Advertisement
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರ ವಾರ ನಡೆದ 2022ರ ಮುಂಗಾರು ಹಂಗಾಮು ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿ, ಪೂರ್ವ ಮುಂಗಾರು ಬೆಳೆ ಗಳಾದ ಹೆಸರು, ಉದ್ದು, ಹಲಸಂದೆ ಬಿತ್ತನೆ ಮಾಡಲು ಸಕಾಲವಾಗಿರುವುದರಿಂದ ರೈತರಿಗೆ ತೊಂದರೆ ಆಗದಂತೆ ಗುಣಮಟ್ಟದ ಬಿತ್ತನೆ ಬೀಜ ನೀಡುವಂತೆ ತಿಳಿಸಿದರು.
Related Articles
Advertisement
ಕೃಷಿ ಇಲಾಖೆಗೆ ಮಾಹಿತಿ ನೀಡಿ: ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನ ಮಾತನಾಡಿ, ಕೃಷಿ ಇಲಾಖೆಯಿಂದ ರಿಯಾಯ್ತಿ ದರದಲ್ಲಿ ಬಿತ್ತನೆ ಬೀಜ ವಿತರಿಸಲಾಗುವುದು. ಬಿತ್ತನೆ ಬೀಜಗಳ ಕೊರತೆ ಉಂಟಾದಲ್ಲಿ ಕರ್ನಾಟಕ ಸೀಡ್ ಫೇಡರೇಷನ್ ಕಾರ್ಪೊರೇಷನ್ ಪೂರೈಸಬೇಕು. ರಸಗೊಬ್ಬರಗಳ ಸರಬ ರಾಜು ಮಾಡುವ ಏಜೆನ್ಸಿಗಳಿಂದ ಕೃಷಿ ಇಲಾಖೆಗೆ ಆಗಾಗ್ಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಕೃಷಿ ಸಹಾಯಕ ಅಧಿಕಾರಿಗಳು ಹಾಜರಿದ್ದರು.
ಪೂರ್ವ ಮುಂಗಾರು ಮಳೆ: ರೈತರಲ್ಲಿ ಸಂತಸ : ಜಿಲ್ಲೆಯ ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ಗುಬ್ಬಿ ತಾಲೂಕಿನಲ್ಲಿ ಪೂರ್ವ ಮುಂಗಾರು ಮಳೆ ಆರಂಭ ಆಗುತ್ತಿದ್ದಂತೆ ಭೂಮಿ ಹಸನು ಮಾಡಿ ಮಳೆ ಆರಂಭವಾಗುವುದರೊಳಗೆ ಹೆಸರು, ಉದ್ದು, ಅಲಸಂದೆ ಬಿತ್ತನೆ ಮಾಡಿ ಒಂದು ಬೆಳೆ ಬೆಳೆಯುತ್ತಾರೆ. ಚಿಕ್ಕನಾಯಕನಹಳ್ಳಿ, ತಿಪಟೂರು ಭಾಗದಲ್ಲಿ ಈ ಪೂರ್ವ ಮುಂಗಾರಿನಲ್ಲಿ ಹೆಸರು ಕಾಳು ಬಿತ್ತನೆ ಮಾಡುತ್ತಾರೆ. ಸಕಾಲದಲ್ಲಿ ಪೂರ್ವ ಮುಂಗಾರು ಮಳೆ ಬಂದರೆ ಈ ಪ್ರದೇಶದ ರೈತರಿಗೆ ಒಳ್ಳೆಯ ಆದಾಯ ಕೈಸೇರುತ್ತದೆ. ಈ ಬೆಳೆ ಮುಗಿದ ನಂತರ ಜುಲೈ, ಆಗಸ್ಟ್‌ನಲ್ಲಿ ಮತ್ತೆ ಮುಂಗಾರು ಬಿತ್ತನೆಯಾಗಿ ರಾಗಿ, ಜೋಳ, ಅವರೆ ಬಿತ್ತನೆ ಮಾಡುತ್ತಾರೆ. ಈಗ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಆರಂಭಗೊಂಡಿರುವುದು ರೈತರಲ್ಲಿ ಸಂತಸ ಮೂಡಿದೆ.
ತುಮಕೂರು ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಪೂರ್ವ ಮುಂಗಾರು ಮಳೆಗೆ ಬಿತ್ತನೆ ಮಾಡಲು ಅನುವಾಗುವಂತೆ ಅಲ್ಲಿಲ್ಲಿ ಮಳೆ ಬಿದ್ದಿರುವ ಪರಿಣಾಮ ರೈತರು ಹೆಸರು, ಅಲಸಂದೆ ಸೇರಿ ವಿವಿಧ ಬೆಳೆಗಳನ್ನು ಬೆಳೆಯಲು ಭೂಮಿ ಹಸನು ಮಾಡುತ್ತಿದ್ದಾರೆ. ರೈತರಿಗೆ ಅನುಕೂಲವಾಗುವಂತೆ ಅಗತ್ಯವಿರುವ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. ● ರಾಜಸುಲೋಚನಾ, ಜಂಟಿ ನಿರ್ದೇಶಕಿ, ಕೃಷಿ ಇಲಾಖೆ
ರೈತರಿಗೆ ನೀಡುವ ಬೀಜಗಳು ಗುಣಮಟ್ಟದಿಂದ ಕೂಡಿರುವ ಬಗ್ಗೆ ಖಾತರಿಪಡಿಸಿಕೊಂಡು ಜಿಲ್ಲೆಯ 50 ರೈತ ಸಂಪರ್ಕ ಕೇಂದ್ರಗಳಲ್ಲದೆ, ಹೆಚ್ಚುವರಿ 8 ಮಾರಾಟ ಕೇಂದ್ರಗಳಿಗೆ ಸರಬರಾಜು ಮಾಡಬೇಕು. ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸಲಾಗುವ ಬಿತ್ತನೆ ಬೀಜವನ್ನು ಅರ್ಹ ರೈತ ಫಲಾನುಭವಿಗಳಿಗೆ ವಿತರಿಸಬೇಕು. ಹೆಸರು, ತೊಗರಿ, ಶೇಂಗಾ, ಬಿತ್ತನೆ ಬೀಜಗಳ ಕೊರತೆ ಕಂಡುಬರದಂತೆ ಅಧಿಕಾರಿಗಳು ಕ್ರಮವಹಿಸಬೇಕು. – ವೈ.ಎಸ್.ಪಾಟೀಲ್, ತುಮಕೂರು ಜಿಲ್ಲಾಧಿಕಾರಿ