Advertisement

ಕೃಷಿ ಉತ್ಪನ್ನ ಮಾರುಕಟ್ಟೆಗಳು ಮೇಲ್ದರ್ಜೆಗೆ: ಎಸ್‌.ಟಿ. ಸೋಮಶೇಖರ್‌

01:12 AM Feb 27, 2020 | mahesh |

ಬೆಳ್ತಂಗಡಿ: ರೈತರಿಗೆ ಅನುಕೂಲವಾಗುವಂತೆ ರಾಜ್ಯದ ಎಲ್ಲ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಹೊಸ ಯೋಜನೆ ರೂಪಿಸಲು ಚಿಂತಿಸಲಾಗುವುದು ಎಂದು ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್‌.ಟಿ. ಸೋಮಶೇಖರ್‌ ಹೇಳಿದರು.

Advertisement

ಕೃಷಿ ಮಾರಾಟ ಇಲಾಖೆ, ಬೆಳ್ತಂಗಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಶ್ರಯದಲ್ಲಿ ಬುಧವಾರ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ 3.18 ಕೋಟಿ ರೂ. ವೆಚ್ಚದ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಸಮಾರಂಭ ಹಾಗೂ ರೈತರ ಸಮಾವೇಶ, ವರ್ತಕರ ಸಮಾವೇಶ, ಆಧುನಿಕ ಕೃಷಿ ಪದ್ಧತಿಗಳ ಬಗ್ಗೆ ಕೃಷಿ ಮೇಳ, ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಈಗಾಗಲೇ ರಾಜ್ಯದ 59 ಸಾವಿರ ರೈತರಿಗೆ ಅನುಕೂಲವಾಗುವಂತೆ 466 ಕೋಟಿ ರೂ. ಸುಸ್ತಿ ಸಾಲ ಬಡ್ಡಿ ಮನ್ನಾ ಮಾಡಿದ್ದಾರೆ. ಈ ಮೂಲಕ ಯುವ ಸಮುದಾಯವನ್ನು ಕೃಷಿಯತ್ತ ಸೆಳೆಯುವುದು ಸರಕಾರದ ಉದ್ದೇಶ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್‌ ಪೂಂಜ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಯ ದೃಷ್ಟಿಯಿಂದ ಮುಖ್ಯಮಂತ್ರಿ ಯಡಿಯೂರಪ್ಪ ಕೃಷಿ ಸಮ್ಮಾನ್‌ಗೆ ಬೆಂಬಲ ನೀಡಿದ್ದಾರೆ. ಯುವ ಸಮೂಹ ಕೃಷಿಯತ್ತ ಒಲವು ತೋರಬೇಕಾದಲ್ಲಿ ಕೃಷಿ ಉತ್ಪನ್ನಗಳಿಗೆ ಉತ್ತಮ ಧಾರಣೆ ಹಾಗೂ ಸೂಕ್ತ ಮಾರುಕಟ್ಟೆ ಲಭ್ಯವಾಗಬೇಕು. ಈ ನಿಟ್ಟಿನಲ್ಲಿ ಹೆಚ್ಚು ಯೋಜನೆಗಳನ್ನು ಜಾರಿಗೊಳಿಸಬೇಕು ಎಂದರು.

ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಹಾಗೂ ರಾಜ್ಯ ಕೃಷಿ ಮಾರಾಟ ಮಂಡಳಿ ಸದಸ್ಯ ಕೆ. ಪದ್ಮನಾಭ ರೈ ಮಾತನಾಡಿದರು. ಪ.ಪಂ. ಸದಸ್ಯ ಜಯಾನಂದ ಗೌಡ, ತಹಶೀಲ್ದಾರ್‌ ಗಣಪತಿ ಶಾಸ್ತ್ರಿ, ಮಂಗಳೂರು ಎಪಿಎಂಸಿ ಅಧ್ಯಕ್ಷ ಪ್ರವೀಣ್‌ ಕುಮಾರ್‌, ಸುಳ್ಯ ಎಪಿಎಂಸಿ ಅಧ್ಯಕ್ಷ ದೀಪಕ್‌, ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್‌ ಮೆದು, ಕಾರ್ಕಳ ಎಪಿಎಂಸಿ ಅಧ್ಯಕ್ಷ ಜಯವರ್ಮ, ಎಪಿಎಂಸಿ ಉಪನಿರ್ದೇಶಕ ಶ್ರೀನಿವಾಸ, ಬೆಳ್ತಂಗಡಿ ಎಪಿಎಂಸಿ ಉಪಾಧ್ಯಕ್ಷ ಅಬ್ದುಲ್‌ ಗಫ‌ೂರ್‌, ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಎಚ್‌.ಎಸ್‌. ಅಶೋಕ್‌ ಕುಮಾರ್‌, ಸದಸ್ಯರಾದ ಸೆಲೆಸ್ಟಿನ್‌ ಡಿ’ಸೋಜಾ, ಪಲ್ಲವಿ, ಈಶ್ವರ ಬೈರ, ಅಶೋಕ್‌ ಗೋವಿಯಸ್‌, ಜಯಾನಂದ ಕಲ್ಲಾಪು, ಆನಂದ ನಾಯ್ಕ, ಚಿದಾನಂದ ಪೂಜಾರಿ, ಗಣೇಶ ಪ್ರಸಾದ್‌ ಎಂ.ಕೆ., ಕಾರ್ಯದರ್ಶಿ ಎಸ್‌. ರವೀಂದ್ರ, ಮಾರಾಟ ಇಲಾಖೆ ಸಹಾಯಕ ನಿರ್ದೇಶಕಿ ಎಚ್‌.ಸಿ.ಎಂ. ರಾಣಿ ಉಪಸ್ಥಿತರಿದ್ದರು.

