತ ಕಡಿಮೆ. ಮೌಲ್ಯವರ್ಧನೆ ಮಾಡುವ ಮೂಲಕ ರೈತರ ಗಳಿಕೆ ಹೆಚ್ಚಿಸುವುದು ಈ ಸಂಘಟನೆ ಅನುಸರಿಸುವ ಪರಿಣಾಮಕಾರಿ ವಿಧಾನ. ಉದಾಹರಣೆಗೆ, ತೆಂಗಿನಕಾಯಿಯನ್ನು ಮಾರುವ ಬದಲಾಗಿ ಅದರ ಎಣ್ಣೆ ತೆಗೆದು ಮಾರುವುದು. ತೆಂಗಿನೆಣ್ಣೆಯನ್ನು ಲೀಟರಿಗೆ 180 ರೂಪಾಯಿ ದರದಲ್ಲಿ ಮಾರಬಹುದು. ಇದರ ಬದಲಾಗಿ, ತೆಂಗಿನಕಾಯಿ ಮಾರಿದರೆ, ಖರೀದಿದಾರ ಹೇಳಿದ ಬೆಲೆಗೆ ರೈತ ಮಾರ ಬೇಕಾಗುತ್ತದೆ. ಹಾಗೆಯೇ, 5 10 ಸಿರಿಧಾನ್ಯದ ಬಿಸ್ಕಿಟನ್ನು 50 ರೂಪಾಯಿಗೆ ಮಾರಬಹುದು. ಇದರ ಬದಲಾಗಿ ಸಿರಿಧಾನ್ಯವನ್ನೇ ಮಾರಿದರೆ ರೈತನಿಗೆ ಸಿಗುವುದು ಕಿಲೋಕ್ಕೆ 50 ರೂಪಾಯಿ ಅಷ್ಟೇ ಎಂದು ಮನದಟ್ಟು ಮಾಡುತ್ತಾರೆ ವಿಷ್ಣುವರ್ಧನ್.
ಕೃಷಿರಂಗದ ವ್ಯವಸ್ಥೆಯನ್ನೇ ಬದಲಾಯಿಸಬೇಕು. ಮುಂದಿನ ತಲೆಮಾರು ಕೂಡ ಕೃಷಿಯಲ್ಲಿ ತೊಡಗಬೇಕು ಎಂಬುದು ವಿಷ್ಣುವರ್ಧನರ ಆಶಯ. ತಾವು ಅನುಸರಿಸುವ ವಿಧಾನಗಳು ರೈತ ಕುಟುಂಬಗಳನ್ನು ಸುಸ್ಥಿರತೆಯತ್ತ ಒಯ್ಯುತ್ತವೆ. ಇದು ರೈತರಿಗೆ ಸಾಲ ಕೊಟ್ಟು, ಅವರನ್ನು ಅವರ ಪಾಡಿಗೆ ಬಿಡುವುದಕ್ಕಿಂತ ಉತ್ತಮ ವಿಧಾನ ಎಂಬುದು ಅವರ ದೃಢ ನಂಬಿಕೆ.(ಸಂಪರ್ಕ 9487010698) – ಅಡ್ಕೂರು ಕೃಷ್ಣ ರಾವ್