Advertisement

ರೈತರ ಮನೆಬಾಗಿಲಿಗೆ ಕೃಷಿ ಮಾಹಿತಿ

12:04 PM Aug 04, 2019 | Suhan S |

ಗಜೇಂದ್ರಗಡ: ಕೃಷಿ ಇಲಾಖೆ ರೈತರಿಗೆ ಬೇಕಾದ ಎಲ್ಲ ಮಾಹಿತಿಯನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದು, ರೈತರು ಇದರ ಸದುಪಯೋಗ ಪಡೆಯಬೇಕು. ಈ ಮೂಲಕ ಹೆಚ್ಚು ಬೆಳೆ ಬೆಳೆದು ಆರ್ಥಿಕ ಸಬಲತೆ ಕಾಣುವ ದೃಷ್ಟಿಯಿಂದ ಕೃಷಿ ಇಲಾಖೆ ಮಾರ್ಗದರ್ಶನ ಪಡೆದುಕೊಳ್ಳಬೇಕಿದೆ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.

Advertisement

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಜಿಪಂ, ಜಿಲ್ಲಾ ಕೃಷಿ ಇಲಾಖೆ ವತಿಯಿಂದ ಶನಿವಾರ ನಡೆದ ಸಮಗ್ರ ಕೃಷಿ ಅಭಿಯಾನ ಮಾಹಿತಿ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಕೃಷಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಹಲವಾರು ಕಾರ್ಯಕ್ರಮಗಳನ್ನು ಪ್ರತಿವರ್ಷ ಅನುಷ್ಠಾನಕ್ಕೆ ತರುತ್ತಿದೆ. ಅಲ್ಲದೇ ಆಧುನಿಕತೆಗೆ ತಕ್ಕಂತೆ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುವ ಉದ್ದೇಶದಿಂದ ಹಲವಾರು ಬದಲಾವಣೆ ಅನುಸರಿಸುತ್ತಿದೆ. ಇದರ ಮಾಹಿತಿಯನ್ನು ರೈತರಿಗೆ ತಲುಪಿಸುವ ಕಾರ್ಯವೂ ನಡೆದಿದೆ. ಪ್ರಸ್ತುತ ಪಾರಂಪರಿಕ ಪದ್ಧತಿ ಜೊತೆಗೆ ಆಧುನಿಕ ಪದ್ಧತಿ ಅಳವಡಿಸಿಕೊಂಡರೆ ಉತ್ತಮ. ಇದಕ್ಕಾಗಿ ಕೃಷಿ ಇಲಾಖೆ ವತಿಯಿಂದ ರೈತರಿಗೆ ದೊರೆಯುವ ವಿವಿಧ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಹೆಚ್ಚಿನ ಲಾಭ ಪಡೆಯಲು ಮುಂದಾಗಬೇಕು. ಜೊತೆಗೆ ಅಧಿಕಾರಿಗಳು ಎಲ್ಲ ರೈತರಿಗೆ ಯೋಜನೆಗಳ ಸಂಪೂರ್ಣ ಮಾಹಿತಿ ನೀಡಲು ಹಿಂಜರಿಯಬಾರದು ಎಂದು ಸೂಚಿಸಿದರು.

ಎಪಿಎಂಸಿ ಸದಸ್ಯ ಅಂಬರೀಶ ಬಳಿಗೇರ ಮಾತನಾಡಿ, ರೈತರು ಸಮರ್ಪಣಾಭಾವದಲ್ಲಿ ತೊಡಗಿಸಿ ತಮ್ಮ ಕಾರ್ಯ ಮಾಡುತ್ತಿದ್ದು, ಕೃಷಿಯಿಂದ ನಮ್ಮ ಸಂಸ್ಕೃತಿ, ಬದುಕು, ದೇಶದ ಬೆಳವಣಿಗೆ ಸಾಧ್ಯ. ಆದ್ದರಿಂದ ರೈತರಿಗೆ ಬೆನ್ನೆಲುಬಾಗಿ ನಿಂತು ಮಾಹಿತಿ, ಸೌಲಭ್ಯ ನೀಡಲು ಸರಕಾರ ಕೃಷಿ ಅಭಿಯಾನ ಹಮ್ಮಿಕೊಂಡಿದ್ದು, ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.

ಜಿಲ್ಲಾ ಉಪ ಕೃಷಿ ನಿರ್ದೇಶಕ ಮೋಹನದಾಸ್‌ ಕೆ.ಎಸ್‌. ಮಾತನಾಡಿ, ಈ ರಥವು ಎಲ್ಲ ಹಳ್ಳಿಗಳಲ್ಲಿಯೂ ಸಂಚರಿಸಿ ಕೃಷಿ ಉತ್ಪಾದಕತೆ ಹೆಚ್ಚಿಸುವ ನಿಟ್ಟಿನಲ್ಲಿ ಅವಶ್ಯವಿರುವ ತಂತ್ರಜ್ಞಾನವನ್ನು ರೈತರಿಗೆ ತಲುಪಿಸಲು ಏಕಗವಾಕ್ಷಿ ವಿಸ್ತರಣೆ ಪದ್ಧತಿಯಲ್ಲಿ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಶೀರ್ಷಿಕೆ ಅಡಿಯಲ್ಲಿ ಹೋಬಳಿ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ. ಮೊದಲನೆ ಮತ್ತು ಎರಡನೆಯ ದಿನ ಪ್ರತಿಯೊಂದು ಹೋಬಳಿಯಲ್ಲಿ ಗ್ರಾಪಂವಾರು ಕಾರ್ಯತಂಡ ರಚಿಸಿ ರೈತರಿಗೆ ಮಾಹಿತಿ ನೀಡಲಾಗುವುದು. ರೈತರು ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ ಯಶಸ್ಸಿಗೊಳಿಸಬೇಕು ಎಂದರು.

Advertisement

ಎಪಿಎಂಸಿ ಸದಸ್ಯ ಸುಗಿರೇಶ ಕಾಜಗಾರ, ಎಸ್‌.ಎಸ್‌. ಅರಹುಣಸಿ, ಶಂಕರ ಕಲಿಗೊಣ್ಣವರ, ಭಾಸ್ಕರ ರಾಯಬಾಗಿ, ಎಸ್‌.ಎಸ್‌. ವಾಲಿ, ಶರಣಪ್ಪ ರೇವಡಿ, ಹಿರಿಯ ತೋಟಗಾರಿಕಾ ಅಧಿಕಾರಿ ಎಂ.ಎಂ. ತಾಂಬೋಟಿ, ಸಹಾಯಕ ತೋಟಗಾರಿಕಾ ಅಧಿಕಾರಿ ಶರಣಯ್ಯ ಅಂಗಡಿ, ಚನ್ನಪ್ಪ ಅಂಗಡಿ, ಎಸ್‌.ಎಫ್‌. ತಹಶೀಲ್ದಾರ್‌, ಸಾವಿತ್ರಿ ಶಿವನಗೌಡರ, ಬುಡ್ಡಪ್ಪ ಮೂಲಿಮನಿ, ಶರಣಪ್ಪ ಕಂಬಳಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next