Advertisement

ಎಪಿಎಂಸಿ ಅಧ್ಯಕ್ಷ ಕೇಶವ ಗೌಡ ಬೆಳಾಲು ಸ್ವಾಗತಿಸಿದರು. ಪ್ರಜ್ಞಾ ಓಡಿಲಾ°ಳ ಹಾಗೂ ಸ್ವಾತಿ ಪೂಜಾರಿ ನಿರ್ವಹಿಸಿದರು. ಎಪಿಎಂಸಿ ಸದಸ್ಯ ಸತೀಶ್‌ ಕೆ. ಕಾಶಿಪಟ್ಣ ವಂದಿಸಿದರು. ಸಾಧಕ ಕೃಷಿಕರನ್ನು ಸಮ್ಮಾನಿಸಲಾಯಿತು. ಆಧುನಿಕ ಕೃಷಿ ಪದ್ಧತಿಗಳ ಕುರಿತು ಕೃಷಿ ಮೇಳ ನಡೆಯಿತು.

ಬೆಳ್ತಂಗಡಿ ಮಾರುಕಟ್ಟೆ ಸ್ಥಳಾಂತರ?
ಬೆಳ್ತಂಗಡಿ: ನಗರದಲ್ಲಿ ಪ್ರತಿ ಸೋಮವಾರ ನಡೆಯುವ ವಾರದ ಸಂತೆಯಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ಸ್ಥಳಾಂತರಿಸುವಂತೆ ಸಾರ್ವಜನಿಕರಿಂದ ಆಗ್ರಹ ಬಂದಿತ್ತು. ಈ ಬಗ್ಗೆ ಶೀಘ್ರ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್‌.ಟಿ. ಸೋಮಶೇಖರ್‌ ಭರವಸೆ ನೀಡಿದರು.

ಅವರು ಬೆಳ್ತಂಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಶಾಸಕ ಹರೀಶ್‌ ಪೂಂಜ, ತಾಲೂಕು ಸಹಕಾರಿ ಭಾರತಿ ಅಧ್ಯಕ್ಷ ಸುಂದರ ಹೆಗ್ಡೆ, ನ.ಪಂ. ಸದಸ್ಯ ಜಯಾನಂದ ಗೌಡ, ಎಪಿಎಂಸಿ ಸದಸ್ಯ ಜಯಾನಂದ ಕಲ್ಲಾಪು, ಸೋಮಶೇಖರ್‌, ಕುಶಾಲಪ್ಪ ಗೌಡ ಉಪಸ್ಥಿತರಿದ್ದರು.

ಅಡಿಕೆ ಕೊಳೆರೋಗಕ್ಕೆ ಪರಿಹಾರ
ಅಡಿಕೆ ಕೊಳೆರೋಗಕ್ಕೆ ಪರಿಹಾರ ನೀಡುವ ಬಗ್ಗೆಯೂ ಗಮನಕ್ಕೆ ಬಂದಿದ್ದು ಇದರ ಬಗ್ಗೆಯೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಂಬಂಧಿಸಿದಂತೆ ಇಲ್ಲಿನ ಶಾಸಕರು ಮತ್ತು ಅಧ್ಯಕ್ಷರು ಹಲವಾರು ಬೇಡಿಕೆಗಳನ್ನು ಇಟ್ಟಿದ್ದು ಮುಂದಿನ ನಾಲ್ಕು ದಿನಗ‌ಳ ಒಳಗೆ ಈಡೇರಿಸಲು ಪ್ರಯತ್ನಿಸಲಾಗುವುದು.
– ಎಸ್‌.ಟಿ. ಸೋಮಶೇಖರ್‌, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next