Advertisement
ಕೃಷಿ ಬೆಳೆಗಳಿಗೆ ಕಾಡುವ ಕೀಟ, ರೋಗ, ಕಳೆ ಬಾಧೆ, ಮಣ್ಣಿನ ಪರೀಕ್ಷೆ, ಮಣ್ಣಿನ ಪೋಷಕಾಂಷಗಳ ಕೊರತೆ ಕಂಡುಕೊಂಡು ಸಮರ್ಪಕವಾಗಿ ನಿರ್ವಹಣೆ ಮಾಡಲು ಹಾಗ ಕೃಷಿ ಕೀಟಗಳನ್ನು ಹತೋಟಿಗೆ ತರುವ ಮಾರ್ಗೋಪಾಯಗಳನ್ನು ರೈತನಿಗೆ ತಮ್ಮ ಜಮೀನನಲ್ಲೇ ವ್ಯವಸ್ಥೆ ಮಾಡಲು ಸರಕಾರ ಕೃಷಿ ಸಂಜೀವಿನಿ ಯೋಜನೆ ಜಾರಿಗೊಳಿಸಿದ್ದು , ತಾಲೂಕಿನಲ್ಲಿ ಯೋಜನೆಯನ್ನು ರೈತರಿಗೆ ಮುಟ್ಟಿಸಲು ಕೃಷಿ ಸಹಾಯಕ ನಿರ್ದೇಶಕ ಕಾರ್ಯಾಲಯದ ಕೃಷಿಅಧಿಕಾರಿಗಳು ಶ್ರಮಿಸುತ್ತಿದ್ದಾರೆ.
Related Articles
ಆಂಬ್ಯುಲೆನ್ಸ್‌ನಂತೆ ಕೆಲಸ ಮಾಡುತ್ತದೆ. ಸಕಾಲದಲ್ಲಿ ಬೆಳೆಯ ಎಲ್ಲ ಹಂತಗಳಲ್ಲಿ ಸರ್ವೇಕ್ಷಣೆಕೈಗೊಂಡು ಕಂಡು ಬಂದಿರುವ, ಕಂಡು ಬರಬಹುದಾದಕೀಟ, ರೋಗ, ಕಳೆಗಳ ನಿರ್ವಹಣಾ ಮಾರ್ಗೋಪಾಯಗಳನ್ನು ರೈತರಿಗೆ ತಿಳಿಸುವುದು ಮುಖ್ಯ ಉದ್ಧೇಶವಾಗಿದೆ.
ಡಾ| ಎಚ್.ವೈ. ಸಿಂಗೆಗೋಳ
ಸಹಾಯಕ ಕೃಷಿ ನಿರ್ದೇಶಕರು, ಸಿಂದಗಿ
Advertisement
ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ವಾಹನದಲ್ಲಿ ಸೂಕ್ಷ್ಮ ಕೀಟಗಳನ್ನು ಗುರುತಿಸಲು ಸ್ಟೀರಿಯೊ ಜೂಮ್ ಸೂಕ್ಷ್ಮದರ್ಶಕ, ಭೂತಗನ್ನಡಿ, ರಸಗೊಬ್ಬರ ಪರೀಕ್ಷಾ ಕಿಟ್, ಮಣ್ಣು ತೇವಾಂಶ ಸಂವೇದಕ,ಕೀಟ ಸಂಗ್ರಹಣಾ ಬಲೆ, ರೈತರ ಜಮೀನಿನಲ್ಲಿ ವೈಜ್ಞಾನಿಕ ಸರ್ವೇಕ್ಷಣೆ ಕೈಗೊಳ್ಳಲು ಟ್ಯಾಬ್ಸ್, ಲ್ಯಾಪ್‌ಟಾಪ್, ಪ್ರಿಂಟರ್, ಉಷ್ಣಮಾಪಕ ಸೇರಿ ವಿವಿಧ ಉಪಕರಣಗಳನ್ನು ವಾಹನದಲ್ಲಿ ಇರುತ್ತದೆ. ರೈತರುಕೃಷಿ ಸಂಜೀವಿನಿ ಪ್ರಯೋಜನ ಪಡೆಯಬೇಕು.ಶಿವಾನಂದ ಹೂವಿನಹಳ್ಳಿ. ಕೃಷಿ ಅಧಿಕಾರಿ,
ರೈತ ಸಂಪರ್ಕ ಕೇಂದ್ರ, ಸಿಂದಗಿ ಸುಧಾರಿತಕೃಷಿ ಉತ್ಪಾದನಾ ತಾಂತ್ರಿಕತೆ, ಗುಣಮಟ್ಟದ ಕೃಷಿ ಪರಿಕರಗಳ ಪೂರೈಕೆ ಮತ್ತು ಶಿಫಾರಸು ಮಾಡಲಾದ ರಸಗೊಬ್ಬರಗಳ ಸಮರ್ಪಕ ಬಳಕೆ, ರೋಗ,ಕೀಟಗಳ ಹತೋಟಿ, ಮಣ್ಣಿನಲ್ಲಿ ಲಭ್ಯವಿರುವ ಪೋಷಕಾಂಷಗಳ ಬಗ್ಗೆ ರೈತರುಕೃಷಿ ಅಧಿಕಾರಿಗಳ ಮಾರ್ಗದರ್ಶನದಿಂದ ಮಾಹಿತಿ ಪಡೆದು ಸೂಕ್ತ ಬೆಳೆ ಬೆಳೆಯಬೇಕು.
ರಾಜಶೇಖರ ಪೂಜಾರಿ, ನಿರ್ದೇಶಕರು,
ತಾಲೂಕಾ ಕೃಷಿಕ ಸಮಾಜ ಸಿಂದಗಿ ರಮೇಶ ಪೂಜಾರ