Advertisement

ನನ್ನ ಮನಸ್ಸಿನ ಕೊಳೆ ತೆಗೆಯಲು ಮಾರ್ಗದರ್ಶನ ಮಾಡಿ

09:49 AM Jan 01, 2020 | sudhir |

ಉಡುಪಿ: “ಪೇಜಾವರ ಶ್ರೀಗಳೇ ನನಗೆ ಆತ್ಮದ ಬಗ್ಗೆ ನಂಬಿಕೆ ಇದೆ. ಆತ್ಮ ನಾಶವಾಗುವುದಿಲ್ಲ. ನನ್ನ ಮನಸ್ಸಿನ ಕೊಳೆ, ಕೊಳಕು, ಸಣ್ಣತನ ವನ್ನು ತೆಗೆಯಲು ಮಾರ್ಗದರ್ಶನ ಮಾಡಿ. ನಾನು ನಿಮ್ಮನ್ನು ಸದಾ ಸ್ಮರಿಸಿಕೊಳ್ಳುತ್ತೇನೆ…’

Advertisement

– ಇದು ಪೇಜಾವರ ಶ್ರೀಗಳ ಕಟು ಟೀಕಾಕಾರ, ಪತ್ರಕರ್ತ ಅಗ್ನಿ ಶ್ರೀಧರ್‌ ನೀಡಿರುವ ಹೇಳಿಕೆ.

ನನಗೆ ಇತ್ತೀಚಿನ ಐದು ವರ್ಷಗಳಲ್ಲಿ ಸಂಪರ್ಕ ಕಡಿಮೆಯಾಗಿತ್ತು. ಅದಕ್ಕೂ
ಹಿಂದೆ 15 ವರ್ಷ ನಿರಂತರ ಸಂಪರ್ಕ ವಿತ್ತು. ನಾನು ಏನೇ ಟೀಕೆಯನ್ನು ಪತ್ರಿಕೆಯಲ್ಲಿ ಬರೆದರೂ ಅದೇ ವಾರ ಉತ್ತರ ಬರುತ್ತಿತ್ತು. ಅದನ್ನೂ ಪ್ರಕಟಿಸುತ್ತಿದ್ದೆ. ಮತ್ತೆ ಟೀಕಿಸುತ್ತಿದ್ದೆ, ಮತ್ತೆ ಉತ್ತರ ಬರುತ್ತಿತ್ತು. ನಾನು ಅನೇಕ ಬಾರಿ ಅವರ ಆಶ್ರಮಕ್ಕೂ ಹೋಗಿದ್ದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯವೇನೇ ಇದ್ದರೂ ಪರಸ್ಪರ ಗೌರವ ಕೊಟ್ಟು ಬದುಕು ವುದೇ ನಿಜವಾದ ಪ್ರಜಾಪ್ರಭುತ್ವ, ಮಾನವೀಯ ಗುಣ. ಇದು ಅವರಲ್ಲಿತ್ತು.

ಸರ್ವತಂತ್ರ ಸ್ವತಂತ್ರನಲ್ಲ
ಮಾನವ ಸಹಜವಾದ ದೋಷ ಗಳಿರುವುದು ಸಹಜ. ಪೇಜಾವರ ಶ್ರೀಗಳಲ್ಲಿ ದುರ್ಬಿàನು ಹಾಕಿ ಹುಡುಕಿ ದರೂ ಯಾವುದೇ ಚಟವಿರಲಿಲ್ಲ.
ನಮ್ಮ ಟೀಕೆಗಳೆಲ್ಲವನ್ನೂ ಎದುರಿಸಿ ದರು. ಅವರನ್ನು ಟೀಕಿಸಿಯೇ ನಾವು ಬೆಳೆದೆವು. “ನೋಡು ಅಗ್ನಿ, ನಿಮಗೆ ಮಿತಿ ಇಲ್ಲ. ನಾನು ಹಾಗಲ್ಲ. ಒಂದು ಸಿದ್ಧಾಂತದ, ಅದರಲ್ಲೂ ಒಂದು ಪೀಠದ ಜವಾಬ್ದಾರಿ ಇದೆ. ನಾನು ಆ ಚೌಕಟ್ಟಿನಲ್ಲಿಯೇ ವ್ಯವಹರಿಸಬೇಕು. ಒಂದು ಜವಾಬ್ದಾರಿ ನಮ್ಮಿಂದ ಅನೇಕ ತ್ಯಾಗಗಳನ್ನು ನಿರೀಕ್ಷಿಸುತ್ತದೆ’ ಎಂದು ಮನಗಾಣಿಸಿ ಹೇಳಿದ್ದರು.

ನನಗೆ ಚಿಕ್ಕಂದಿನಿಂದಲೂ ಹಿರಿಯ ರನ್ನು ಗೌರವಿಸುವ ಪರಿಪಾಠವಿದೆ. ಅವರನ್ನೂ ಗೌರವಿಸಿದ್ದೇನೆ, ಅವರೂ ನನ್ನನ್ನು ಅವರ ಮಗುವಿನ ಕಣ್ಣಿ
ನಿಂದ ಮಾತನಾಡಿಸುತ್ತಿದ್ದರು. ಅವರಲ್ಲಿ ನಾವು ಕಲಿಯುವುದು ಬಹಳವಿತ್ತು. ಅಂತಹ ಅಪೂರ್ವ ವ್ಯಕ್ತಿಯನ್ನು ಕಳೆದುಕೊಂಡೆವು.
ಸದಾ ಅವರನ್ನು ಸ್ಮರಿಸಿಕೊಳ್ಳುತ್ತೇನೆ ಎಂದು ಅಗ್ನಿ ಶ್ರೀಧರ್‌ ಹೇಳಿಕೊಂಡಿ ದ್ದಾರೆ.

