ಬಂಟ್ವಾಳ: ನಿರಂತರ ಆದಾಯ ತರುವ ನಿಟ್ಟಿನಲ್ಲಿ ಒಳನಾಡು ಮೀನು ಗಾರಿಕೆಗೆ ಪ್ರೋತ್ಸಾಹ ನೀಡ ಲಾಗುತ್ತಿದ್ದು, ಮೀನಿನ ಉತ್ಪಾದನೆ, ಮಾರುಕಟ್ಟೆ ವ್ಯವಸ್ಥೆಯ ಜತೆಗೆ ಗುಣಮಟ್ಟ ಕಾಯ್ದುಕೊಳ್ಳಲು ಗಮನ ಹರಿಸಲಾಗುತ್ತಿದೆ ಎಂದು ಸಚಿವ ಎಸ್.ಅಂಗಾರ ಹೇಳಿದರು.
ಅವರು ಒಡ್ಡೂರು ಫಾರ್ಮ್ಸ್ ನಲ್ಲಿ ದ.ಕ. ಜಿಲ್ಲಾ ಮೀನುಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿದ್ದ ಒಳನಾಡು ಮೀನು ಕೃಷಿ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ| ವೈ.ಭರತ್ ಶೆಟ್ಟಿ ಮಾತನಾಡಿದರು.
ತೆಂಕಎಡಪದವು ಗ್ರಾ.ಪಂ. ಅಧ್ಯಕ್ಷ ಸುಕುಮಾರ್, ಕರ್ನಾಟಕ ಮೀನು ಗಾರಿಕ ಅಭಿವೃದ್ಧಿ ನಿಗಮದ ವ್ಯವ ಸ್ಥಾಪಕ ನಿರ್ದೇಶಕ ದಿನೇಶ್‌ಕುಮಾರ್, ಮಂಗಳೂರು ಮೀನುಗಾರಿಕೆ ಮಹಾ ವಿದ್ಯಾಲಯದ ಡೀನ್ ಡಾ| ಶಿವ ಕುಮಾರ್ ಮಗದ, ದ.ಕ. ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ| ಟಿ.ಜೆ.ರಮೇಶ್, ರೈತ ಸಂಘದ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ, ಗೌರವಾಧ್ಯಕ್ಷ ಧನಕೀರ್ತಿ, ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ, ಗಂಜಿಮಠ ಗ್ರಾ.ಪಂ. ಸದಸ್ಯ ನೋಣಯ್ಯ ಕೋಟ್ಯಾನ್, ಕೃಷಿ ವಿಜ್ಞಾನಿ ಪ್ರೊ| ಮಂಜಪ್ಪ ಉಪಸ್ಥಿತರಿದ್ದರು. ಮತ್ಸ್ಯಾಶ್ರಯ ವಸತಿ ಯೋಜನೆಯಡಿ ಮನೆ ಮಂಜೂರಾದ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ಹಾಗೂ ಮೀನುಗಾರಿಕೆ ಪರಿಕರಗಳ ಖರೀದಿಗೆ ಸಹಾಯ ಧನವನ್ನು ಸಚಿವರು ಹಸ್ತಾಂತರಿಸಿದರು. ಯಾದಗಿರಿ ಮೀನುಗಾರಿಕ ಉಪನಿರ್ದೇಶಕ ಶ್ರೀನಿವಾಸ ಕುಲಕರ್ಣಿ, ಮಂಗಳೂರು ಉಪನಿರ್ದೇಶಕಿ ಡಾ| ಸುಶ್ಮಿತಾ ರಾವ್, ಸ. ನಿರ್ದೇಶಕ ದಿಲೀಪ್ ಕುಮಾರ್, ತುಮಕೂರು ನರ್ಸರಿಯ ವಿಶ್ವನಾಥ ರೆಡ್ಡಿ ಮಾಹಿತಿ ನೀಡಿದರು. ಮೀನುಗಾರಿಕ ನಿರ್ದೇಶನಾಲಯದ ಅಪರ ನಿರ್ದೇಶಕ(ಕರಾವಳಿ) ಎಂ.ಎಲ್. ದೊಡ್ಡಮಣಿ ಸ್ವಾಗತಿಸಿದರು. ಅಪರ ನಿರ್ದೇಶಕ(ಒಳನಾಡು) ಡಿ.ತಿಪ್ಪೇಸ್ವಾಮಿ ಮಾತನಾಡಿದರು. ಮೀನುಗಾರಿಕ ಜಂಟಿ ನಿರ್ದೇಶಕ ಹರೀಶ್ ಕುಮಾರ್ ವಂದಿಸಿದರು. ಸಹಾಯಕ ನಿರ್ದೇಶಕಿ ಮಂಜುಳಾಶ್ರೀ ಶೆಣೈ ನಿರೂಪಿಸಿದರು.
ಅಭಿವೃದ್ಧಿಯಾಗಲಿ :
ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಮಾತನಾಡಿ, ಸ್ಥಳೀಯ ರೈತರಿಗೆ ಬೇಕಾದ ಮೀನಿನ ತಳಿಗಳನ್ನು ರಾಜ್ಯದಲ್ಲೇ ಅಭಿವೃದ್ಧಿ ಪಡಿಸುವ ಕಾರ್ಯ ಅತೀ ಅಗತ್ಯವಾಗಿ ಆಗಬೇಕಿದೆ ಎಂದರು.