Advertisement

4,000 ಕಿ.ಮೀ. ದೂರ ವ್ಯಾಪ್ತಿಯ ಅಗ್ನಿ 4 ಕ್ಷಿಪಣಿ ಯಶಸ್ವಿ ಪರೀಕ್ಷೆ

04:48 PM Jan 02, 2017 | Team Udayavani |

ಹೊಸದಿಲ್ಲಿ : ನಾಲ್ಕು ಸಾವಿರ ಕಿ.ಮೀ. ದೂರವ್ಯಾಪ್ತಿಯ, ಅಣ್ವಸ್ತ್ರ ಒಯ್ಯಬಲ್ಲ, ಅಗ್ನಿ 4 ಛೇದಕ ಕ್ಷಿಪಣಿಯನ್ನು  ಒಡಿಶಾ ಕರಾವಳಿಯ ಬಾಲಸೋರ್‌ ಪರೀಕ್ಷಾ ಕೇಂದ್ರದಿಂದ ಉಡಾಯಿಸುವ ಮೂಲಕ ಭಾರತ ಇಂದು ಯಶಸ್ವೀ ಪರೀಕ್ಷೆಯನ್ನು ಕೈಗೊಂಡಿದೆ. 

Advertisement

ಅಗ್ನಿ 4 ಅಣ್ವಸ್ತ್ರ ವಾಹಕ ಕ್ಷಿಪಣಿಯು ಸುಮಾರು 20 ಮೀಟರ್‌ ಎತ್ತರವಿದ್ದು 17 ಟನ್‌ ಭಾರವಿದೆ. ಕಳೆದ ನವೆಂಬರ್‌ನಲ್ಲಿ ಅಗ್ನಿ 4 ಕ್ಷಿಪಣಿಯನ್ನು ಅಬ್ದುಲ್‌ ಕಲಾಂ ದ್ವೀಪ (ಹಿಂದಿನ ವೀಲರ್‌ ದ್ವೀಪ)ದಲ್ಲಿನ ಸಂಯುಕ್ತ ಪರೀಕ್ಷಾ ಕೇಂದ್ರದ ನಾಲ್ಕನೇ ಸಂಕೀರ್ಣದಿಂದ ಯಶಸ್ವಿಯಾಗಿ ಉಡಾಯಿಸಲಾಗಿತ್ತು. 

ಭಾರತದ ಕ್ಷಿಪಣಿ ಮಹಿಳೆ ಎಂದೇ ಖ್ಯಾತರಾಗಿರುವ ತೆಸ್ಸಿ ಥಾಮಸ್‌ ಅವರ ನೇತೃತ್ವದಲ್ಲಿ ಇಂದಿನ ಉಡಾವಣೆ ನಡೆದಿತ್ತು. ಅಗ್ನಿ 4 ಕ್ಷಿಪಣಿಯು ಇದು ಐದನೇ ಪ್ರಾಯೋಗಿಕ ಪರೀಕ್ಷೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next