Advertisement
ಇತ್ತೀಚೆಗೆ ನಗರ ಮತ್ತು ಹಳ್ಳಿಗಳಲ್ಲಿ ಮನೆಯ ಅಂಧ ಹೆಚ್ಚಿಸುವಂತ ಗಿಡಗಳಿಗೆ ಜನರ ಬೇಡಿಕೆ ಹೆಚ್ಚಿದೆ. ಇದಕ್ಕಾಗಿ ಜನರು ನರ್ಸರಿಗಳ ಮೊರೆ ಹೋಗುವುದು ಸಾಮಾನ್ಯವಾಗಿದೆ. ಹಾಗಾಗಿ ಹೆಚ್ಚು ಮಾರಾಟವಾಗುವಂತ ಗಿಡಗಳನ್ನು ಹೆಚ್ಚಾಗಿ ಖರೀದಿಸಿ ಮತ್ತು ಸರಿಯಾಗಿ ನಿರ್ವಹಣೆ ಮಾಡಿದರೆ ಜನರು ನಿಮ್ಮ ಗಿಡಗಳನ್ನು ಹೆಚ್ಚು ಕೊಳ್ಳುವಂತೆ ಆಕರ್ಷಿಸಬಹುದು
ನರ್ಸರಿ ಮಾಡಬೇಕಾದರೆ ಮೊದಲಿಗೆ ಸ್ವಲ್ಪ ಮಟ್ಟದ ಬಂಡವಾಳದ ಆವಶ್ಯಕತೆ ಇದೆ. ಇದಕ್ಕಾಗಿ ನೀವು ಮನೆಯವರ ಸಹಾಯ ಅಥವಾ ನರ್ಸರಿ ಸ್ಥಾಪಿಸುವ ಇಚ್ಛೆ ಇರುವವರಿಗೆ ತೋಟಗಾರಿಕೆ ಇಲಾಖೆಯ ವತಿಯಿಂದ ಕಡಿಮೆ ಬಡ್ಡಿ ದರದಲ್ಲಿ ಮತ್ತು ಸಬ್ಸಿಡಿ ರೂಪದಲ್ಲಿ ಸಾಲ ನೀಡಲಾಗುತ್ತದೆ. ಈ ಮೂಲಕ ಸಾಲ ಪಡೆದು ನಂತರ ಬರುವ ಹಣದಲ್ಲಿ ಅದನ್ನು ತೀರಿಸಬಹುದಾಗಿದೆ. ತರಬೇತಿ ಪಡೆದುಕೊಳ್ಳಿ
ನರ್ಸರಿ ಸ್ಥಾಪಿಸುವುದಕ್ಕೂ ಮುನ್ನ ಅಂತರ್ಜಾಲದಲ್ಲಿ ಅದರ ನಿರ್ವಹಣೆಯ ಬಗ್ಗೆ ಸಾಕಷ್ಟು ಮಾಹಿತಿ ದೊರೆಯುತ್ತದೆ. ಅದನ್ನು ಅಧ್ಯಯನ ಮಾಡಿ ತಿಳಿದುಕೊಳ್ಳಬಹುದು ಅಥವಾ ತೋಟಗಾರಿಕೆ ಇಲಾಖೆಯಿಂದ ಕಡಿಮೆ ಶುಲ್ಕ ಅಥವಾ ಉಚಿತ ಅರೆಕಾಲಿಕ ಕೋರ್ಸ್ ಗಳು ಲಭ್ಯವಿವೆ. ಈ ಕೋರ್ಸ್‌ಗಳನ್ನು ಪಡೆದುಕೊಂಡರೆ ಗಿಡಗಳ ಪೋಷಣೆ ಹೇಗೆ ಮತ್ತು ಅವುಗಳಿಗೆ ಔಷಧೋಪಚಾರ ಹೇಗೆ ಮಾಡಬೇಕೆಂದು ತಿಳಿಯುವುದರಿಂದ ನರ್ಸರಿಯನ್ನು ಮತ್ತಷ್ಟು ಉತ್ತಮವಾಗಿ ನಿರ್ವಹಣೆ ಮಾಡಬಹುದಾಗಿದೆ.
Related Articles
Advertisement
ಸ್ಥಳದ ಆಯ್ಕೆನರ್ಸರಿಯನ್ನು ಸ್ವಲ್ಪ ಜಾಗದಲ್ಲಿಯೂ ಮಾಡಬಹುದು. ನಿಮ್ಮ ಮನೆ ಆಥವಾ ಮೇಲ್ಛಾವಣಿಯನ್ನು ಬಳಸಿಕೊಂಡು ನರ್ಸರಿ ಆರಂಭಿಸಬಹುದಾಗಿದೆ. ಇದರಿಂದ ನಿಮ್ಮ ಬಿಡುವಿನ ವೇಳೆ ನೀರು, ಗೊಬ್ಬರ ನೀಡಿ ಗಿಡಗಳ ಪೊಷಣೆ ಮಾಡಲೂ ಸಹಕಾರಿಯಾಗುತ್ತದೆ. ಅರ್ಹತೆಗಳು
· ಸಸ್ಯಗಳ ಪೊಷಣೆ ಬಗ್ಗೆ ಪ್ರೀತಿ ಇರಬೇಕು.
· ವಿಶೇಷ ಕಾಳಜಿ ಅಗತ್ಯ.
· ಸರಿಯಾದ ಸ್ಥಳ ಇರಬೇಕು.
· ಸಮಯಕ್ಕೆ ನೀರು, ಗೊಬ್ಬರ ನೀಡಿ. - ಶಿವಾನಂದ್ ಎಚ್.