Advertisement
“ತುಳುನಾಡಿನ ವೀರಪುರುಷ ಎಂದೇ ಹೆಸರಾದ “ಅಗೋಳಿ ಮಂಜಣ್ಣ’ ಒಬ್ಬ ಅಸಾಧ್ಯ ಧೈರ್ಯ ಶಾಲಿ. ಅದು ಎಷ್ಟರಮಟ್ಟಿಗೆ ಅಂದರೆ, ಒಂದೇ ಬಾರಿಗೆ ಹತ್ತು ಮೂಟೆ ಅಕ್ಕಿ ಎತ್ತಬಲ್ಲಂತಹ ಬಲಶಾಲಿ. ಮಂಗಳೂರಿನ ಮುಲ್ಕಿ ಸೀಮೆಯ ಅಧಿಪತಿ ಎನಿಸಿಕೊಂಡಿದ್ದ “ಅಗೋಳಿ ಮಂಜಣ್ಣ’, ಸುಮಾರು 200 ವರ್ಷಗಳ ಹಿಂದೆ ಮಂಗಳೂರಿನ ಸುರತ್ಕಲ್ ಸಮೀಪದ ಚೇಳಾರ್ ಗುತ್ತಿನಲ್ಲಿ ಬದುಕು ಸವೆಸಿದ್ದರು. ಅವರ ರೋಚಕವಾದ ಸಾಹಸಮಯ ಜನಪದ ಕಥೆ ಚಿತ್ರದ ಜೀವಾಳ ಎಂಬುದು ಚಿತ್ರತಂಡದ ಮಾತು. 200 ವರ್ಷಗಳ ಹಿಂದೆ ಬದುಕಿ, ಹೆಸರು ಮಾಡಿದ್ದ ಶಕ್ತಿಶಾಲಿ ಅಗೋಳಿ ಮಂಜಣ್ಣ ಅವರ ಬಗ್ಗೆ ಸಮಗ್ರವಾಗಿ ಹೇಳುವ ಪ್ರಯತ್ನ ಇಲ್ಲಿ ಮಾಡಲಾಗುತ್ತಿದೆ.
Advertisement
ಫೆಬ್ರವರಿಯಲ್ಲಿ ಅಗೋಳಿ ಮಂಜಣ್ಣ ಟೀಸರ್
10:23 AM Jan 18, 2020 | mahesh |