Advertisement

ಶ್ರೀ ವಿಶ್ವೇಶತೀರ್ಥರು ಹೇಳಿದ ಅಲೆಗಾÕಂಡರನ ಕಥೆ
ಅನೇಕ ಸಾಮ್ರಾಜ್ಯಗಳನ್ನು ಗೆದ್ದ ಅಲೆಗಾÕಂಡರನಿಗೆ ದಾರಿಯ
ಲ್ಲೊಮ್ಮೆ ಸಾಧುಗಳ ಭೇಟಿಯಾಯ್ತು. ನೀನು ಇನ್ನೇನು ಗೆಲ್ಲಬೇಕು ಎಂದು ಅವರು ಪ್ರಶ್ನಿಸಿದರು. ಇಡೀ ಭಾರತವನ್ನು ಗೆಲ್ಲಬೇಕು ಎಂದನಂತೆ. ಮುಂದೆ? – ಸಾಧುಗಳ ಪ್ರಶ್ನೆ. ಜಗತ್ತನ್ನೇ ಗೆಲ್ಲುವೆ ಎಂದು ಉತ್ತರಿಸಿದನಂತೆ. ಎಲ್ಲ ಗೆದ್ದಾಯಿತು. ಆ ಬಳಿಕ ಏನು ಎಂಬ ಪ್ರಶ್ನೆಗೆ, ಸುಮ್ಮನಿರುವೆ ಎಂದನಂತೆ. ಆ ಕೆಲಸವನ್ನು ಮೊದಲೇ ಮಾಡಬಹುದಲ್ಲ ಎಂಬ ಸಾಧುಗಳ ಹಿತವಚನವನ್ನು ಕೇಳಿದ ಅಲೆಗಾÕಂಡರನಿಗೆ ಜ್ಞಾನೋದಯವಾಯ್ತು. ಅವನು ತನ್ನ ಕೊನೆಯ ದಿನಗಳಲ್ಲಿ “ನಾನು ಸತ್ತ ಮೇಲೆ ನನ್ನ ಎರಡೂ ಕೈಗಳನ್ನು ಮೇಲಕ್ಕೆ ಮಾಡಿಟ್ಟು ಮಣ್ಣುಮಾಡಿ’ ಎಂದನಂತೆ. ಅದರ ಅರ್ಥ ಎಷ್ಟೆಲ್ಲವನ್ನು ಗೆದ್ದರೂ ಕೊನೆಗೆ ಹೋಗುವುದು ಬರಿಗೈಯಲ್ಲಿ. ಈ ಎಚ್ಚರ ತನ್ನಂತಹ ಸಾಮ್ರಾಜ್ಯದಾಹಿಗಳು, ಧನದಾಹಿಗಳಿಗೆ ಉಂಟಾಗಲಿ ಎಂದು ಅವನು ಹಾಗೆ ಮಾಡಿದ್ದ. ಈ ಕಥೆಯನ್ನು ಪೇಜಾವರ ಶ್ರೀಗಳು ಹೇಳುತ್ತಿದ್ದರು ಎಂದು ಜಲಂಚಾರು ರಘುಪತಿ ತಂತ್ರಿ ನೆನಪಿಸಿಕೊಂಡಿದ್ದಾರೆ.

ಮೊದಲು ಅವರ ದೊಡ್ಡ ಪಾಲು
ಅಷ್ಟಮಠಗಳಿಗೆ ಸಂಬಂಧಿಸಿದ ಯಾವುದೇ ಕೆಲಸ ಕಾರ್ಯವಿದ್ದರೂ ಪೇಜಾವರ ಶ್ರೀಗಳ ದೊಡ್ಡ ಪಾಲು ಮೊದಲಾಗಿ ಬರುತ್ತಿತ್ತು. ಉದಾಹರಣೆಗೆ, ರಾಜಾಂಗಣ ಪಾರ್ಕಿಂಗ್‌ ಪ್ರದೇಶದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ದೊಡ್ಡದು. ಸಂಸ್ಕೃತ ಕಾಲೇಜಿನ ಕಟ್ಟಡ ನಿರ್ಮಾಣವಾಗುವಾಗ ತಮ್ಮ ಕೊಡುಗೆ ಯಾಗಿ 50 ಲ.ರೂ. ಮೊತ್ತ ನೀಡಿದ್ದರು. ತಮ್ಮ ದೊಡ್ಡ ಪಾಲು ಕೊಟ್ಟು ಅವರು ಮಾದರಿಯಾಗುತ್ತಿದ್ದರು ಎಂದು ಶ್ರೀಕೃಷ್ಣ ಮಠ ಪರಿಸರ ಪ್ರತಿಷ್ಠಾನ, ಸಂಸ್ಕೃತ ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ರತ್ನಕುಮಾರ್‌ ಸ್ಮರಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next