ಮೈಸೂರು: ಕಟ್ಟಡ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿಗಾಗಿ ಸುಸ್ಥಿರ ಟ್ರಸ್ಟ್‌ಗೆ ಅವಕಾಶ ನೀಡಿರುವ ಪಾಲಿಕೆ ಕ್ರಮ ಸರಿಯಲ್ಲ. ಇಲ್ಲಿ ಯಾವ ನಿಯಮವೂ ಪಾಲನೆಯಾಗಿಲ್ಲ. ಗ್ಲೋಬಲ್ ಟೆಂಡರ್‌ಕರೆಯಿರಿ, ಇಲ್ಲವೇ ನ್ಯಾಯಾಲಯ ಮೊರೆ ಹೋಗುತ್ತೇವೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಎಚ್ಚರಿಕೆ ನೀಡಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಟ್ಟಡಗಳ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿಗೆ ಸುಸ್ಥಿರ ಟ್ರಸ್ಟ್‌ಗೆ ಅವಕಾಶ ನೀಡುವಾಗ ನಗರಪಾಲಿಕೆ ನಿಯಮಾವಳಿಗಳು, ಸರ್ಕಾರದ ಮಾನದಂಡಗಳುಪಾಲನೆಯಾಗಿಲ್ಲ. ಸಂಸದ ಪ್ರತಾಪ್ ಸಿಂಹ ಒತ್ತಾಯದ ಮೇಲೆ ಸುಸ್ಥಿರ ಟ್ರಸ್ಟ್‌ಗೆ ನೀಡಲಾಗಿದೆ ಎಂದು ಆರೋಪಿಸಿದರು.
ಸುಸ್ಥಿರ ಟ್ರಸ್ಟ್ ಈ ರೀತಿ ಪ್ರಾಜೆಕ್ಟ್ ಎಲ್ಲಿ ಮಾಡಿದ್ದಾರೆ ಎನ್ನುವುದನ್ನು ಮೊದಲು ತಿಳಿಸಿ? 10 ಎಕರೆ ಭೂಮಿಯನ್ನು ಉಚಿತವಾಗಿ ಕೊಡುತ್ತಾರೆ. ಸುಸ್ಥಿರ ಟ್ರಸ್ಟ್‌ಗೆ ನೀಡಲು ಪ್ರತಾಪಸಿಂಹ ದೊಡ್ಡ ಮಟ್ಟದ ಆಂದೋ ಲನ ಮಾಡುತ್ತಾರೆ. ಈ ಯೋಜನೆ ಟ್ರಸ್ಟ್‌ಗೆ ಅರ್ಹತೆ ಇದೆಯಾ ಎಂದು ಪ್ರಶ್ನಿಸಿದರು.
ಸಾಲದ ಕೂಪಕ್ಕೆ ತಳ್ಳಿದ ಬಿಜೆಪಿ: ಕೇಂದ್ರ ಬಿಜೆಪಿ ಮತ್ತು ರಾಜ್ಯ ಬಿಜೆಪಿ ಇಡೀ ದೇಶವನ್ನು ಸಾಲದ ಕೂಪಕ್ಕೆ ತಳ್ಳುವ ಕೆಲಸ ಮಾಡುತ್ತಿವೆ. ಜೂನ್ 2014ರವರೆಗೆ ನಮ್ಮ ದೇಶದ ಸಾಲ 54 ಲಕ್ಷ ಕೋಟಿ ರೂ. ಇತ್ತು. ಈಗ 2020ರ ಡಿಸೆಂಬರ್ ವೇಳೆಗೆ 107 ಲಕ್ಷ ಕೋಟಿ ರೂ. ಆಗಿದೆ. ಮೋದಿ ಸರ್ಕಾರ ಬಂದ ಮೇಲೆ 53 ಲಕ್ಷ ಕೋಟಿ ರೂ. ಹೆಚ್ಚುವರಿ ಸಾಲ ಮಾಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಸಿದ್ದರಾಮಯ್ಯ 5 ವರ್ಷಕ್ಕೆ 90 ಸಾವಿರಕೋಟಿ ರೂ. ಸಾಲ ಮಾಡಿದ್ದರು. ಬಿಎಸ್ ಯಡಿಯೂರಪ್ಪ 1.2 ಲಕ್ಷ ಕೋಟಿ ರೂ.ಸಾಲವನ್ನ ಒಂದೂವರೆ ವರ್ಷದಲ್ಲೇ ಮಾಡಿದ್ದಾರೆ. ಸಿದ್ದರಾಮಯ್ಯ 90 ಸಾವಿರ ಕೋಟಿ ಮಾಡಿದ್ದನ್ನೇ ಬಿಜೆಪಿಯವರು ಊರ ತುಂಬಾ ಹೇಳಿಕೊಂಡು ಬಂದಿದ್ದರು ಎಂದು ಅವರು ಕಿಡಿಕಾರಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಕಾರ್ಯದರ್ಶಿ ಶಿವಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
20 ಪಂಚಾಯ್ತಿಯಲ್ಲಿ ಬಿಜೆಪಿ ಚುಕ್ಕಾಣಿ ಹಿಡಿಯಲಿ: ಸವಾಲು : ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಮೈಸೂರಿನ ಯಾವುದೇ ಕ್ಷೇತ್ರದಲ್ಲಾಗಲೀ 20ಪಂಚಾಯತಿಯಲ್ಲಿ ಬಿಜೆಪಿ ಚುಕ್ಕಾಣಿ ಹಿಡಿದುತೋರಿಸಲಿ ಎಂದು ಸವಾಲು ಹಾಕಿದ ಲಕ್ಷ್ಮಣ್, ಜಿಲ್ಲೆಯ ಎಲ್ಲಾ ಕಡೆ ನಾವೇ ಗೆದ್ದಿದ್ದೇವೆ ಎಂದು ಬಿಜೆಪಿ ನಾಯಕರು ಹೇಳಿಕೊಂಡುಓಡಾಡುತ್ತಿದ್ದಾರೆ. ಹುಣಸೂರಿನ 41ಪಂಚಾಯಿತಿ ಪೈಕಿ ಸ್ವತಂತ್ರವಾಗಿ 35ಕ್ಕೂ ಹೆಚ್ಚುಪಂಚಾಯತಿಯಲ್ಲಿ ಕಾಂಗ್ರೆಸ್ ಚುಕ್ಕಾಣಿ ಹಿಡಿಯಲಿದೆ. ಆದರೆ ಬಿಜೆಪಿಯವರುಹಳ್ಳಿಯಿಂದ ದಿಲ್ಲಿವರೆಗೂ ನಾವೇ ಅಂತಾ ಹೇಳುತ್ತಿದ್ದಾರೆ.